ಕರಾವಳಿ

ಭವಾನಿ ಪೌಂಡೇಶನ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಡಿ. ಶೆಟ್ಟಿಯವರಿಗೆ ಸನ್ಮಾನ – ಕೆ. ಡಿ. ಶೆಟ್ಟಿಯವರ ಸೇವಾಕಾರ್ಯ ದೇಶ ಗುರುತಿಸುವಂತಾಗಲಿ : ಧರ್ಮಪಾಲ ದೇವಾಡಿಗ

Pinterest LinkedIn Tumblr

ಮುಂಬಯಿ : ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬ ಸಾಧನೆ ಮತ್ತು ಛಲದ ದೊಂದಿಗೆ ಎತ್ತರಕ್ಕೇರ ಬಹುದು ಎಂಬುದಕ್ಕೆ ಕೆ. ಡಿ. ಶೆಟ್ಟಿಯವರು ಉದಾಹರಣೆಯಾಗಿದ್ದಾರೆ. ನಿರಂತರ ಪರಿಶ್ರಮದಿಂದ ಸ್ವಂಥ ಉದ್ಯಮವನ್ನು ಪ್ರಾರಂಭಿಸಿ ಅಸಾಯಕರಿಗೆ ಸಹಾಯ ಮಾಡುವ ಉದ್ದೇಶದಿಂದ ತನ್ನ ತನ್ನ ಮಾತೃಶ್ರೀಯವರ ಹೆಸರಲ್ಲಿ ಭವಾನಿ ಪೌಂಡೇಶನ ಸಂಸ್ಥೆಯನ್ನು ಸ್ಥಾಪಿಸಿ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿನ ಜನ ಸಾಮಾನ್ಯರಿಗೆ ಸಹಾಯ ಮಾಡುತ್ತಿರುದನ್ನು ಕರ್ನಾಟಕ ಸರಕಾರ ಗುರುತಿಸಿ ಕರ್ನಾಟಕ ಸರಕಾರವು ಈ ಸಲದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಮುಂದಿನ ದಿನಗಳಲ್ಲಿ ಇವರ ಸೇವಾಕಾರ್ಯವನ್ನು ದೇಶ ಗುರುತಿಸುವಂತಾಗಲಿ ಎಂದು ಭವಾನಿ ಪೌಂಡೇಶನ ಟ್ರಷ್ಟಿ ಹಾಗೂ ಅಖಿಲ ಬಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು ದೇವಾಡಿಗ ನುಡಿದರು.

ನವಿಮುಂಬಯಿಯ ಸಿಬಿಡಿಯಲಿರು ಭವಾನಿ ಪೌಂಡೇಶನ್ ನ ಕಾರ್ಯಾಲಯದಲ್ಲಿ ನಡೆದ ವಿಶೇಷ ಸಬೆಯಲ್ಲಿ ಭವಾನಿ ಪೌಂಡೇಶನ್ ವತಿಯಿಂದ ಕೆ. ಡಿ. ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಧರ್ಮಪಾಲ ಯು ದೇವಾಡಿಗ ಅವರು ಕೆ. ಡಿ. ಶೆಟ್ಟಿಯವರ ಸಾಧನೆಯ ಬಗ್ಗೆ ಮಾತನಾಡುತ್ತಾ ಅವರನ್ನು ಅಭಿನಂದಿಸಿದರು.

ಇಂಡಿಯನ್ ಎಕ್ಪ್ರೆಸ್ ಪತ್ರಿಕೆಯ ಪತ್ರಕರ್ತ, ಭವಾನಿ ಪೌಂಡೇಶನ ಟ್ರಷ್ಟಿ ದಿನೇಶ್ ಶೆಟ್ಟಿ ಯವರು ಮಾತನಾಡಿ ಕೆ. ಡಿ. ಶೆಟ್ಟಿಯ ಸಾಧನೆ ಹಾಗೂ ಜನ ಸಾಮಾನ್ಯರ ಸೇವೆಯನ್ನು ಮಹಾರಾಷ್ಟ್ರ ಸರಕಾರವೂ ಗುರುತಿಸಿ ಅವರನ್ನು ಗೌರವಿಸುವಂತಾಗಲಿ ಎಂದರು.

ಕಾರ್ಯಕ್ರಮವನ್ನು ನಿರ್ವಹಿಸಿದ ಭವಾನಿ ಪೌಂಡೇಶನ ಇನ್ನೋರ್ವ ಟ್ರಷ್ಟಿ ಕರ್ನೂರು ಮೋಹನ್ ರೈಯವರು ಮಾತನಾಡುತ್ತಾ ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಹಾಗೂ ಆದಿವಾಸಿ ಜನರಿಗೆ ಸಹಾಯ ಮಾಡುತ್ತಾ ಬಂದಿರುವ ಭವಾನಿ ಪೌಂಡೇಶನ ಸೇವಾ ಕಾರ್ಯವನ್ನು ಕರ್ನಾಟಕ ಸರಕಾರ ಗುರುತಿಸಿದೆ ಎನ್ನುತ್ತಾ ಈ ಸೇವೆಯು ನಿರಂತರವಾಗಿ ಮುಂದುವರಿಯಲಿದೆ ಎಂದರು.

ಪೌಂಡೇಶನಿನ ಪದಾಧಿಕಾರಿ ರವಿ ಉಚ್ಚಿಲ್ ಹಾಗೂ ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಅಭಿನಂದಿಸಿದರು.

ಭವಾನಿ ಪೌಂಡೇಶನ ಟ್ರಷ್ಟಿ ಪತ್ರಕರ್ತ ಪ್ರೇಮನಾಥ ಶೆಟ್ಟಿ ಮುಂಡ್ಕೂರು ಧನ್ಯವಾದ ಸಮರ್ಪಿಸಿದರು.

ಹೊರನಾಡ ಕನ್ನಡಿಗರ ಪರವಾಗಿ ಪ್ರಶಸ್ತಿ ಸ್ವೀಕರಿಸಿದ್ದೇನೆ -ಕೆ. ಡಿ. ಶೆಟ್ಟಿ

ಅಸಾಯಕರಿಗೆ ಸಹಾಯ ಮಾಡುವುದು ನಮ್ಮ ಗುರಿಯಾಗಿರಲಿ. ನಾವೆಲ್ಲರೂ ಜಾತಿ ಬೇದ ಮರೆತು . ತುಳು ಕನ್ನಡಿಗರಾಗಿ ಕನ್ನಡ ಶಾಲೆಗಳಿಗೆ ಹಾಗೂ ಶಿಕ್ಷಣದಲ್ಲಿ ವಂಚಿತರಾಗುವವರಿಗೆ ಸಹಕರಿಸೋಣ. ರಾಜ್ಯೋತ್ಸವ ಪ್ರಶಸ್ತಿಯು ನನಗೆ ಸಿಕ್ಕಿದೆ ಅನ್ನುದರ ಬದಲು ಮಹಾರಾಷ್ಟ್ರದಲ್ಲಿನ ಎಲ್ಲಾ ತುಳು ಕನ್ನಡಿಗರ ಪರವಾಗಿ ನಾನು ಸ್ವೀಕರಿಸಿದ್ದೇನೆ ಎನ್ನಬಹುದು. ಇಲ್ಲಿಗೇ ನನ್ನ ಜವಾಬ್ಧಾರಿ ಮುಗಿಯಲಿಲ್ಲ. ಇದೀಗ ನನ್ನ ಜವಾಬ್ಧಾರಿ ಹೆಚ್ಚಾಗಿದೆ. ನಾವು ಸಂಪಾದಿಸಿದ ಕೆಲವಂಶವನ್ನಾದರೂ ದಾನ ಧರ್ಮದಲ್ಲಿ ವಿನಿಯೋಗಿಸಬೇಕೆಂಬುದೇ ನನ್ನ ಕನಸು. ಸಮಾಜಸೇವೆ ನನ್ನ ರಕ್ತದಲ್ಲಿದೆ. ರಾತ್ರಿ ಶಾಲೆಯಲ್ಲಿ ಕಲಿತು ಬಡವರ ಕಣ್ಣೀರೊರಸುವ ಕೆಲಸವನ್ನು ಮಾಡುವ ಭಾಗ್ಯ ನನಗೆ ದೊರಕಿದೆ ಎಂದು ಕೆ. ಡಿ. ಶೆಟ್ಟಿ ನುಡಿದರು.

ತಂದೆಯ ಸೇವಾಕಾರ್ಯ ರಕ್ತದ ಕಣದಲ್ಲಿದೆ – ಶೀಖಾ ಕೆ. ಶೆಟ್ಟಿ

ಫೌಂಡೇಶನ್ನ ಟ್ರಸ್ಟಿ ಶೆಟ್ಟಿ ಅವರ ಸುಪುತ್ರಿ ಸೀಖಾ ಕೆ ಶೆಟ್ಟಿ ನನ್ನ ನನ್ನ ತಂದೆಯವರಿಗೆ ಸಿಕ್ಕಿದ ಪ್ರಶಸ್ತಿ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ಅವರು ಮಾಡಿದ ಸೇವೆಯನ್ನು ಸರಕಾರವು ಗುರುತಿಸಿ ಗೌರವಿಸಿದೆ. ಸಮಾಜ ಸೇವೆಯು ಅವರ ರಕ್ತದ ಕಣದಲ್ಲಿದೆ. ನಾವು ಯಾವಾಗಲೂ ಅವರೊಂದಿಗಿರುವೆವು. ಇನ್ನೊಬ್ಬರ ಬಗ್ಗೆ ಚಿಂತಿಸುವವರು ಅವರು ಎಂದರು.

ಚಿತ್ರ-ವರದಿ ದಿನೇಶ್ ಕುಲಾಲ್

Comments are closed.