ಕರಾವಳಿ

ಕೋಡಿ ಬೀಚ್ ಬಳಿ 100ಕ್ಕೂ ಅಧಿಕ ಕಡಲಾಮೆ ಮೊಟ್ಟೆ ಪತ್ತೆ, ಕಿನಾರೆಯಲ್ಲೇ ಹ್ಯಾಚರಿ ವ್ಯವಸ್ಥೆ

Pinterest LinkedIn Tumblr

ಕುಂದಾಪುರ: ಕುಂದಾಪುರ ಪುರಸಭಾ ವ್ಯಾಪ್ತಿಯ ಕೋಡಿ ಲೈಟ್‌ಹೌಸ್‌ ಬಳಿಯ ಕಡಲತೀರದಲ್ಲಿ 100ಕ್ಕೂ ಅಧಿಕ ಕಡಲಾಮೆ ಮೊಟ್ಟೆಗಳು ಸ್ಥಳೀಯರಿಗೆ ಕಂಡುಬಂದಿದ್ದು ಇವುಗಳ ಸಂರಕ್ಷಣೆಗಾಗಿ ತೀರದಲ್ಲೇ ಹ್ಯಾಚರಿ ವ್ಯವಸ್ಥೆ ಮಾಡಲಾಗಿದೆ.

ಸ್ಥಳೀಯ ಬಾಬು ಮೊಗವೀರ, ಗಣಪತಿ ಖಾರ್ವಿ ಮೊಟ್ಟೆಗಳನ್ನು ಕಂಡಿದ್ದು ಬಳಿಕ ಅರಣ್ಯ ಇಲಾಖೆ ಹಾಗೂ ಕಡಲಾಮೆ ಸಂರಕ್ಷಣೆಯಲ್ಲಿತೊಡಗಿಸಿಕೊಂಡಿರುವ ಅಂತಾರಾಷ್ಟ್ರೀಯ ಎಫ್‌ಎಸ್‌ಎಲ್‌ ಇಂಡಿಯಾ ಸಂಸ್ಥೆಯ ಸಹಕಾರದಿಂದ ಮೊಟ್ಟೆಗಳನ್ನು ರಕ್ಷಿಸಲಾಗಿದೆ.

ಎಫ್‌ಎಸ್‌ಎಲ್‌ ಇಂಡಿಯಾ ಸಂಸ್ಥೆಯ ಸಂಯೋಜಕರಾದ ದಿನೇಶ್‌ ಸಾರಂಗ, ವೆಂಕಟೇಶ್‌ ಶೇರುಗಾರ್‌, ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಇದರ ಭರತ್‌, ಸಂದೀಪ್‌ ಕೋಡಿ, ಉದಯ ಖಾರ್ವಿ, ಅನಿಲ್‌ ಖಾರ್ವಿ, ದಿನೇಶ್‌ ಕೋಡಿ ಅವರು ಕುಂದಾಪುರ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್‌ ರೆಡ್ಡಿ, ಎಸಿಎಫ್‌ ಲೋಹಿತ್‌, ಆರ್‌ಎಫ್‌ಒ ಪ್ರಭಾಕರ ಕುಲಾಲ್‌, ಸ್ಥಳೀಯ ಅರಣ್ಯ ಸಿಬ್ಬಂದಿ ಹಸ್ತ ಶೆಟ್ಟಿ ಮಾರ್ಗದರ್ಶನದಲ್ಲಿ ಮೊಟ್ಟೆಗಳ ಸಂರಕ್ಷಣೆ ನಡೆಸಲಾಗಿದೆ.

2017ರ ಬಳಿಕ ಕೋಡಿಯಲ್ಲಿ ಪ್ರಥಮ ಬಾರಿಗೆ ಅಪರೂಪದ ಆಲಿವ್‌ ರಿಡ್ಲೇ ಜಾತಿಗೆ ಸೇರಿದ ಕಡಲಾಮೆ ಮೊಟ್ಟೆ ಪತ್ತೆಯಾಗಿದೆ. ಮೊಟ್ಟೆಗಳ ಸಂರಕ್ಷಣೆ ಮತ್ತು ಬೆಳವಣಿಗೆ ಉದ್ದೇಶದಿಂದ ತೀರದಲ್ಲೇ ಹ್ಯಾಚರಿ ಮಾಡಲಾಗಿದ್ದು ಹ್ಯಾಚರಿ ವಿಕ್ಷಣೆ ನಡೆಸಲಾಗುತ್ತದೆ. ಹ್ಯಾಚರಿ ಅಥವಾ ಮೊಟ್ಟೆಗಳಿಗೆ ಹಾನಿ ಉಂಟುಮಾಡುವ ಯಾವುದೇ ಕೃತ್ಯ ನಡೆದರೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕುಂದಾಪುರ ಡಿಎಫ್‌ಒ ಆಶೀಶ್‌ ರೆಡ್ಡಿ ತಿಳಿಸಿದ್ದಾರೆ.

 

Comments are closed.