ಕರಾವಳಿ

ಕಠಿಣ ಸಂಕಷ್ಟದ ಸಂದರ್ಭದಲ್ಲಿ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದ ಚಂದ್ರಹಾಸ್ ಗುರುಸ್ವಾಮಿ, ಸತೀಶ್ ಗುರುಸ್ವಾಮಿ ಹಾಗೂ ಶಿಷ್ಯವೃಂದ

Pinterest LinkedIn Tumblr

ಮುಂಬೈ : ಕೊರೋನಾ ದಿಂದಾಗಿ ಶಬರಿಮಲೆ ಯಾತ್ರೆ ನಡೆಸುವುದು ಕಷ್ಟಕರವಾಗಿದೆ ಕೇರಳ ಸರಕಾರ ಶಬರಿಮಲೆಯ ಅಯ್ಯಪ್ಪ ದರ್ಶನಕ್ಕೆ ಕಟ್ಟುನಿಟ್ಟಿನ ಕ್ರಮವನ್ನು ಮಾಡಿರುವುದರಿಂದ ಯಾತ್ರೆ ಮಾಡುವವರಿಗೆ ಅಪಾರವಾದ ರೀತಿಯ ಸಂಕಷ್ಟ ಎದುರಾಗಿದೆ.

ಆದರೆ ಭಕ್ತರು ಮಾತ್ರ ಅಯ್ಯಪ್ಪನ ದರ್ಶನ ಮಾಡಬೇಕು ಎನ್ನುವ ಇಚ್ಚೆಯಿಂದ ದೇಶದಾದ್ಯಂತವಿರುವ ಅಯ್ಯಪ್ಪ ಭಕ್ತರು ಶಬರಿಮಲೆ ಯಾತ್ರೆ ನಡೆಸಿದ್ದಾರೆ.

ಅದರಲ್ಲೂ ಮುಂಬೈಯ ಅಂಧೇರಿ ಅಯ್ಯಪ್ಪ ಭಕ್ತ ವೃಂದದ ಸಂಸ್ಥಾಪಕ ಚಂದ್ರಸ್ ಗುರುಸ್ವಾಮಿ ಇನ್ನಂಜೆ ಮತ್ತು ಶ್ರೀ ಅಯ್ಯಪ್ಪಸ್ವಾಮಿ ಭಕ್ತ ವೃಂದ ಹೋಟೆಲ್ ಉಡುಪಿ ದಾರುಖಾನ ರೇರೋಡ್ ಮುಂಬಯಿ*ಶ್ರೀ ಸತೀಶ್ ಗುರುಸ್ವಾಮಿ ಇವರ ಶಿಷ್ಯ ವೃಂದದವರು ಕಲಿಯುಗವರದ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆದಿದ್ದಾರೆ.

ಕಾಲಿಗೆ ಪಾದುಕೆಯನ್ನು ಧರಿಸದೆ ಜೀವನ ನಡೆಸುತ್ತಿರುವ ಚಂದ್ರಸ್ ಗುರುಸ್ವಾಮಿ ಮುಂಬೈ ಮತ್ತು ಇನ್ನಂಜೆ ಶಂಕರಪುರದಿಂದ ಪಾದಯಾತ್ರೆಯ ಮೂಲಕ ಶಬರಿಮಲೆಗೆ ಯಾತ್ರೆ ನಡೆಸಿ ಅಯ್ಯಪ್ಪ ಸ್ವಾಮಿಯ ಪರಮಭಕ್ತರಾಗಿ ನೂರಾರು ಕಡುಬಡತನದ ಕುಟುಂಬಗಳಿಗೆ ಸಹಾಯ ಹಸ್ತವನ್ನು ಕೂಡ ನೀಡುತ್ತ ಬಂದಿರುವ ಈ ಬಾರಿ ಕೂಡ ತನಗೆ ಯಾವುದೇ ಸಂಕಷ್ಟಗಳು ಎದುರಾದರೂ ಕೂಡ ಅಯ್ಯಪ್ಪನ ದರ್ಶನ ಮಾಡಲೇಬೇಕೆಂದು ವೃತವನ್ನು ಆಚರಿಸಿ ಮುಂಬೈಯ ಗೊರೆಗಾವ್ ಇನಲ್ಲಿ ಮತ್ತು ಇನ್ನಂಜೆಯ ಶಂಕರಪುರದಲ್ಲಿ ಅಯ್ಯಪ್ಪ ಮಹಾಪೂಜೆಯನ್ನು ನಡೆಸಿ ನೂರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಸಿ ಶಬರಿಮಲೆ ಯಾತ್ರೆ ನಡೆಸಿದ್ದಾರೆ.

ಮತ್ತೊಂದೆಡೆ ರೇ ರೋಡಿನ ಧಾರ್ಮಿಕ ಮುಂದಾಳು ಎಂದೆ ಜನಮಾನಸದಲ್ಲಿ ಪ್ರಸಿದ್ಧಿ ಪಡೆದ ಹಾಗೂ ಸಾವಿರಾರು ಭಕ್ತರ ಹೊಂದಿಕೊಂಡಿರುವ ಸತೀಶ್ ಗುರುಸ್ವಾಮಿ ರೆ ರೋಡಿನಲ್ಲಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆಯನ್ನು ನಡೆಸಿ ಅಯ್ಯಪ್ಪನಿಗೆ ಮಹಾಪೂಜೆಯನ್ನು ನೆರವೇರಿಸಿ ತಮ್ಮ ಶಿಷ್ಯ ವೃಂದದವರಿಗೆ ಶಬರಿಮಲೆ ಯಾತ್ರೆಯನ್ನು ನಡೆಸಿದ್ದಾರೆ.
ವರದಿ ದಿನೇಶ್ ಕುಲಾಲ್

Comments are closed.