ಕರ್ನಾಟಕ

ಮುಂಬೈ ಕ್ಲಬ್‌ಗೆ ಪೊಲೀಸರ ದಾಳಿ: ಕ್ರಿಕೆಟಿಗ ಸುರೇಶ್ ರೈನಾ, ಹೃತಿಕ್ ರೋಷನ್ ಪತ್ನಿ ಸಹಿತಾ ಹಲವರ ಬಂಧನ-ಬಿಡುಗಡೆ

Pinterest LinkedIn Tumblr

ಮುಂಬೈ, ಡಿಸೆಂಬರ್ 22: ಮುಂಬೈಯ ಕ್ಲಬ್‌ವೊಂದಕ್ಕೆ ದಾಳಿ ಮಾಡಿರುವ ಮುಂಬೈ ಪೊಲೀಸರು ಭಾರತ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ, ಸುಸೇನ್ ಖಾನ್ ಮತ್ತು ಗಾಯಕ ಗುರು ರಾಂಧವ ಸೇರಿದಂತೆ ಸುಮಾರು 34 ಮಂದಿಯನ್ನು ಬಂಧಿಸಿದ್ದಾರೆ.

ಕೋವಿಡ್ ನಿಯಮವನ್ನು ಗಾಳಿಗೆ ತೂರಿ ಮುಂಬೈ ಡ್ರಾಗನ್ ಫ್ಲೈ ಕ್ಲಬ್​ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಇದನ್ನು ಅರಿತ ಪೊಲೀಸರು ಇಲ್ಲಿಗೆ ರೈಡ್ ಮಾಡಿದ್ದು ಸುರೇಶ್ ರೈನಾ, ಖ್ಯಾತ ಗಾಯಕ ಗುರು ರಾಂಧವ ಸೇರಿದಂತೆ ಒಟ್ಟು 34 ಜನರನ್ನು ನಿನ್ನೆ ತಡ ರಾತ್ರಿ ಬಂಧಿಸಿದ್ದಾರೆ.

ಸದ್ಯ ಸುರೇಶ್ ರೈನಾ ಜಾಮೀನಿನಲ್ಲಿ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಬಂಧಿಸಿರುವ 34 ಜನರಲ್ಲಿ ಏಳು ಜನ ಕ್ಲಬ್​ನಲ್ಲಿ ಕೆಲಸ ನಿರ್ವಹಿಸುತ್ತಿದ್ದವರು ಎನ್ನಲಾಗಿದೆ. ಈ ಬಗ್ಗೆ ಎಸ್​ಆರ್​​ ಪಿ ಸಹಾರ್ ಪೊಲೀಸರು ಖಚಿತ ಮಾಹಿತಿ ನೀಡಿದ್ದಾರೆ.

ಮುಂಬೈ ವಿಮಾನ ನಿಲ್ದಾಣದ ಸಮೀಪದ ಡ್ರ್ಯಾಗನ್‌ಫ್ಲೈ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು, ಸುರೇಶ್ ರೈನಾ, ನಟ ಹೃತಿಕ್ ರೋಷನ್ ಪತ್ನಿ ಸುಸೇನ್ ಖಾನ್ ಮತ್ತು ಗುರು ರಾಂಧವ ಸೇರಿದಂತೆ ಅನೇಕರನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಸುರೇಶ್ ರೈನಾ ಮತ್ತು ಇತರರು ಸೇರಿದಂತೆ 34 ಜನರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 188, 269, 34ರ ಅಡಿ, ಬಾಂಬೆ ಪೊಲೀಸ್ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗ ಕಾಯ್ದೆಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಡ್ರ್ಯಾಗನ್‌ಫ್ಲೈ ಕ್ಲಬ್‌ನಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಿರಲಿಲ್ಲ ಮತ್ತು ಕ್ಲಬ್ ನಡೆಸಲು ನೀಡಲಾಗಿದ್ದ ಸಮಯದ ಗಡುವನ್ನು ಮೀರಿ ತೆರೆಯಲಾಗಿತ್ತು ಎಂದು ಸಹಾರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಸುರೇಶ್ ರೈನಾ ಸದ್ಯ ದೇಶೀಯ ಕ್ರಿಕೆಟ್​ಗೆ ಅಣಿಗೊಂಡಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಸಯದ್ ಮುಷ್ತಾಕ್ ಅಲಿ ಟ್ರೋಫಿ ಸೀಮಿತ ಓವರ್​ಗಳ ಟೂರ್ನಿಯಲ್ಲಿ ಅವರು ಆಡಲಿದ್ದಾರೆ.

ಇದೇ ಆಗಸ್ಟ್ ತಿಂಗಳಲ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದರು. ಕೆಲ ವರ್ಷಗಳ ಕಾಲ ಅವರು ರಣಜಿ ಸೇರಿದಂತೆ ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಆಡಲಿದ್ದಾರೆ. ಯುಎಇಯಲ್ಲಿ ನಡೆದ ಈ ಋತುವಿನ ಐಪಿಎಲ್​ನಲ್ಲಿ ವೈಯಕ್ತಿಕ ಕಾರಣದಿಂದ ಆಡದ ಅವರು ಮುಂದಿನ ವರ್ಷದ ಐಪಿಎಲ್​ನಲ್ಲಿ ಲಭ್ಯ ಇರಲಿದ್ದಾರೆ.

Comments are closed.