ಕರಾವಳಿ

ಪೆಟ್ರೋಲ್ ಸುರಿದು ಬಸ್ ಚಾಲಕನ ಹತ್ಯೆಗೆ ಯತ್ನ; ಆರೋಪಿಯ ಬಂಧನಕ್ಕೆ ವಿಎಚ್‌ಪಿ-ಬಜರಂಗದಳ ಆಗ್ರಹ

Pinterest LinkedIn Tumblr

ಮಂಗಳೂರು : ನಗರ ಹೊರವಲಯದ ಪಡೀಲ್ ಸಮೀಪದ ಪೈಸಲ್ ನಗರ ಎಂಬಲ್ಲಿ ನಿನ್ನೆ ಸಂಜೆ ಖಾಸಗಿ ಬಸ್ ಚಾಲಕ ಸಂಪತ್ ಪೂಜಾರಿ ಎಂಬವರ ಮೇಲೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ ಘಟನೆ ಬಗ್ಗೆ ವಿಶ್ವ ಹಿಂದು ಪರಿಷದ್ ಬಜರಂಗದಳ ತೀವ್ರ ಆಕ್ರೋಷ ವ್ಯಕ್ತಪಡಿಸಿದೆ.

ಬೈಕ್ ಸವಾರ ಫೈಸಲ್ ನಗರದ ಅಶ್ರಫ್‌ಗೆ ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಈ ಕೃತ್ಯ ನಡೆದಿದ್ದು, ಓವರ್ ಟೇಕ್ ಮಾಡುವ ನೆಪದಲ್ಲಿ ಸುವರ್ಣ 23 ನಂಬರ್ ರೂಟಿನ ಚಾಲಕರಾದ ಸಂಪತ್ ಪೂಜಾರಿಯನ್ನು ಅಶ್ರಫ್‌ ಪೆಟ್ರೋಲ್ ಸುರಿದು ಕೊಲೆ ಮಾಡಲು ಪ್ರಯತ್ನಿಸಿದ್ದು ಬಹಳ ಗಂಭೀರವಾದ ಪ್ರಕರಣವಾಗಿದ್ದು ಈ ಕೃತ್ಯವನ್ನು ವಿಶ್ವ ಹಿಂದು ಪರಿಷದ್ ಬಜರಂಗದಳ ಖಂಡಿಸುತ್ತದೆ ಎಂದು ಬಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇತ್ತೀಚಿನದಿನಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪೋಲೀಸರ ಹತ್ಯೆಯ ಯತ್ನ, NRC ಹೆಸರಿನಲ್ಲಿ ಗಲಭೆ, ಹನಿ ಟ್ರ್ಯಾಪ್, ಹಿಂದೂಗಳ ಮೇಲೆ ಹಲ್ಲೆ ಮುಂತಾದ ಗಂಬೀರವಾದ ಪ್ರಕರಣಗಳು ನಡೆಯುತ್ತಿದ್ದು ಮುಂದುವರಿದ ಭಾಗವಾದ ಬಸ್ ಚಾಲಕನಿಗೆ ಪೆಟ್ರೋಲ್ ಸುರಿದು ಹತ್ಯೆ ಮಾಡಲು ಪ್ರಯತ್ನಿಸಿದ್ದನ್ನು ನೋಡುವಾಗ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಸಿ ನಾಗರೀಕರನ್ನು ಆತಂಕಗೊಳಿಸುತಿದ್ದಾರೆ.

ಈ ಪ್ರಕರಣಕ್ಕೆ ಸಂಭಂದಪಟ್ಟ ಕೊಲೆಯತ್ನಕ್ಕೆ ಒಳಗಾದ ಚಾಲಕ ಸಂಪತ್ ಪೂಜಾರಿಯನ್ನು ವಿಶ್ವ ಹಿಂದು ಪರಿಷದ್ ಬಜರಂಗದಳದ ಪ್ರಮುಖರು ಬೇಟಿಮಾಡಿ ಧೈರ್ಯ ತುಂಬಿದರು, ಮತ್ತು ಆರೋಪಿ ಅಶ್ರಫ್ ನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ವಿಶ್ವ ಹಿಂದೂಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್, ವಿಶ್ವ ಹಿಂದೂಪರಿಷತ್ ಜಿಲ್ಲಾ ಗೋರಕ್ಷಾ ಪ್ರಮುಖ್ ಪ್ರದೀಪ್ ಪಂಪವೆಲ್, ಬಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ಮತ್ತು ನಾಗುರಿ ಪ್ರಖಂಡ ಕಾರ್ಯದರ್ಶಿ ಶರತ್ ಕೆಂಬಾರ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು ಎಂದು ಬಜರಂಗದಳ ಜಿಲ್ಲಾ ಸಂಚಾಲಕ್ ಪುನೀತ್ ಅತ್ತಾವರ ತಿಳಿಸಿದ್ದಾರೆ.

Comments are closed.