ಕರಾವಳಿ

ಸರ್ಕಾರಿ ನೌಕರರು ಮತ್ತು ಸರ್ಕಾರಿ ಶಿಕ್ಷಕರ ನೇರ ಸಂವಾದ ಕಾರ್ಯಕ್ರಮ

Pinterest LinkedIn Tumblr

ಮಂಗಳೂರು:ದಕ್ಷಿಣ ಕನ್ನಡ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಂದಿನಿ ಸಭಾಂಗಣ ದಲ್ಲಿ ನಡೆದ ಸರ್ಕಾರಿ ನೌಕರರು ಮತ್ತು ಸರ್ಕಾರಿ ಶಿಕ್ಷಕರ ನೇರ ಸಂವಾದ ಕಾರ್ಯಕ್ರಮವನ್ನು ದ.ಕ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಡಾ ಸೆಲ್ವಮಣಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ .ಯಸ್ . ಷಡಕ್ಷರಿ ಜಗದೀಶ್ ಗೌಡಪ್ಪ ಪಾಟೀಲ್ ರಾಜ್ಯ ಪ್ರಧಾನ ಕಾರ್ಯದರ್ಶಿ,ಶಿವರುದ್ರಯ್ಯ ಗೌರವ ಅಧ್ಯಕ್ಷರು , ಶ್ರೀನಿವಾಸ್ ಖಚಾಂಚಿ ,ಮೋಹನ್ ಕುಮಾರ್ ವಿಭಾಗೀಯ ಉಪಾಧ್ಯಕ್ಷರು ,ಎಂ .ವಿ .ರುದ್ರಪ್ಪ ಉಪಾಧ್ಯಕ್ಷರು , ಮತ್ತು ದ .ಕ.ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾದ ಪಿ ಕೆ. ಕೃಷ್ಣ ,ಕಾರ್ಯದರ್ಶಿ ನವೀನ ಕುಮಾರ್ ಶ್ರೀಮತಿ ಶರ್ಲಿ ಸುಮಾಲಿನಿ ಮತ್ತಿತರರು ಉಪಸ್ಥಿತರಿದ್ದರು .

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ .ಯಸ್ . ಷಡಕ್ಷರಿಯವರೊಂದಿಗೆ ಸರ್ಕಾರಿ ನೌಕರರು ಮತ್ತು ಸರ್ಕಾರಿ ಶಿಕ್ಷಕರ ನೇರ ಸಂವಾದ ಕಾರ್ಯಕ್ರಮ ದ.ಕ.ಜಿಲ್ಲಾ ಸರ್ಕಾರಿ ನೌಕರರ ಸಂಘದ ನಂದಿನಿ ಸಭಾಂಗಣ ದಲ್ಲಿ ನಡೆಯಿತು.

ಮಂಗಳೂರು:ದಕ್ಷಿಣ ಕನ್ನಡ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಂದಿನಿ ಸಭಾಂಗಣ ದಲ್ಲಿ ನಡೆದ ಸರ್ಕಾರಿ ನೌಕರರು ಮತ್ತು ಸರ್ಕಾರಿ ಶಿಕ್ಷಕರ ನೇರ ಸಂವಾದ ಕಾರ್ಯಕ್ರಮದ ಸಂಧರ್ಭ ಕನಕದಾಸರ ಭಾವ ಚಿತ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ .ಯಸ್ . ಷಡಕ್ಷರಿಯವರು ಪುಷ್ಪಾರ್ಚನೆ ಮಾಡುವ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.

ಈ ಸಂಧರ್ಭ ದ.ಕ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಡಾ ಸೆಲ್ವಮಣಿ, ದ .ಕ.ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾದ ಪಿ ಕೆ. ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು .

Comments are closed.