ಮಂಗಳೂರು ಮಹಾನಗರ ಪಾಲಿಕೆಯ ಮರೋಳಿ ವಾರ್ಡಿನ ಬಜ್ಜೋಡಿ ಮುಖ್ಯರಸ್ತೆಯಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಮರೋಳಿ ವಾರ್ಡಿಗೆ ಕೆಲ ಸಮಯದ ಹಿಂದೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಜ್ಜೋಡಿ ಪ್ರಮುಖ ರಸ್ತೆಯ ಅವ್ಯವಸ್ಥೆ, ಮಳೆಗಾಲದ ಸಂದರ್ಭದಲ್ಲಿ ಕೃತಕ ನೆರೆ ಉಂಟಾಗುವ ಕುರಿತು ಸಾರ್ವಜನಿಕರು ಹಾಗೂ ಸ್ಥಳೀಯ ಮುಖಂಡರು ತಿಳಿಸಿದ್ದರು.
ಹಾಗಾಗಿ ಬಜ್ಜೋಡಿ ಮುಖ್ಯ ರಸ್ತೆಯಲ್ಲಿ ತಡೆಗೋಡೆ, ಚರಂಡಿ, ಮೋರಿ ಹಾಗೂ ಕಾಂಕ್ರೀಟೀಕರಣದ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸಲಾಗಿತ್ತು. ಸದ್ಯ ಕಾಮಗಾರಿ ಪೂರ್ಣಗೊಂಡಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸ್ಥಳೀಯರು ನೀಡಿದ ಸಹಕಾರಕ್ಕಾಗಿ ಧನ್ಯವಾದ ಅರ್ಪಿಸುವುದಾಗಿ ಶಾಸಕ ಕಾಮತ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶಕಿಲಾ ಕಾವಾ, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಉಪಾಧ್ಯಕ್ಷ ರಮೇಶ್ ಕಂಡೆಟ್ಟು, ಪೂರ್ವ ಮಹಾಶಕ್ತಿಕೇಂದ್ರ ಅದ್ಯಕ್ಷರಾದ ಅಜಯ್, ಮರೋಳಿ ಶಕ್ತಿಕೇಂದ್ರ ಅದ್ಯಕ್ಷರಾದ ಜಗದೀಶ್ ಶೆಣೈ, ಜಗನ್ನಾಥ್ ಅಡುಮರೋಳಿ, ಮಂಡಲ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಿರಣ್ ಮರೋಳಿ,ಶಕ್ತಿ ಕೇಂದ್ರ ಉಪಾಧ್ಯಕ್ಷ ಪ್ರಶಾಂತ್ ಮರೋಳಿ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಪ್ರದೀಪ್ ಕುಮಾರ್, ಮಹಿಳಾ ಮೋರ್ಚಾ ಕೋಶಾಧಿಕಾರಿ ಮಾಲತಿ ಶೆಟ್ಟಿ,ಬಿಜೆಪಿ ಮುಖಂಡರಾದ ರಾಘು, ಸತೀಶ್, ಮೋಹನ್,ವಸಂತ್ ಜೆ ಪೂಜಾರಿ, ಸರಳ, ಬಾಲಕೃಷ್ಣ ಸುವರ್ಣ, ಅರುಣ್ ಶೆಟ್ಟಿ, ಪುರುಷೋತ್ತಮ್, ವೀರ ಮಾರುತಿ ಮಂದಿರದ ಅದ್ಯಕ್ಷರು ಹಾಗೂ ಸದಸ್ಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.