ಕರಾವಳಿ

ಆನೆಗುಡ್ಡೆಯಲ್ಲಿ ಆಪ್ತರು ನಡೆಸಿದ ಸಹಸ್ರ ನಾಳಿಕೇರ ಗಣಯಾಗದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಭಾಗಿ

Pinterest LinkedIn Tumblr

ಕುಂದಾಪುರ: ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ಸಿಎಂ ಉಪಸ್ಥಿತಿಯಲ್ಲಿ ಮಂಗಳವಾರ ಸಹಸ್ರ ನಾಳಿಕೇರ ಗಣಯಾಗ ನೆರವೇರಿಸಲಾಯಿತು.

ಖುದ್ದು ಸಿಎಂ ಯಡಿಯೂರಪ್ಪ ಗಣಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು. ಅವರ ಪುತ್ರ ಸಂಸದ ಬಿ.ವೈ ರಾಘವೇಂದ್ರ ಹಾಗೂ ಸಿಎಂ ಕುಟುಂಬಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಲ್ಲಡ್ಕ ಪ್ರಭಾಕರ್ ಭಟ್, ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ ಸಾಥ್ ನೀಡಿದ್ರು.

ಯಾಗ ಹಮ್ಮಿಕೊಂಡ ಗೋಪಾಡಿ ಮೂಲದ ಜಿ.ಪಿ ರಾಘವೇಂದ್ರ ರಾವ್ ಹಾಸನ ಅವರ ಕುಟುಂಬದ ಪ್ರದೀಪ್ ಅವರು ಮಾತನಾಡಿ, ಮುಖ್ಯಮಂತ್ರಿಗಳು ಆನೆಗುಡ್ಡೆ ಕ್ಷೇತ್ರದ ಮಹಾ ಭಕ್ತರು, ನಮ್ಮ ತಂದೆಯವರು ಮೂರನೇ ಬಾರಿ ಆನೆಗುಡ್ಡೆಯಲ್ಲಿ ಗಣಹೋಮ ನಡೆಸುತ್ತಿದ್ದಾರೆ. ಮೂರು ಬಾರಿಯೂ ಯಡಿಯೂರಪ್ಪನವರು ಹೋಮದಲ್ಲಿ ಭಾಗಿಯಾಗಿದ್ದಾರೆ, ಪ್ರತಿಬಾರಿಯೂ ಶ್ರದ್ಧೆ-ಭಕ್ತಿಯಿಂದ ಬಂದು ಪಾಲ್ಗೊಳ್ಳುತ್ತಾರೆ, ಐದು ದಶಕಗಳ ಹಿಂದೆ ನಾವು ಶಿರಾಳಕೊಪ್ಪದಲ್ಲಿ ಇದ್ದಾಗನಿಂದಲೂ ಒಡನಾಟವಿದೆ, ನಮ್ಮ ಕುಟುಂಬಕ್ಕೆ ಯಡಿಯೂರಪ್ಪ ತುಂಬಾ ಆತ್ಮೀಯರು, ನಮ್ಮ ಕುಟುಂಬದ ನಡುವಿನ ಸ್ನೇಹ ಇವತ್ತಿಗೂ ಮುಂದುವರೆದಿದೆ, ವಿಶ್ವಾಸದಿಂದ ಯಾವತ್ತೂ ನಮ್ಮ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ, ನಮ್ಮ ಕುಟುಂಬದ ಎಲ್ಲಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗುತ್ತಿದ್ದಾರೆ, ಲೋಕಕಲ್ಯಾಣಾರ್ಥ ನಾವು ಯಾಗ ನಡೆಸುತ್ತಿದ್ದೇವೆ, ಸಿಎಂ ರಾಜಕೀಯ ಅಭಿವೃದ್ಧಿಗೂ ನಾವು ಪ್ರಾರ್ಥಿಸುತ್ತೇವೆ ಯಡಿಯೂರಪ್ಪನವರು ಇನ್ನೂ ಶ್ರೇಯಸ್ಸು ಹೊಂದಲಿ ಎಂದು ಬಯಸುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ರು.

Comments are closed.