ಉಡುಪಿ: ಜಿಲ್ಲಾಡಳಿತ ವತಿಯಿಂದ ಡಾ| ಬಿ. ಆರ್ ಅಂಬೇಡ್ಕರ್ ಅವರ 64ನೇ ಪರಿನಿರ್ವಾಣ ದಿನಾಚರಣೆಯನ್ನ ಉಡುಪಿ ಜಿಲ್ಲಾಧಿಕಾರಿ ಕಛೇರಿಯ ಆವರಣದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗೆ ಹೂ ಹಾರ ಹಾಕುವ ಮೂಲಕ ಜಿಲ್ಲಾಧಿಕಾರಿ ಜಿ. ಜಗದೀಶ್ ನೆರವೇರಿಸಿದರು.
ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆಯ) ನೀಲಿಕ್ರಾಂತಿ ಯುವ ವಿದ್ಯಾರ್ಥಿ ನಾಯಕ ಗೌತಮ್ ತಲ್ಲೂರು ಪಥಸಂಚಲನ ಮಾಡುವ ಮೂಲಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹಾಗೂ ಸಮಾಜ ಕಲ್ಯಾಣ ಅಧಿಕಾರಿಯವರನ್ನು ಬರಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಅನಿತಾ ಮಡ್ಲೂರ,ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ರಾಜ್ಯಾದ್ಯಕ್ಷ ಉದಯ್ ಕುಮಾರ್ ತಲ್ಲೂರು, ದ.ಸಂಸ ಅಂಬೇಡ್ಕರ್ ವಾದದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಹಾಗೂ ಪದಾಧಿಕಾರಿಗಳು, ಭೀಮ ಘರ್ಜನೆ ಉಡುಪಿ ಜಿಲ್ಲಾ ಸಂಚಾಲಕ ಚಂದ್ರ ಆಲ್ತಾರು, ಕುಂದಾಪುರ ತಾಲೂಕು ಸಂಚಾಲಕರಾದ ವಿಜಯ್ ಕೆ.ಎಸ್., ಚಂದ್ರಮ ತಲ್ಲೂರು, ವಸಂತ ವಂಡ್ಸೆ, ಸಂದೇಶ್ ನಾಡ, ಕಿರಣ್ ತಲ್ಲೂರು, ಉದಯ್ ತಲ್ಲೂರು ಹಾಗೂ ದಲಿತ ಸಂಘಟನೆಯ ಮುಖಂಡರುಗಳಾದ ಭಾಗವಹಿಸಿದ್ದರು.