ಕರಾವಳಿ

ತೋಟದ ಕೆಲಸದಾತನಿಂದ 7 ವರ್ಷದ ಬಾಲಕಿಯ ಅತ್ಯಾಚಾರ: ಪೋಕ್ಸೋ ಕಾಯ್ದೆಯಡಿ ಆರೋಪಿ ಬಂಧನ

Pinterest LinkedIn Tumblr

ಕುಂದಾಪುರ: ಮನೆಯೊಂದರ ಕೆಲಸದಾಕೆಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅದೇ ಮನೆಯ ತೋಟದ ಕೆಲಸದಾತ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹನುಮಂತ ಎಂಬ ಆರೋಪಿಯನ್ನು ಕು‌ಂದಾಪುರ ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.

ಕುಂದಾಪುರ ನಗರದ ಹೊರವಲಯದಲ್ಲಿನ ಮನೆಯೊಂದರಲ್ಲಿ ಗಡಿ ಹಾವೇರಿ ಮೂಲದ ಮಹಿಳೆಯೊಬ್ಬರು ಕೆಲಸ ಮಾಡಿಕೊಂಡಿದ್ದು ತನ್ನ 7 ವರ್ಷ ಪ್ರಾಯದ ಮಗಳೊಂದಿಗೆ ತೋಟದ ಮನೆಯಲ್ಲಿ ವಾಸವಿದ್ದರು. ಇವರು ಕೆಲಸಕ್ಕಿದ್ದ ಮನೆಯ ತೋಟದ ಕೆಲಸ ಮಾಡುವ ಆರೋಪಿ ಹನುಮಂತ ವಾಸದ ಮನೆಗೆ ಬಂದು ಮನೆಯ ಹಾಲ್‌ನಲ್ಲಿದ್ದ ಅಪ್ರಾಪ್ತ ಬಾಲಕಿ ಮೈಮೇಲಿನ ಬಟ್ಟೆಗಳನ್ನು ವಿವಸ್ತ್ರಗೊಳಿಸಿ ಆಕೆ ಮೇಲೆ ಅತ್ಯಾಚಾರವೆಸಗಿ ಲೈಂಗಿಕ ದೌರ್ಜನ್ಯ ನೀಡಿದ್ದಾನೆ.

ಈ ಬಗ್ಗೆ ಸಂತ್ರಸ್ತ ಬಾಲಕಿ ತಾಯಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪಿಎಸ್ಐ ಸದಾಶಿವ ಗವರೋಜಿ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ.

Comments are closed.