ಕರಾವಳಿ

ಅಂತರ್ಜಾಲದಲ್ಲಿ ಛಂದಸ್ಸು ಅಧ್ಯಯನ : ಉಚಿತ ತರಬೇತಿ

Pinterest LinkedIn Tumblr

ಮಂಗಳೂರು: ಜ್ಞಾನಾಮೃತ ಮಂಗಳೂರು ಆಶ್ರಯದಲ್ಲಿ ಯಕ್ಷಗಾನ ಛಾಂದಸರಾದ ಛಂದೋ ಬ್ರಹ್ಮ ಡಾ.ಎನ್.ನಾರಾಯಣ ಶೆಟ್ಟರ ಸ್ಮರಣಾರ್ಥ ‘ಛಂದಸ್ಸು ಅಧ್ಯಯನ’ ಉಚಿತ ಅಂತರ್ಜಾಲ ತರಬೇತಿಯನ್ನು ಏರ್ಪಡಿಸಲಾಗಿದ್ದು ಇದರ ಅಂಗವಾಗಿ ಪ್ರತಿ ತಿಂಗಳು ವಿಶೇಷ ಉಪನ್ಯಾಸವನ್ನು ಆನ್ಲೈನಲ್ಲಿ ನಡೆಸಲಾಗುತ್ತಿದೆ.

ಈ ಸರಣಿಯ ಪ್ರಥಮ ಉಪನ್ಯಾಸ ಇತ್ತೀಚಿಗೆ ಜರಗಿತು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಅವರು ‘ಡಾ.ಎನ್.ನಾರಾಯಣ ಶೆಟ್ಟರ ಕೃತಿಗಳ ಸಾಹಿತ್ಯ – ಸೌಂದರ್ಯ ವಿವೇಚನೆ’ ಕುರಿತು ಆನ್ಲೈನ್ ಉಪನ್ಯಾಸ ನೀಡಿದರು.

ಶಿಮಂತೂರು ನಾರಾಯಣ ಶೆಟ್ಟರ ಅನರ್ಘ್ಯ ಛಂದೋ ರತ್ನಗಳು, ಯಕ್ಷಗಾನ ಛಂದೋಂಬುಧಿ ಹಾಗೂ ಕಟೀಲು ಕ್ಷೇತ್ರ ಮಹಾತ್ಮೆ, ದೀಕ್ಷಾ ಕಂಕಣ, ರಾಜ ಮುದ್ರಿಕಾ, ಬಿರ್ದ್ ದ ಭೈರವೆರ್ ಮೊದಲಾದ ಪ್ರಸಂಗಗಳ ಅವಲೋಕನದೊಂದಿಗೆ ಆ ಕೃತಿಗಳ ಅನನ್ಯತೆಯನ್ನು ಅವರು ವಿವರಿಸಿ ಹೇಳಿದರು.

ಛಂದಸ್ಸು ಅಧ್ಯಯನದ ನಿರ್ದೇಶಕ ಹಾಗೂ ಶಿಕ್ಷಕ ಡಾ.ದಿನಕರ ಎಸ್. ಪಚ್ಚನಾಡಿ ಉಪನ್ಯಾಸಕಾರರನ್ನು ಸ್ವಾಗತಿಸಿ ಶಿಬಿರಾರ್ಥಿಗಳಿಗೆ ಪರಿಚಯಿಸಿದರು. ಜ್ಞಾನಾಮೃತ ಮಂಗಳೂರು ಅಧ್ಯಕ್ಷ ಲಿಂಗಪ್ಪ ಸೀತಾದೇವು ಅತಿಥಿಗಳಿಗೆ ಸ್ಮರಣಿಕೆಯಿತ್ತು ಗೌರವಿಸಿದರು. ಸುಮಾರು 80 ಮಂದಿ ಶಿಕ್ಷಣಾರ್ಥಿಗಳು ಆನ್ಲೈನ್ ತರಬೇತಿಯಲ್ಲಿ ಭಾಗವಹಿಸಿ ಸಂವಹನ ನಡೆಸಿದರು.

Comments are closed.