ಕರಾವಳಿ

ಡಿ.23ರಂದು ರಂಗ ಚಾವಡಿ ಪ್ರಶಸ್ತಿ ಪ್ರದಾನ : ಸಂಗೀತ ನಿರ್ದೇಶಕ ಮುರಳೀಧರ ಕಾಮತ್‌ಗೆ ಗೌರವ

Pinterest LinkedIn Tumblr

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ರಂಗ ಚಾವಡಿ ಸಾಹಿತ್ಯಿಕ-ಸಾಂಸ್ಕೃತಿಕ ಸಂಘಟನೆಯ ಆಶ್ರಯದಲ್ಲಿ ಡಿಸೆಂಬರ್ 23ರಂದು ಬುಧವಾರ ಸಂಜೆ 4.30ಕ್ಕೆ ಉರ್ವಾಸ್ಟೋರ್ ತುಳುಭವನದ ಸಿರಿ ಚಾವಡಿಯಲ್ಲಿ ರಂಗಚಾವಡಿ ಪ್ರಸಸ್ತಿ ಪ್ರದಾನ ಸಮಾರಂಭ ಜರಗಲಿದೆ.

2020ರ ಸಾಲಿನ ರಂಗಚಾವಡಿ ಗೌರವ ಪ್ರಶಸ್ತಿಯನ್ನು ಸಂಗೀತ ನಿರ್ದೇಶಕ ಮುರಳೀಧರ ಕಾಮತ್ ಕೊಂಚಾಡಿ ಪಡೆಯಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆ ಮಿಯ ಅಧ್ಯಕ್ಷರಾದ ದಯಾನಂದ ಜಿ ಕತ್ತಲ್‌ಸಾರ್ ವಹಿಸಲಿದ್ದಾರೆ. ಕಾರ್ಯ ಕ್ರಮವನ್ನು ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸದಸ್ಯರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ಮಾಪಕರಾದ ಡಾ.ಸಂಜೀವ ದಂಡಕೇರಿ, ಪ್ರಕಾಶ್ ಪಾಂಡೇಶ್ವರ್, ಉದ್ಯಮಿಗಳಾದ ಯಾದವ್ ಕೋಟ್ಯಾನ್ ಪೆರ್ಮುದೆ, ರಮಾನಾಥ ಶೆಟ್ಟಿ ಬೈಕಂಪಾಡಿ, ಸುರತ್ಕಲ್ ಮಾತಾ ಡೆವಲಪರ್‍ಸ್‌ನ ಆಡಳಿತ ನಿರ್ದೇಶಕ ಎನ್.ಸಂತೋಷ್ ಕುಮಾರ್ ಶೆಟ್ಟಿ, ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್.ಪೂಂಜ ಮೊದಲಾದ ವರು ಭಾಗವಹಿಸಲಿದ್ದಾರೆ.

ಬಳಿಕ ರಾಗಧ್ವನಿ ಬಳಗ ಮಂಗಳೂರು ಇವ ರಿಂದ ಸಂಗೀತ ಗಾನಗಂಗೆ ನಡೆಯಲಿದೆ ಎಂದು ರಂಗಚಾವಡಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Comments are closed.