ಕರಾವಳಿ

ಎರಡನೇ ಹಂತದ ಚುನಾವಣೆ : ದ.ಕ.ಜಿಲ್ಲೆಯಲ್ಲಿ ಶೇ.78.70 ರಷ್ಟು ಮತದಾನ – ಎಲ್ಲೆಲ್ಲಿ ಎಷ್ಟು- ಇಲ್ಲಿದೆ ವಿವರ

Pinterest LinkedIn Tumblr

 ಮಂಗಳೂರು ಡಿಸೆಂಬರ್ 29 : ಜಿಲ್ಲೆಯಲ್ಲಿ ಡಿಸೆಂಬರ್ 27ರಂದು ಎರಡನೇ ಹಂತದ ಮತದಾನವು ನಡೆದಿದ್ದು, ಬೆಳ್ತಂಗಡಿಯ 46, ಪುತ್ತೂರಿನ 22, ಸುಳ್ಯದ 25 ಹಾಗೂ ಕಡಬದ 21 ಗ್ರಾಮ ಪಂಚಾಯತ್‍ಗಳು ಸೇರಿದಂತೆ ಒಟ್ಟು 114 ಗ್ರಾಮ ಪಂಚಾಯತಿಗಳಿಗೆ 244539 ಪುರುಷರು, 247337 ಮಹಿಳೆಯರು ಸೇರಿದಂತೆ ಒಟ್ಟು 491876 ಮತದಾರರಿದ್ದು ಕ್ರಮವಾಗಿ 193689 ಪುರುಷರು, 193418 ಮಹಿಳೆಯರು ಸೇರಿದಂತೆ ಒಟ್ಟು 387107 ಮತ ಚಲಾಯಿಸಿ, ಶೇ 78.70% ಮತದಾನ ನಡೆದಿದೆ.

ಬೆಳ್ತಂಗಡಿ ತಾಲೂಕಿನಲ್ಲಿ 101600 ಪುರುಷರು, 102164 ಮಹಿಳೆಯರು ಸೇರಿದಂತೆ ಒಟ್ಟು 203764 ಮತದಾರರಿದ್ದು ಕ್ರಮವಾಗಿ 79963 ಪುರುಷರು, 79875 ಮಹಿಳೆಯರು ಸೇರಿದಂತೆ ಒಟ್ಟು 159838 ಮತ ಚಲಾಯಿಸಿ, ಶೇ. 78.44% ಮತದಾನ ನಡೆದಿದೆ.

ಪುತ್ತೂರು ತಾಲೂಕಿನಲ್ಲಿ ಒಟ್ಟು 53226 ಪುರುಷರು, 54265 ಮಹಿಳೆಯರು ಸೇರಿದಂತೆ ಒಟ್ಟು 107491 ಮತದಾರರಿದ್ದು ಕ್ರಮವಾಗಿ 42062 ಪುರುಷರು, 42407 ಮಹಿಳೆಯರು ಸೇರಿದಂತೆ ಒಟ್ಟು 84469 ಮತ ಚಲಾಯಿಸಿದ್ದು ಶೇ. 78.58% ಮತದಾನ ನಡೆದಿದೆ.

ಸುಳ್ಯ ತಾಲೂಕಿನಲ್ಲಿ ಒಟ್ಟು 44418 ಪುರುಷರು, 44893 ಮಹಿಳೆಯರು ಸೇರಿದಂತೆ ಒಟ್ಟು 89311 ಮತದಾರರಿದ್ದು ಕ್ರಮವಾಗಿ 36197 ಪುರುಷರು, 35737 ಮಹಿಳೆಯರು ಸೇರಿದಂತೆ ಒಟ್ಟು 71934 ಮತ ಚಲಾಯಿಸಿದ್ದು ಶೇ. 80.54% ಮತದಾನ ನಡೆದಿದೆ

ಕಡಬ ತಾಲೂಕಿನಲ್ಲಿ ಒಟ್ಟು 45295 ಪುರುಷರು, 46015 ಮಹಿಳೆಯರು ಸೇರಿದಂತೆ ಒಟ್ಟು 91310 ಮತದಾರರಿದ್ದು ಕ್ರಮವಾಗಿ 35467 ಪುರುಷರು, 35399 ಮಹಿಳೆಯರು ಸೇರಿದಂತೆ ಒಟ್ಟು 70866 ಮತ ಚಲಾಯಿಸಿದ್ದು ಶೇ. 77.61% ಮತದಾನ ನಡೆದಿದೆ.

Comments are closed.