ಕರಾವಳಿ

ಮಲ್ಪೆಯಿಂದ ತೆರಳಿದ ಬೋಟಿನಿಂದ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

Pinterest LinkedIn Tumblr

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಬೋಟಿನಲ್ಲಿದ್ದ ತಮಿಳುನಾಡು ಮೂಲದ ಮೀನುಗಾರ ಸಮುದ್ರಕ್ಕೆ ಬಿದ್ದಿದ್ದು ನಾಪತ್ತೆಯಾದ ಬಗ್ಗೆ ದೂರು ನೀಡಲಾಗಿದೆ. ಜಯಪ್ರಕಾಶ ತಮಿಳುನಾಡು (35) ಕಾಣೆಯಾದ ಮೀನುಗಾರ.

ಉಡುಪಿ ಜಿಲ್ಲೆಯ ಮಲ್ಪೆಯ ಸತೀಶ ಶೆಟ್ಟಿ ಎನ್ನುವರ ಶ್ರೀ ದೇವಿ ಚಾಮುಂಡೇಶ್ವರಿ ಎಂಬ ಮೀನುಗಾರಿಕಾ ಬೋಟಿನಲ್ಲಿ ಸಿ. ಧನಶೇಖರ್, ಕೇಶವ, ಉಮೇಶ, ರಾಜಕುಮಾರ ಹಾಗೂ ಜಯಪ್ರಕಾಶ ತಮಿಳುನಾಡುಅವರು ಮಲ್ಪೆ ಬಂದರಿನಿಂದ ಹೊರಟು ಸಮುದ್ರಕ್ಕೆ ತೆರಳಿ ಸುಮಾರು 27 ಮಾರು ದೂರ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಸಮುದ್ರದಲ್ಲಿ ತುಪಾನ್ ಜಾಸ್ತಿ ಆಗಿ ಗಾಳಿಯ ರಭಸಕ್ಕೆ ಬೋಟು ವಾಲಿದಂತಾಗಿ ಬೋಟಿನೊಳಗಿದ್ದ ಜಯಪ್ರಕಾಶ ತಮಿಳುನಾಡು ಅವರು ಬೋಟಿನಿಂದ ಸಮುದ್ರದ ನೀರಿಗೆ ಬಿದ್ದಿದ್ದಾರೆ. ಇತರ ಮೀನುಗಾರರು ರಕ್ಷಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಅಲ್ಲದೇ ಇತರ ಬೋಟುಗಳೊಂದಿಗೆ ಸೇರಿ ಸಮುದ್ರದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

Comments are closed.