ರಾಷ್ಟ್ರೀಯ

ಬಾಲಕಿ ಮೇಲೆ ಬರೋಬ್ಬರಿ 38 ಮಂದಿಯಿಂದ ಲೈಂಗಿಕ ದೌರ್ಜನ್ಯ !

Pinterest LinkedIn Tumblr

ತಿರುವನಂತಪುರಂ: ಕೇರಳದಲ್ಲಿ ಅತ್ಯಂತ ಹೀನ ಘಟನೆಯೊಂದು ಬೆಳಕಿಗೆ ಬಂದಿದೆ. 17 ವರ್ಷದ ಬಾಲಕಿ ಮೇಲೆ ಬರೋಬ್ಬರಿ 38 ಮಂದಿ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಅತ್ಯಾಚಾರ ನಡೆದ ಹಿನ್ನೆಲೆ ಮಲಪ್ಪುರಂನ ರಕ್ಷಣಾ ಕೇಂದ್ರದಲ್ಲಿ ಬಾಲಕಿ ವಾಸ್ತವ್ಯವಿದ್ದಳು ಕಳೆದ ವರ್ಷ ಅಲ್ಲಿಂದ ಬಿಡುಗಡೆಯಾಗಿ ಹೊರಬಂದಿದ್ದಳು.

ಬಂದ ನಂತರ ಇದೀಗ 38 ಮಂದಿ ತನ್ನ ಮೇಲೆ ವಿವಿಧ ರೀತಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ಇತ್ತೀಚೆಗೆ ನಿರ್ಭಯಾ ಕೇಂದ್ರದಲ್ಲಿ ನಡೆದ ಸಮಾಲೋಚನಾ ಕಾರ್ಯಕ್ರಮದಲ್ಲಿ ಬಾಲಕಿ ತನಗಾದ ಲೈಂಗಿಕ ಕಿರುಕುಳದ ಬಗ್ಗೆ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪ್ರಾಪ್ತ ಬಾಲಕಿಯ ಮೇಲೆ 2016ರಲ್ಲಿ ಮೊದಲ ಬಾರಿಗೆ ಅತ್ಯಾಚಾರ ನಡೆದಿತ್ತು. ಆಗ ಆಕೆಗೆ 13 ವರ್ಷವಾಗಿತ್ತು. ಈ ವೇಳೆ ಪೊಕ್ಸೊ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇನ್ನು ಅತ್ಯಾಚಾರ ಹಿನ್ನೆಲೆ ಬಾಲಕಿಯನ್ನು ಜಿಲ್ಲೆಯ ಆಶ್ರಯ ಮನೆಗೆ ಸ್ಥಳಾಂತರಿಸಲಾಗಿತ್ತು. 2017 ರಲ್ಲಿ ಆಶ್ರಯ ಮನೆಯಿಂದ ಆಕೆಗೆ ಮನೆಗೆ ಹೋಗಲು ಅನುಮತಿ ನೀಡಲಾಗಿತ್ತು, ಆದರೆ ಕೆಲ ದಿನಗಳಲ್ಲೇ ಆಕೆಯ ನೆರೆಹೊರೆಯ ವ್ಯಕ್ತಿಯೊಬ್ಬರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಮತ್ತೆ ಆಕೆ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆ ಆಕೆಯನ್ನು ನಿರ್ಭಯಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಇನ್ನು ಕೊರೊನಾ ಲಾಕ್‌ಡೌನ್‌ ವೇಳೆ ಬಾಲಕಿಯನ್ನು ನಿರ್ಭಯಾ ಕೇಂದ್ರದ ಆಡಳಿತ ಮಂಡಳಿ, ಮನೆಗೆ ಕಳುಹಿಸಿತ್ತು. ಆದರೆ ಏಕಾಏಕಿ ಬಾಲಕಿ ನಾಪತ್ತೆಯಾಗಿದ್ದಳು. ನಾಪತ್ತೆಯಾಗಿದ್ದ ವೇಳೆ ಬೇರೆ ಬೇರೆ ರೀತಿಯಲ್ಲಿ ಬರೋಬ್ಬರಿ 38 ಮಂದಿಯಿಂದ ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿ ಬಾಲಕಿ ತಿಳಿಸಿದ್ದಾಳೆ. ಈ ಸಂಬಂಧ ಪೊಲೀಸರು 33 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ.

Comments are closed.