ಕರಾವಳಿ

ಡಿಸೆಂಬರ್. 29ರಂದು ಮಂಗಳೂರಿನಲ್ಲಿ ‘ಪೇಜಾವರ ವಿಶ್ವೇಶತೀರ್ಥ ನಮನ’ -2020

Pinterest LinkedIn Tumblr

ಮಂಗಳೂರು : ಹರಿಪಾದಗೈದಿರುವ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣಾರ್ಥ ಕಲ್ಕೂರ ಪ್ರತಿಷ್ಠಾನವು ಪೇಜಾವರ ವಿಶ್ವೇಶತೀರ್ಥ ನಮನ-2020 ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಡಿ. 29, ಮಂಗಳವಾರ ಸಂಜೆ 4 ಗಂಟೆಗೆ, ಕದ್ರಿ ಮಲ್ಲಿಕಾ ಬಡವಾಣೆಯ ಮಂಜು ಪ್ರಾಸಾದದ ‘ವಾದಿರಾಜ ಮಂಟಪದಲ್ಲಿ’ ಸಮಾರಂಭ ನಡೆಯಲಿದ್ದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಉಪಸ್ಥಿತರಿದ್ದು ಅನುಗ್ರಹ ಭಾಷಣ ಮಾಡಲಿರುವರು.

ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಭಾಗವಹಿಸಲಿದ್ದು. ಈ ಸಂದರ್ಭ ಗುರುವಂದನೆ, ಸಾಧಕ ಶ್ರೇಷ್ಠರಿಗೆ, ‘ಪೇಜಾವರ ಶ್ರೀ ವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ’ ಪ್ರದಾನ ಹಾಗೂ ನುಡಿನಮನ ಸಲ್ಲಿಸಲಾಗುವುದು.

ಎಸ್. ಪ್ರದೀಪ ಕುಮಾರ ಕಲ್ಕೂರ

ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಮೋಹನ ಆಳ್ವ, ವೇ. ಮೂ ಶ್ರೀ ಗಣಪತಿ ಅಚಾರ್ಯ ಕದ್ರಿ, ತುಳು ಜನಪದ ಸಾಹಿತಿ ಪ್ರಾಧ್ಯಾಪಕ ಡಾ. ಗಣೇಶ್ ಅಮೀನ್ ಸಂಕಮಾರ್ ಹಾಗೂ ಖ್ಯಾತ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೋ ಸಂಪಾಜೆ ವಿಶ್ವೇಶತೀರ್ಥ ಶ್ರೀಪಾದಂಗಳವರ ಸಂಸ್ಮರಣಾ ಭಾಷಣ ಮಾಡಲಿರುವರು.

ಕೋವಿಡ್-19ರ ಸರಕಾರದ ನಿಯಮಾನುಸಾರ ಕಾರ್ಯಕ್ರಮ ಆಯೋಜಿಸಲಾಗಿದ್ದು ಭಜನೆ, ಸಂಗೀತ, ಸತ್ಸಂಗ ಇತ್ಯಾದಿ ನೆರವೇರಲಿರುವುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ತಿಳಿಸಿದ್ದಾರೆ.

Comments are closed.