ಕರಾವಳಿ

ಕದ್ರಿ ಶ್ರೀಕ್ಷೇತ್ರದ ವಾರ್ಷಿಕ ಜಾತ್ರೆ : ರಿಕ್ಷಾ ಚಾಲಕ, ಮಾಲಕರಿಂದ ಹೊರೆಕಾಣಿಕೆ ಸಮರ್ಪಣೆ

Pinterest LinkedIn Tumblr

ಮಂಗಳೂರು: ಪುರಾಣ ಪ್ರಸಿದ್ದ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭ 7ನೇ ದಿನದಂದು ನಡೆಯುವ ಸಾರ್ವಜನಿಕ ಅನ್ನ ಸಂತರ್ಪಣೆಗೆ ಕದ್ರಿಯ ರಿಕ್ಷಾ ಚಾಲಕರು ಹಾಗೂ ಮಾಲಕರು ಅಲ್ಲದೆ ಪರಿಸರದ ದಾನಿಗಳಿಂದ ಸಂಗ್ರಹಿಸಿದ ಸುಮಾರು ರೂ. 90,000/- ಮೌಲ್ಯದ ಹಸಿರು ಹೊರೆಕಾಣಿಕೆಯನ್ನು ಸಲ್ಲಿಸಿದರು.

ಈ ಸಂದರ್ಭ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಮನೋಹರ್ ಶೆಟ್ಟಿ, ಶ್ರೀಮತಿ ಶಕಿಲಾ ಕಾವ, ಉದ್ಯಮಿ ದಿನೇಶ್ ರಾಜ್, ಕದ್ರಿ ದಿನೇಶ್ ದೇವಾಡಿಗ , ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘಟನೆಯ ಅಧ್ಯಕ್ಷ ಸುಧೀರ್ ಕೊಂಡಾಣ , ಗೌರವಾಧ್ಯಕ್ಷ ಹರೀಶ್ ಶೆಟ್ಟಿ ವಾಮಂಜೂರು, ಕಾರ್ಯದರ್ಶಿ ರವಿ ಕುಡುಪು, ಮನೋಜ್ ಬೋಂದೆಲ್, ಪ್ರಸಾದ್ ಆಚಾರ್ಯ ಕದ್ರಿ, ಪ್ರಭಾಕರ್ ಕದ್ರಿ, ಬಾಲಕೃಷ್ಣ ಮಿಜಾರ್,ಪುನೀತ್ ಮರೋಳಿ,ಮೋಹನ್ ಕೈಕಂಬ, ಮತ್ತಿತರರು ಉಪಸ್ಥಿತರಿದ್ದರು. ದೀಪ ಬೆಳಗಿ ಮೆರವಣಿಗೆಗೆ ಚಾಲನೆಯನ್ನು ನೀಡಲಾಯಿತು. ನಿರಂಜನ್ ಕೆ.ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

Comments are closed.