ಕರಾವಳಿ

‘ಹಳ್ಳಿ ಫೈಟ್’: ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿದೆ ಗ್ರಾ.ಪಂ ಮತದಾನ

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಉಡುಪಿ ಬೈಂದೂರು, ಬ್ರಹ್ಮಾವರ, ಹೆಬ್ರಿ ಗ್ರಾಮ ಪಂಚಾಯತ್ ಚುನಾವಣೆ ಮಂದಗತಿಯಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ವಿರಳ ಸಂಖ್ಯೆಯಲ್ಲಿ ಮತದಾನ ಕೇಂದ್ರಗಳಿಗೆ ಮತದಾರರು ಬರುತ್ತಿದ್ದು, ಹಿರಿಯ ನಾಗರಿಕರು ಬೆಳಿಗ್ಗಿನಿಂದಲೇ ಮತದಾನದ ಪ್ರಕ್ರಿಯೆಯಲ್ಲಿ ಉತ್ಸಾಹ ತೋರುತ್ತಿರುವುದು ಕಂಡು ಬರುತ್ತಿದೆ.

ಮಧ್ಯಾಹ್ನ 1 ಗಂಟೆ ಹೊತ್ತಿಗೆ ಉಡುಪಿಯಲ್ಲಿ 49.21%, ಹೆಬ್ರಿ 53.68% ಬ್ರಹ್ಮಾವರ 49.77% ಬೈಂದೂರು 46.53% ಆಗಿದ್ದು ಉಡುಪಿ ಜಿಲ್ಲೆಯ ನಾಲ್ಕು ಕಡೆ 49.24 ಶೇಖಡಾ ಮತದಾನವಾಗಿದೆ‌.

ಕೋವಿಡ್ ನಿಯಮ ಪಾಲನೆ…..
ಪ್ರತೀ ಮತದಾನ ಕೇಂದ್ರಗಳಲ್ಲೂ ಕೋವಿಡ್ ನಿಯಮ ಪಾಲನೆ ಮಾಡಲಾಗಿದ್ದು ಮಾಸ್ಕ್ ಧಾರಣೆ, ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿದೆ. ಮತ ಚಲಾವಣೆಗೂ ಮೊದಲೇ ಸ್ಯಾನಿಟೈಜ್, ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿದ್ದು ಮಾಸ್ಕ್ ಧರಿಸದೆ ಬಂದವರನ್ನು ಮತದಾನ ಕರ್ತವ್ಯದಲ್ಲಿರುವ ಸಿಬಂದಿಗಳು ವಾಪಾಸ್ ಕಳುಹಿಸುತ್ತಿರುವ ದೃಶ್ಯ ಕಂಡು ಬಂದಿದೆ.

ಮತದಾನಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದು, ಎಸ್ಪಿ, ಡಿವೈಎಸ್ಪಿ ನೇತೃತ್ವದಲ್ಲಿ ಸಿಪಿಐ, ತರಬೇತಿ ಹಂತದ ಪೊಲೀಸ್ ಸಿಬ್ಬಂದಿಗಳು ಸೇರಿ ಕೆಎಸ್ಆರ್ಪಿ ತುಕಡಿ, ಮತ್ತು ಡಿಆರ್ಸಿ ಸಿಬ್ಬಂದಿ ಸೇರಿ ಸುರಕ್ಷಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಬೈಂದೂರು ಕಿರಿಮಂಜೇಶ್ವರ ಕೇಂದ್ರದಲ್ಲಿ 95 ರ ವೃದ್ದೆಯಿಂದ ಮತದಾನ
ಕಿರಿಮಂಜೇಶ್ವರ ತೆಂಕಮನೆ ನಿವಾಸಿ ತುಂಗಮ್ಮ ತನ್ನ 95 ವರ್ಷದ ಇಳಿ ವಯಸ್ಸಿನಲ್ಲಿ ಕೂಡ ಮನೆಯವರೊಂದಿಗೆ ಬಂದು ಉತ್ಸಾಹದಿಂದ ಮತ ಚಲಾಯಿಸಿದರು. ಪ್ರತೀ ಚುನಾವಣೆಯಲ್ಲೂ ತಪ್ಪದೇ ಮತದಾನ ಮಾಡುವ ತುಂಗಮ್ಮ, ಮತದಾನ ಮಾಡುವುದು ನನ್ನ ಹಕ್ಕು ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿಕೊಂಡರು.

Comments are closed.