ಕರಾವಳಿ

ಶಾಲಾ ಕಾಲೇಜು ಆರಂಭಕ್ಕೆ ಮುಹೂರ್ತ ಫಿಕ್ಸ್: ಜನವರಿ 1 ರಿಂದ ಇವೆಲ್ಲಾ ತರಗತಿ ಆರಂಭ..!

Pinterest LinkedIn Tumblr

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಮುಚ್ಚಿದ್ದ ಶಾಲಾ-ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

2021ರ ಜನವರಿ 1ರಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಲಿದ್ದು, 6ರಿಂದ 9ನೇ ತರಗತಿಯವರೆಗೆ ವಿದ್ಯಾಗಮ ಪ್ರಾರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

ಶಾಲೆ-ಕಾಲೇಜುಗಳ ಪ್ರಾರಂಭ ಕುರಿತು ಪರಿಸ್ಥಿತಿ ಅವಲೋಕಿಸಲು, ನಿರ್ಧಾರ ಕೈಗೊಳ್ಳಲು ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಅದರಲ್ಲಿ ಜನವರಿ 1ರಂದು 10 ಮತ್ತು ಪಿಯುಸಿ ತರಗತಿ ಪ್ರಾರಂಭಿಸಿ 15 ದಿನಗಳ ಕಾಲ ಪರಿಸ್ಥಿತಿ ಅವಲೋಕಿಸಿ ಇತರ ತರಗತಿಗಳನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

 

Comments are closed.