ಕರಾವಳಿ

ಬಿಜೈ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಆಶ್ರಯದಲ್ಲಿ ವಿಶೇಷ ಕ್ರಿಸ್ಮಸ್ ಸೌಹಾರ್ದ ಕೂಟ

Pinterest LinkedIn Tumblr

ಮಂಗಳೂರು: ನಗರದ ಬಿಜೈ, ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಆಶ್ರಯದಲ್ಲಿ ವಿಶೇಷ ಕ್ರಿಸ್ಮಸ್ ಸೌಹಾರ್ದ ಕೂಟ ಚರ್ಚ್ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆಯಿತು.

ಕ್ರಿಸ್ಮಸ್ ಟ್ರೀಯ ದೀಪ ಬೆಳಗಿಸುವ ಮೂಲಕ ಸಭಾಧ್ಯಕ್ಷತೆ ವಹಿಸಿದ್ದ, ಚರ್ಚ್ ನ ಪ್ರಧಾನ ಧರ್ಮಗುರುಗಳು ವಂ. ಡಾ. ಜೆ. ಬಿ. ಸಲ್ದಾನ ಮತ್ತು ಅತಿಥಿ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿದ ವಂ.ಫಾ. ಡಾ. ಜೆ.ಬಿ. ಸಲ್ದಾನ ಮಾತನಾಡಿ, ಭಗವಾನ್ ಯೇಸುಸ್ವಾಮಿ ಯಾವಾಗಲು ನಮ್ಮೊಂದಿಗೆ ಇದ್ದಾನೆ ಎಂಬುದು ನಮ್ಮ ನಂಬಿಕೆ, ಯೆಸು ಸ್ವಾಮಿಯೇ ನಮ್ಮೊಂದಿಗಿದ್ದು ಕಾಪಾಡುತ್ತಾನೆ ಎನ್ನುವ ವಿಶ್ವಾಸದಲ್ಲಿ ನಾವು ಧರ್ಮ ಮಾರ್ಗದಲ್ಲಿ ಧೈರ್ಯದಿಂದ ಮುಂದುವರೆಯ ಬಹುದು ಎಂದು ಆಶಿರ್ವಚನದ ಸಂದೇಶ ನೀಡಿದರು.

ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ, ಲಯನ್ಸ್ ಜಿಲ್ಲಾ 317 D ಯ ರಾಜ್ಯಪಾಲರು, ಲಯನ್ Mjf ಡಾ. ಗೀತ್ ಪ್ರಕಾಶ್, ಲಯನ್ಸ್ ವತಿಯಿಂದ 4 ವಾಕರ್ ಗಳನ್ನು ವಿತರಿಸಿ, ಪ್ರೀತಿ ಯಾವಾಗಲು ನಮ್ಮಲ್ಲಿರಲಿ, ಶಾಂತಿ ಎಲ್ಲೆಡೆ ನೆಲೆಸಲಿ ಎಂದು ಕ್ರಿಸ್ಮಸ್ ಶುಭ ಹಾರೈಸಿದರು.

ಕೊಡಿಯಾಲ್ ಬೈಲ್ ವಾರ್ಡ್ ನ ಸದಸ್ಯ  ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮೇಯರ್, ದೇರೆಬೈಲ್ ದಕ್ಷಿಣ ವಾರ್ಡ್ ನ ಸದಸ್ಯ ಶಶಿಧರ್ ಹೆಗ್ಡೆ, ಬಿಜೈ ವಾರ್ಡ್ ಸದಸ್ಯ ಲ್ಯಾನ್ಸಿ ಲೆಟ್ ಪಿಂಟೊ, ಕದ್ರಿ ಪದವು ವಾರ್ಡ್ ನ ಸದಸ್ಯ, ಜಯಂತ್ ಅಂಚನ್, ಮುಖ್ಯ ಅತಿಥಿಗಳಾಗಿ ಸೌಹಾರ್ದ ಕ್ರಿಸ್ಮಸ್ ಕೂಟಕ್ಕೆ ಶುಭ ಹಾರೈಸಿ, ಸೌಹಾರ್ದ ಸಂದೇಶ ನೀಡಿದರು.

ಲೂರ್ಡ್ಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ವಂ. ಫಾ. ರೋಬರ್ಟ್ ಡಿಸೋ’ಜ ಚರ್ಚ್ ನ ಸಹಾಯಕ ಧರ್ಮಗುರುಗಳು, ವಂ. ಫಾ. ಪ್ರಮೋದ್ ಕ್ರಾಸ್ತ, ವಂ.ಫಾ. ವಿಶ್ವಾಸ್ ಜೋಯ್ ಮಿಸ್ಕಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಶ್ರೀ ಅಶೋಕ್ ಪಿಂಟೊ ಸ್ವಾಗತಿಸಿದರು. ಶ್ರೀ ರಾಬಿನ್ ಕುಟಿನೋ ನಿರೂಪಿಸಿದರು. ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಗೋಮ್ಸ್ ವಂದಿಸಿದರು.

Comments are closed.