ಕರಾವಳಿ

ಗೃಹರಕ್ಷಕರು ದೇಶದ ಆಸ್ತಿ: ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರದಾನ ಅಭಿಯಾನದಲ್ಲಿ ಡಾ|| ಭರತ್ ಶೆಟ್ಟಿ

Pinterest LinkedIn Tumblr

ಮಂಗಳೂರು : ಜೆಲ್ಲೆಯ ಗೃಹರಕ್ಷಕರು ಕೋವಿಡ್-19 ಸಂದರ್ಭದಲ್ಲಿ ಬಹಳ ಉತ್ತಮ ಸೇವೆ ಸಲ್ಲಿಸಿದ್ದು, ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಉತ್ತರ ಶಾಸಕ ಭರತ್ ವೈ ಶೆಟ್ಟಿ ಹೇಳಿದರು.

ಅವರು ಮೇರಿಹಿಲ್‍ನ ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಜಿಲ್ಲಾ ಗೃಹರಕ್ಷಕ ದಳ, ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆ ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಮತ್ತು ಮಾನವ ಹಕ್ಕುಗಳ ಮಹಾ ಮೈತ್ರಿ ಜಂಟಿ ಆಶ್ರಯದಲ್ಲಿ ‘ಪ್ರಸಾದ್ ನೇತ್ರಾಲಯ’ ಇದರ ಸಹಕಾರದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ನೇತ್ರದಾನ ಅಭಿಯಾನ ಕಾರ್ಯಕ್ರಮದಲ್ಲಿ ಗೃಹ ರಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.

ಬೇರೆ ಬೇರೆ ವೃತ್ತಿಯಲ್ಲಿ ಇದ್ದರೂ ತಮ್ಮ ವೃತ್ತಿಯ ಜೊತೆಗೆ ಸಮಾಜಕ್ಕಾಗಿ ಏನಾದರೂ ಕಿಂಚಿತ್ತು ಕೊಡುಗೆ ನೀಡಬೇಕೆನ್ನುವ ಅವರ ಸೇವಾ ಮನೋಭಾವ ಇತರರಿಗೆ ಮಾದರಿ ಹಾಗೂ ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರು ದೇಶದ ಆಸ್ತಿ ಎಂದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ಪೌರರಕ್ಷಣಾ ತಂಡದ ಮುಖ್ಯ ಪಾಲಕರಾದ ಡಾ|| ಮುರಲೀಮೋಹನ್ ಇವರು ಮಾತನಾಡಿ, ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರಿಗೆ ಲಯನ್ಸ್ ಸೇವಾ ಸಂಸ್ಥೆ ಮತ್ತು ಮಾನವ ಹಕ್ಕುಗಳ ಮಹಾ ಮೈತ್ರಿ ಬೆನ್ನೆಲುಬಾಗಿ ನಿಂತಿದೆ.

ದಿನದ 24 ಗಂಟೆಗಳ ನಿಷ್ಕಾಮ ಸೇವೆ ಸಲ್ಲಿಸುವ ಗೃಹರಕ್ಷಕರ ಆರೋಗ್ಯ ದೃಷ್ಟಿಯಿಂದ ಈ ನೇತ್ರ ತಪಾಸಣಾ ಶಿಬಿರವನ್ನು ಪ್ರಸಾದ್ ನೇತ್ರಾಲಯದ ಮೂಲಕ ಆಯೋಜಿಸಲಾಗಿದೆ. ಎಲ್ಲಾ ಗೃಹರಕ್ಷಕರು ಇದರ ಸದುಪಯೋಗಪಡಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಉಮೇಶ್ ಪ್ರಭು, ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ಕೃಷ್ಣಾನಂದ.ಪೈ, ಪ್ರಸಾದ್ ನೇತ್ರಾಲಯದ ಡಾ|| ವಿಶಾಲ್ ಮತ್ತು ತಂಡ ಈ ಕಾರ್ಯಕ್ರಮವನ್ನು ನೆರವೇರಿಸಿದರು.

Comments are closed.