ಕರಾವಳಿ

ಸಂಕಷ್ಟದ ಬಂದುಗಳಿಗೆ ಸ್ಪಂದಿಸುವ ಕೆಲಸ ನಡೆಯಲಿ : ಮುಂಬೈ ಪನ್ವೇಲ್ ನಗರ ಸೇವಕ ಸಂತೋಷ್ ಜಿ. ಶೆಟ್ಟಿ

Pinterest LinkedIn Tumblr

ನವಿಮುಂಬಯಿ : ಪನ್ವೇಲ್ ಮಹಾನಗರ ಪಾಲಿಕೆಯಲ್ಲಿ ಸತತ ಮೂರು ಬಾರಿ ನಗರ ಸೇವಕರಾಗಿ ಆಯ್ಕೆಗೊಂಡಿರುವ ಬಂಟ್ವಾಳ ಸಜಿಪ ಮೂಲದ ಸಂತೋಷ್ ಜಿ. ಶೆಟ್ಟಿ ಯವರು ಪನ್ವೇಲ್ ಮಹಾನಗರ ಪಾಲಿಕೆಯ ಸಭಾಪತಿಯಾಗಿ ಆಯ್ಕೆಗೊಂಡಿದ್ದ ಈ ಸಂದರ್ಭದಲ್ಲಿ ಅವರನ್ನು ಕುಲಾಲ ಸಂಘ ಮುಂಬಯಿಯ ಪದಾಧಿಕಾರಿಗಳು ಗೌರವಿಸಿ ಅಭಿನಂದಿಸಿದರು.

ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ ಕುಲಾಲರು ಸಂತೋಷ್ ಜಿ. ಶೆಟ್ಟಿಯವರ ಸಾಧನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಸಾಮಾನ್ಯ ಕಾರ್ಯಕರ್ತನಾಗಿ ಸಮಾಜ ಸೇವೆಯ ಮೂಲಕ ಹಾಗೂ ಬಡವರ ಕಷ್ಟ ದುಖಗಳನ್ನು ಅರಿತು ಸ್ಪಂದಿಸುತ್ತಿದ್ದು ಈ ತನಕ ರಾಜಕೀಯದಲ್ಲಿ ಯಶಸ್ಸನ್ನುಗೊಳಿಸಿದವರು ಸಂತೋಷ್ ಜಿ. ಶೆಟ್ಟಿಯವರು.

ಬಂಟ್ವಾಳ ಗ್ರಾಮದಲ್ಲಿಯೂ ಕುಲಾಲ ಸಮಾಜ ಬಂದುಗಳಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಅಲ್ಲದೆ ಪನ್ವೆಲ್ ಪರಿಸರದಲ್ಲಿನ ನಮ್ಮ ಸಮಾಜ ಬಾಂಧವರಿಗೆ ವಿವಿಧ ರೀತಿಯಲ್ಲಿ ಸಹಕರಿಸಿ ಯಶಸ್ಸಿಯಾಗಿದ್ದಾರೆ. ಇವರು ನಮ್ಮ ಸಮಾಜದ ಮೇಲಿಟ್ಟಿರುವ ಪ್ರೀತಿ ಗೌರವಕ್ಕೆ ಹಾಗೂ ಸಭಾಪತಿಯಾಗಿ ಆಯ್ಕೆಗೊಂಡುದಕ್ಕೆ ಸಂತೋಷವಾಗುತ್ತಿದೆ ಎಂದರು.

ಜ್ಯೋತಿ ಕೋ ಅಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಷ್ ಬಿ. ಸಾಲ್ಯಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಾ ಸಂತೋಷ್ ಜಿ. ಶೆಟ್ಟಿ ಯವರ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕುಲಾಲ ಸಂಘದ ಗೌರವವನ್ನು ಸ್ವೀಕರಿಸಿ ಮಾತನಾಡಿದ ಸಂತೋಷ್ ಜಿ. ಶೆಟ್ಟಿ ಯವರು ತಾನು ಬಾಲ್ಯದಿಂದಲೇ ಕುಲಾಲ ಸಮಾಜ ಬಾಂದವರ ಜೊತೆ ನಂಟನ್ನು ಬೆಳೆಸಿದವ. ಬಂಟ್ವಾಳದ ಸಜಿಪದಲ್ಲಿ ಅಪಾರ ಸಂಖ್ಯೆಯಲ್ಲಿ ಕುಲಾಲ ಬಂದುಗಳಿದ್ದು ಅವರ ನಿಷ್ಟೆ ಮತ್ತು ಪ್ರಮಾಣಿಕ ಸೇವೆಯನ್ನು ಹತ್ತಿರದಿಂದ ಕಂಡಿರುವೆನು.

ಮುಂಬಯಿ ಮಹಾನಗರದಲ್ಲಿ ಕುಲಾಲ ಸಂಘದ ಸೇವಾ ಕಾರ್ಯವನ್ನು ಗಮನಿಸುತ್ತಾ ಬಂದಿರುವೆನು. ಬದುಕಲ್ಲಿ ಯಶಸ್ಸಿಯನ್ನು ಕಾಣಲು ಕೇವಲ ಶ್ರೀಮಂತಿಗೆ ಮಾತ್ರವಲ್ಲಆತನ ನಡೆ, ಪ್ರಾಮಾಣಿಕ ಸೇವೆಗಳು ಸೇರಿದೆ. ಕುಲಾಲ ಸಂಘಕ್ಕೆ ನನ್ನ ಪ್ರೋತ್ಸಾಹ ಯಾವತ್ತೂ ಇದೆ ಎಂದರು.

ಕುಲಾಲ ಸಂಘದ ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು, ಪ್ರಧಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್, ಸಂಘದ ನವಿ ಮುಂಬಯಿ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಎಲ್ ಆರ್ ಮೂಲ್ಯ, ಕರ್ನಾಟಕ ಸಂಘ ಪನ್ವೆಲ್ ಇದರ ಅಧ್ಯಕ್ಷ ಕೋಲ್ಪೆ ಧನಂಜಯ ಶೆಟ್ಟಿ, ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಗುರು ಶೆಟ್ಟಿ ಕಾಪು , ಸ್ವಾಮಿ ಸದಾನಂದ ಶೆಟ್ಟಿ, (ಹೋಟೇಲ್ ಸ್ವಾಮಿ), ಜಯ ಪೂಜಾರಿ ಗುರುಸ್ವಾಮಿ, ಗಣೇಶ್ ಶೆಟ್ಟಿ ವೀರ್ ಪಾರ್ಕ್, ರವಿ ಶೆಟ್ಟಿ ಹೋಟೇಲ್ ಸುಭಾಷ್ ಪಂಜಾಬ್, ಸುದರ್ಶನ್ ಶೆಟ್ಟಿ, ಗಿರೀಷ್ ಶೆಟ್ಟಿ ಗಿರಿರಾಜ್, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಂತೋಷ್ ಜಿ. ಶೆಟ್ಟಿ ಯವರನ್ನು ಅಭಿನಂದಿಸಿದರು.

ವರದಿ : ದಿನೇಶ್ ಕುಲಾಲ್, ಮುಂಬಾಯಿ

Comments are closed.