ಕರಾವಳಿ

ಕೆ‌ಎಸ್‌ಆರ್‌ಟಿಸಿಯಿಂದ ಮಂಗಳೂರು- ತಿರುಪತಿಗೆ ವೋಲ್ವೋ ಬಸ್ ಪುನಃ ಪ್ರಾರಂಭ

Pinterest LinkedIn Tumblr

ಮಂಗಳೂರು, ಡಿಸೆಂಬರ್ 19 : ಮಂಗಳೂರು ಬಸ್ಸು ನಿಲ್ದಾಣದಿಂದ ಮಂಗಳೂರು-ತಿರುಪತಿಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ಕ್ಲಬ್ ಕ್ಲಾಸ್ ವೋಲ್ವೋ ವಾಹನಗಳೊಂದಿಗೆ ಸಾರಿಗೆ ಸೌಲಭ್ಯವನ್ನು ಡಿಸೆಂಬರ್ 20ರಿಂದ ಆರಂಭಿಸಲಾಗುವುದು.

ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಾಗಿ ನಿಗಮದ ಎಸ್‍ಒಪಿ (Standard operating procedure) ರಲ್ಲಿಯ ನಿರ್ದೇಶನಗಳಂತೆ ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಅವಕಾಶಗಳನ್ನು ಕಲ್ಪಿಸಲಾಗುವುದು.

ಸದರಿ ಮಾರ್ಗದ ಸಾರಿಗೆ ಕಾರ್ಯಾಚರಣೆಯ ವಿವರ:

ಕ್ಲಬ್ ಕ್ಲಾಸ್ ವೋಲ್ವೋ ಮಂಗಳೂರಿನಿಂದ 8.50 ಗಂಟೆಗೆ ಹೊರಟು ತಿರುಪತಿಗೆ 11 ಗಂಟೆಗೆ ತಲುಪಲಿದೆ. (ವಯಾ ಹಾಸನ, ಬೆಂಗಳೂರು), ತಿರುಪತಿಯಿಂದ 6 ಗಂಟೆಗೆ ಹೊರಟು ಮಂಗಳೂರಿಗೆ 6.30 ಕ್ಕೆ ತಲುಪಲಿದೆ.

ಸಾರಿಗೆಗಳಿಗೆ ಆನ್‍ಲೈನ್ ಮುಂಗಡ ಟಿಕೇಟು ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು www.ksrtc.inಗೆ ಹತ್ತಿರದ ರಿಸರ್ವೇಶನ್ ಕೌಂಟರ್ ಸಂಪರ್ಕಿಸಬಹುದಾಗಿದೆ ಎಂದು ಮಂಗಳರು ಕರಾರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.