ಕರಾವಳಿ

ಮೊಗವೀರ ಸಮಾಜದ ಮುಂದಾಳು ಪಿ.ಧರ್ಮಪಾಲರು ಧರ್ಮದ ನಡೆ-ನುಡಿಯಲ್ಲಿ ಬದುಕು ಕಟ್ಟಿದವರು : ಸದಾನಂದ ಕೋಟ್ಯಾನ್

Pinterest LinkedIn Tumblr

ಮುಂಬಯಿ : ಮೊಗವೀರ ಸಹಕಾರಿ ಬ್ಯಾಂಕಿನ ಉಪಕಾರ್ಯಾಧ್ಯಕ್ಷ, ಹಾಗೂ ಮೊಗವೀರ ಸಮುದಾಯದ ಹಲವಾರು ಸಂಘಟನೆಗಳ ಮೂಲಕ ಜನಸಾಮಾನ್ಯರ ಸೇವೆ ಮಾಡುತ್ತಾ ಡಿ. 27 ರಂದು ದೇವರ ಪಾದ ಸೇರಿದ ದಿ. ,ಪಡುಬಿದ್ರಿ ಕಾಡಿಪಟ್ಣ ಧರ್ಮಪಾಲ ಇವರ ನಿಧನಕ್ಕೆ ಶ್ರದ್ದಾಂಜಲಿ ಸಭೆಯು ಅಂಧೇರಿ ಪಶ್ಚಿಮದ ಮೊಗವೀರ ಭವನ ದ ಶಾಮಿಲಿ ಜಿ ಶಂಕರ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆಯಿತು.

ಮೊಗವೀರ ಸಹಕಾರಿ ಬ್ಯಾಂಕಿನ ಕಾರ್ಯಾಧ್ಯಕ್ಷ ಸದಾನಂದ ಕೋಟ್ಯಾನ್ ಇವರು . ಪಿ. ಧರ್ಮಪಾಲ ರಿಗೆ ಪುಷ್ಪ ನಮನಗಳನ್ನು ಸಲ್ಲಿಸುತ್ತಾ ನಿಧನದ ಸುದ್ದಿ ಮುಂಜಾನೆ ನನ್ನ ಸಂಮಂಧಿಕರ ಮೊಬೈಲ್ ಕರೆಯ ಮೂಲಕ ಸುದ್ದಿ ತಲಪಿದ ನನಗೆ ಅವರ ನಿಧನದ ಬಗ್ಗೆ ನಂಬಲಾಗಲಿಲ್ಲ.

ಸದಾ ಹಸನ್ಮುಖಿ ಆಗಿದ್ದು ಯಾವುದೇ ಕೆಲಸ ಕಾರ್ಯಗಳನ್ನು ಸಮಯದಲ್ಲಿ ನಿರ್ವಹಿಸುತ್ತಿದ್ದರು .ಮೊಗವೀರ ಬ್ಯಾಂಕಿನ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದರು. ಬಹಳ ವರ್ಷಗಳಿಂದ ನನ್ನ ಮತ್ತು ಅವರ ಬಾಂಧವ್ಯ. ನಮ್ಮ ಬದುಕಿನಲ್ಲಿ ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡಬೇಕಿದ್ದರೆ ನಾಳೆಯ ದಿನಕ್ಕೆ ಕಾಯಬಾರದು ಇಂದೇ ಸುದಿನ ಎಂದು ಕೆಲಸ ಕಾರ್ಯಗಳನ್ನು ಮಾಡಬೇಕು ಮತ್ತೊಂದು ಜನುಮ ಇದೆ ಎನ್ನುವುದು ನಂಬಿಕೆ ಮಾತ್ರ ಈ ಎಲ್ಲಾ ವಿಚಾರಗಳು ಧರ್ಮ ಪಾಲರಿಗೆ ಅನ್ವಯಿಸುತ್ತದೆ.

ಧರ್ಮಪಾಲ್ ಅವರು ಯಾವುದೇ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಾ ಬಂದವರಾಗಿದ್ದಾರೆ.. ಶರಣರ ಗುಣವನ್ನು ಮರಣದಲ್ಲಿ ನದಲ್ಲಿ ಕಾಣಬಹುದು ಎಂಬುದು ಸತ್ಯ ಇಂದು ಅಪಾರ ಸಂಖ್ಯೆಯಲ್ಲಿ ಧರ್ಮಪಾಲರ ಅಭಿಮಾನಿಗಳು ನುಡಿನಮನಕ್ಕೆ ಸೇರಿರುದುಸಾಕ್ಷಿಯಾಗಿದೆ ಎಂದು ಹೇಳಿದರು.

ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಕೆ ಎಲ್ ಬಂಗೇರ ನುಡಿನಮನ ಸಲ್ಲಿಸುತ್ತಾ ಸಮಾಜದ ಬ್ಯಾಂಕಿನ ಸೇವಾಕಾರ್ಯಗಳನ್ನು ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಮಾಡುತ್ತ ಬಂದವರು. ಜವಾಬ್ದಾರಿಯನ್ನು ವಹಿಸಿಕೊಂಡರೆ ಅದಕ್ಕೆ ತಕ್ಕಂತೆ ತನ್ನ ಕರ್ತವ್ಯದ ಸೇವೆಯನ್ನು ಮಾಡುತ್ತಾ ಬಂದವರು ಎಂದು ನುಡಿದರು

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಮಾಜಿ ಅಧ್ಯಕ್ಷ ಸುರೇಶ್ ಕಾಂಚನ್ ಅವರು ಧರ್ಮಪಾಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಅಗಲುವಿಕೆ ಬ್ಯಾಂಕಿಗೆ ದೊಡ್ಡ ಮಟ್ಟಿನ ಹೊಡೆತ ಬಿದ್ದಂತಾಗಿದೆ.

ಹುಟ್ಟಿದ ಮನುಷ್ಯ ನಿಗೆ ಸಾವು ನಿಶ್ಚಿತ ವಾಗಿರುತ್ತದೆ ಆದರೆ ಅದು ಹೇಗೆ ಎಲ್ಲಿ ಆಗುತ್ತದೆ ಎನ್ನುವುದು ದೇವ ಸಂಕಲ್ಪವಾಗಿದೆ. ತನ್ನ ಬದುಕಿನ ಕೊನೆಯ ಕ್ಷಣವನ್ನು ತವರೂರಿನಲ್ಲಿ ಅದು ಕೂಡ ಕುಟುಂಬಿಕರಿಗೆ ಎಲ್ಲರಿಗೂ ಅವರ ಅಂತಿಮ ದರ್ಶನ ಪಡೆಯುವ ಅಂತ ರೀತಿಯಲ್ಲಿ ಭಗವಂತ ಅವರಿಗೆ ಸಾವನ್ನು ನೀಡಿದ್ದಾನೆ. ಅವರು ಎಂದು ಯಾರಿಗೂ ಕೆಡಕನ್ನು ಬಯಸಿದವರಲ್ಲ ಅಂಥ ಮಹಾನ್ ಚೇತನವನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ಭಗವಂತ ನೀಡಲಿ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮೊಗವೀರ ಯುವಕ ಸಂಘದ ದಿಲೀಪ್ ಕುಮಾರ್ ಮುಲ್ಕಿ . ಪಡುಬಿದ್ರಿ ಕಾಡಿಪಟ್ಣ ಮೊಗವೀರ ಮಹಾಸಭೆಯ ಅಧ್ಯಕ್ಷ ಹರೀಶ್ ಪುತ್ರನ್ ..ಕೋಟ್ಯಾನ್ ಮೂಲಸ್ಥಾನದ ಅಧ್ಯಕ್ಷ ಕೃಷ್ಣ ಕೋಟ್ಯಾನ್ ಮೊಗವೀರ ಬ್ಯಾಂಕಿನ ನಿರ್ದೇಶಕ ಡಿಡಿ ಕರ್ಕೇರ.. 9 ಹ್ಯಾಂಡ್ಸ್ ಫೌಂಡೇಶನ್ಅಧ್ಯಕ್ಷ ದಯಾನಂದ ಬಂಗೇರ. ಮೊಗವೀರ ವ್ಯವಸ್ಥಾಪಕ ಮಂಡಳಿಯ ಟ್ರಸ್ಟಿ ಅಜಿತ್ ಸುವರ್ಣ. ಉದ್ಯಮಿ ವೇದ ಪ್ರಕಾಶ್ ಶ್ರೀಯಾನ್. ಸಂಜೀವ ಸಾಲ್ಯಾನ್. ದಕ್ಷಿಣ ಕನ್ನಡ ಮೊಗವೀರ ಸಂಘದ ಪದಾಧಿಕಾರಿ. ಮತ್ತು ಮೊಗವೀರ ಬ್ಯಾಂಕಿನ ಯದುವೀರ್ ಪುತ್ರನ್. ನಾರಾಯಣ್ ಮೆಂಡನ್ .ರಮೇಶ್ ಸಾಲ್ಯಾನ್ ಡಿ ಬಿ ಪುತ್ರನ ಮತ್ತಿತರರು ಧರ್ಮಪಾಲ್ ಅವರ ಸೇವಾಕಾರ್ಯಗಳನ್ನು ಮತ್ತು ಸಮಾಜಕ್ಕೆ ನೀಡಿದ ಅವರ ಕೊಡುಗೆಗಳನ್ನು ನೆನಪಿಸಿ ನುಡಿನಮನ ವನ್ನು ಸಲ್ಲಿಸಿದ್ದರು.

ನುಡಿನಮನ ಸಭೆಯು ಮೊಗವೀರ ಸಹಕಾರಿ ಬ್ಯಾಂಕ್, ಮೊಗವೀರ ವ್ಯವಸ್ಥಾಪಕ ಮಂಡಳಿ, ಮೊಗವೀರ ಯುವಜನ ಸಂಘ, ಕಾಡಿಪಟ್ಣ ಮೊಗವೀರ ಸಭಾ, ಶ್ರೀಮದ್ಭಾರತ ಮಂಡಳಿ, ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ, 9 ಹ್ಯಾಂಡ್ಸ್ ಪೌಂಡೇಶನ್, ಕೋಟ್ಯಾನ್ಕರ್ ಮೂಲಸ್ಥಾನ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯಿತು.

ಸಭೆಯನ್ನು ಮೊಗವೀರ ವ್ಯವಸ್ಥಾಪಕ ಮಂಡಳಿಯ ಉಪಾಧ್ಯಕ್ಷ ಅಶೋಕ್ ಸುವರ್ಣ ನಿರ್ವಹಿಸಿ ಧರ್ಮಪಾಲ ರವರು ಬದುಕಿದ ರೀತಿ. ಸಮಾಜಕ್ಕೆ ಯಾವ ರೀತಿ ಎಲ್ಲಿ ಅವರು ತೊಡಗಿಸಿಕೊಂಡಿರುವ ಬಗ್ಗೆ ವಿವರವಾಗಿ ತಿಳಿಸಿದರು ಅಲ್ಲದೆ ಅವರ ದಾನ ಧರ್ಮಗಳು ಮೊಗವೀರ ಭವನಕ್ಕೆ ಅವರ ಯೋಗ ದನಗಳು ಹೀಗೆ ಎಲ್ಲವನ್ನೂ ವಿವರಿಸುತ್ತಾ ಕಾರ್ಯಕ್ರಮವನ್ನು ನಡೆಸಿದರು

ಶ್ರದ್ದಾಂಜಲಿ ಸಭೆಯಲ್ಲಿ ದಿವಂಗತರ ಕುಟುಂಬಿಕರು ಮತ್ತು ಅಭಿಮಾನಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಅವರ ಪುಷ್ಪ ನಮನವನ್ನು ಸಲ್ಲಿಸಿದರು

ದಿವಂಗತರು ಮುಂಬಯಿಯ ಹಾಗೂ ನಾಡಿನ ಹಲವಾರು ಸಂಘಟನೆಗಳಲ್ಲಿ ಪ್ರಮುಖ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಪಡುಬಿದ್ರಿ ಕಾಡಿಪಟ್ಣ ಮೊಗವೀರ ಸಭಾ ಮತ್ತು ಕೋಟ್ಯಾನ್ಕರ್ ಮೂಲಸ್ಥಾನ ಇದರ ಪದಾಧಿಕಾರಿಯಾಗಿ. ಕಾಡಿಪಟ್ಣ ವಿದ್ಯಾಪ್ರಚಾರಕ ಸಂಘದ ಸಕ್ರಿಯ ಸದಸ್ಯರಾಗಿದ್ದ ಮೊಗವೀರ ಯುವಕ ಸಂಘದ ಟ್ರಷ್ಟಿಯಾಗಿದ್ದರು.

ಮೊಗವೀರ ವ್ಯವಸ್ಥಾಪಕ ಮಂಡಳಿಯ ಪದಾಧಿಕಾರಿಯೂ ಆಗಿದ್ದರು. ಉಡುಪಿ ಜಿಲ್ಲೆಯ ಪಡುಬಿದ್ರೆ ಯವರಾದ ಧರ್ಮಪಾಲರು ಯೂನಿಯನ್ ಬ್ಯಾಂಕಿನ ವಿಭಾಗೀಯ ಮಹಾಪ್ರಭಂಧಕರಾಗಿ ನಿವೃತ್ತಿ ಹೊಂದಿದ ಬಳಿಕ ಮೊಗವೀರ ಬ್ಯಾಂಕಿನ ನಿರ್ದೇಶಕರಾಗಿ ನಂತರ ಬ್ಯಾಂಕಿನ ಉಪಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಚಿತ್ರ ವರದಿ ದಿನೇಶ್ ಕುಲಾಲ್

Comments are closed.