ಕರಾವಳಿ

ಗೋ ಹತ್ಯ ನಿಷೇಧ ವಿಧೇಯಕ ಮಂಡನೆ -ಅನಧಿಕೃತ ಕಸಾಯಿಖಾನೆ ಚಟುವಟಿಕೆಗಳಿಗೆ ಕಡಿವಾಣ : ಕ್ಯಾ.ಕಾರ್ಣಿಕ್

Pinterest LinkedIn Tumblr

ಮಂಗಳೂರು, ಡಿಸೆಂಬರ್.10: ನಾಡಿನ ರೈತ ಸಮುದಾಯ ಸೇರಿದಂತೆ ಹೈನುಗಾರರು, ಸಾರ್ವಜನಿ ಕರು ಮತ್ತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ರೂಪಿತವಾದ ಜನಾಭಿಪ್ರಾಯವನ್ನು ಪರಿಗಣಿಸಿ ಭಾಜಪಾ ದ ರಾಜ್ಯ ಕಾರ್ಯಕಾರಿಣಿಯ ನಿರ್ಣಯದಂತೆ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಗಳಾದ ಬಿ.ಎಸ್. ಯಡಿಯೂರಪ್ಪರವರ ನೇತೃತ್ವದ ರಾಜ್ಯ ಸರ್ಕಾರ ಗೋ ಹತ್ಯ ನಿಷೇಧ ವಿಧೇಯಕ ಮಂಡಿಸಿರುವುದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದು ವಿಧಾನಪರಿಷತ್‌ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

ಈ ಕಾಯ್ದೆಯಿಂದಾಗಿ ಗೋವು ಕಳ್ಳತನ, ಗೋವಿನ ಅನಧಿಕೃತ ಸಾಗಟ ಹಾಗೂ ಅನಧಿಕೃತ ಕಸಾಯಿಖಾನೆ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಮತ್ತು ಸಮಾಜದ ಸಾಮರಸ್ಯ ಕಾಪಾಡುವಲ್ಲಿ ಈ ಮಸೂದೆಯು ಪರಿಣಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಗೋ ಹತ್ಯ ನಿಷೇಧ ಮತ್ತು ಗೋ ಕಳ್ಳ ಸಾಗಣಿಕೆಯ ವಿರುದ್ಧ ಪೊಲೀಸ್ ಇಲಾಖೆಯ ಪ್ರಯತ್ನಗಳಿಗೂ ಈ ಕಾಯ್ದೆ ಇನ್ನಷ್ಟು ಶಕ್ತಿ ತುಂಬಲಿದೆ.

ಭಾರತೀಯ ಜನತಾ ಪಾರ್ಟಿಯ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಗೋ ಹತ್ಯ ನಿಷೇಧ ವಿಧೇಯಕವನ್ನು ಮಂಡಿಸಿದ ರಾಜ್ಯ ಸರ್ಕಾರವನ್ನು, ಹೈನುಗಾರಿಕಾ ಮಂತ್ರಿಗಳಾದ ಶ್ರೀ ಪ್ರಭು ಚಹ್ಹಾನ್‌ರವರನ್ನು ಹಾಗೂ ಕೆಳಮನೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ನೀಡಿದ ಶಾಸಕರನ್ನು ನಾಡಿನ ಜನತೆಯ ಪರವಾಗಿ ಕೃತಜ್ಞತಾ ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಕ್ಯಾಪ್ಟನ್ ಕಾರ್ಣಿಕ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.