ಕರಾವಳಿ

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

Pinterest LinkedIn Tumblr

ಮಂಗಳೂರು : ಸ್ವಾಮಿ ವಿವೇಕಾನಂದರ ಬದುಕನ್ನೇ ಆದರ್ಶವಾಗಿಸಿ ರಾಷ್ಟ್ರಕಾರ್ಯದಲ್ಲಿ ತೊಡಗಿಸಿಕೊಂಡರೆ ಜಗದ್ಗುರು ಭಾರತ ಕಲ್ಪನೆ ಸಾಕಾರಕ್ಕೆ ಹೆಚ್ಚೇನೂ ಸಮಯ ಬೇಕಾಗುವುದಿಲ್ಲ. ಆ ನಿಟ್ಟಿನಲ್ಲಿ ರಾಷ್ಟ್ರದ ಯುವಜನತೆ ಚಿಂತಿಸಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಅವರು ಹೇಳಿದರು.

ಮಂಗಳೂರು ನಗರ ದಕ್ಷಿಣ ಬಿಜೆಪಿ ಯುವಮೋರ್ಚಾ ಹಾಗೂ ವೈದ್ಯಕೀಯ ಪ್ರಕೋಷ್ಠ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಚಿಲಿಂಬಿಗುಡ್ಡೆ ಶ್ರೀ ರಾಮಂಜನೇಯ ಯುವಕ ಮಂಡಲದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಭಾರತದ ತರುಣರಲ್ಲಿ ರಾಷ್ಟ್ರಾಭಿಮಾನ ಬೆಳೆಸುವಲ್ಲಿ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದವರು. ಕಬ್ಬಿಣದ ಸ್ನಾಯುಗಳುಳ್ಳ, ಉಕ್ಕಿನ ನರಮಂಡಲವಿರುವ, ಮಿಂಚಿನ ಬುದ್ಧಿವಂತಿಕೆಯ ನೂರು ಯುವಕರು ಭಾರತದ ಭವಿಷ್ಯ ಬದಲಾಯಿಸಬಲ್ಲರು ಎನ್ನುವ ವಿವೇಕಾನಂದರ ಮಾತಿನಲ್ಲಿ ಭವಿಷ್ಯದ ಭಾರತ ಕಂಡಿತ್ತು ಎಂದರು.

ಜಗತ್ತು ಭಾರತವನ್ನು ಅನಾರಿಕರು ಎನ್ನುತ್ತಿದ್ದ ಕಾಲದಲ್ಲಿ ಅಮೇರಿಕಾದ ವೇದಿಕೆಯ ಮೇಲೆ ಭಾರತದ ಜ್ಞಾನ, ಸಂಪದ್ಭರಿತ ಇತಿಹಾಸ, ಧಾರ್ಮಿಕ ಸಹಿಷ್ಣುತೆಯ ಕುರಿತು ಜಗತ್ತಿನ ಗಮನ ಸೆಳೆದಿದ್ದರು. ಇಂದಿನ ಯುವ ಪೀಳಿಗೆ ಸ್ವಾಮಿ ವಿವೇಕಾನಂದರ ಚಿಂತೆಗಳನ್ನು ಅಳವಡಿಸಿಕೊಂಡು ರಾಷ್ಟ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.ಯುವಮೋರ್ಚಾದ ಕಾರ್ಯಕರ್ತರು ವ್ಯಸನ ಮುಕ್ತ ಭಾರತ, ಸ್ವಚ್ಛ – ಸ್ವಸ್ಥ ಭಾರತದ ಪರಿಕಲ್ಪನೆಯೊಂದಿಗೆ ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.

ವೈದ್ಯಕೀಯ ಪ್ರಕೋಷ್ಟದ ಶ್ರೀ ಜಿ ಕೆ ಭಟ್ ಹಾಗು ಯುವಮೋರ್ಚಾದ ಅಧ್ಯಕ್ಷರಾದ ಸಚಿನ್ ರಾಜ್ ರೈ ಅವರು ಕಾರ್ಯಕ್ರಮ ನೇತ್ರತ್ವ ವಹಿಸಿದ್ದರು. ಇದೇ ವೇಳೆ ಅತಿಥಿಗಳಿಗೆ ಸ್ವಾಮೀ ವಿವೇಕಾನಂದರ “ಕೊಲೊಂಬೋದಿಂದ ಅಲ್ಮೊರಕ್ಕೆ ” ಪುಸ್ತಕವನ್ನು ಸ್ಮರಣಿಕೆಯಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮನಪಾ ಸದಸ್ಯರಾದ ಜಯಲಕ್ಷ್ಮಿ ಶೆಟ್ಟಿ, ಬಿಜೆಪಿ ಮುಖಂಡರಾದ ಶ್ರೀ ಜಿ.ಕೆ ಭಟ್, ಸಚಿನ್ ರಾಜ್ ರೈ, ವಿನ್ಯಾಸ್ ಶೆಟ್ಟಿ, ಅಮಿತ್ ರಾಜ್, ರಮೇಶ್ ಹೆಗ್ಡೆ, ಸುರೇಖಾ ರಾಜ್, ಚರಿತ್ ಪೂಜಾರಿ, ರಾಮಾಂಜನೇಯ ಯುವಕ ಮಂಡಲದ ಗೌರವಾದ್ಯಕ್ಷರಾದ ಗುರುದತ್ ಕೋಟ್ಯಾನ್, ಅದ್ಯಕ್ಷರಾದ ದಿನೇಶ್, , ಹಾಗೂ ಯುವಮೋರ್ಚಾದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷರು ( ಪ್ರಭಾರಿ) ವಿನ್ಯಾಸ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಅಮಿತ್ ರಾಜ್, ರಮೇಶ್ ಹೆಗ್ಡೆ, ಕಾರ್ಯದರ್ಶಿ ಸುರೇಖಾ ಹೆಗ್ಡೆ, ಮಾಹಾಶಕ್ತಿ ಕೇಂದ್ರದ ಉಪಾಧ್ಯಕ್ಷರಾದ ಚರಿತ್ ಪೂಜಾರಿ, ಮನಪಾ ಸದಸ್ಯರಾದ ಜಯಲಕ್ಷ್ಮೀ ವಿ ಶೆಟ್ಟಿ, ರಾಮಂಜನೇಯ ಯುವಕ ಮಂಡಲದ ಗೌರವಾಧ್ಯಕ್ಷ ಗುರುದತ್ ಕೋಟ್ಯಾನ್, ಅಧ್ಯಕ್ಷ ದಿನೇಶ್, ಡಾ. ಗಣೇಶ್ ಪ್ರಸಾದ್ ಹಾಗೂ ಯುವಮೋರ್ಚಾದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Comments are closed.