ಕರ್ನಾಟಕ

ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ : 3 ದಿನ ಹಲ್ಲೆ ನಡೆಸಿ ರೂ. 30 ಕೋಟಿಗೆ ಬೇಡಿಕೆ – ವ್ಯಾಪಕ ಅನುಮಾನ?

Pinterest LinkedIn Tumblr

ಬೆಂಗಳೂರು.ಡಿಸೆಂಬರ್.01: ಮೂರು ದಿನಗಳ ಹಿಂದೆ ನಾಪತ್ತೆಯಾದ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು 8 ಜನರ ಗುಂಪೊಂದು ಅಪಹರಿಸಿ ಹಣಕ್ಕಾಗಿ ಹಿಂಸೆ ನೀಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ತಮ್ಮನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಇಂದು ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮ್ಮನ್ನು ಮತ್ತು ತಮ್ಮಡ್ರೈವರ್​ನ್ನು ಕಿಡ್ನಾಪ್ ಮಾಡಿ ಕಾರದಪುಡಿ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ವರ್ತೂರು ಪ್ರಕಾಶ್ ಆರೋಪಿಸಿದ್ದಾರೆ.

ಮೂರು ದಿನಗಳ ಹಿಂದೆ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಅವರ ಕೋಲಾರದ ತೋಟದ ಮನೆಯಿಂದ 8 ಜನರ ಗುಂಪೊಂದು ಕಿಡ್ನಾಪ್ ಮಾಡಿ, ಮೂರು ದಿನಗಳವರೆಗೆ ನಿರಂತರವಾಗಿ ಹಲ್ಲೆ ಮಾಡಿದ ಗುಂಪು, ಆನಂತರ ಬಿಡುಗಡೆ ಮಾಡಿ ಕಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಅವರನ್ನು ಬಿಡುಗಡೆ ಮಾಡೋದಕ್ಕೆ 30 ಕೋಟಿ ರೂಪಾಯಿಗೂ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಕಿಡ್ನಾಪ್ ಮಾಡಿದ ಬಳಿಕ ನಿರಂತರವಾಗಿ 3 ದಿನ ಹಲ್ಲೆ ನಡೆಸಿದ್ದಾರೆ, ಕಾರು ಚಾಲಕ ಸುನೀಲ್ ಮೇಲೂ ಹಲ್ಲೆ ನಡೆಸಿದ್ದಾರೆ, ಸುಮಾರು 8 ಮಂದಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ’. ಬುಧವಾರ ಸಂಜೆ 7 ಗಂಟೆಗೆ ಕಿಡ್ನಾಪ್ ಆರೋಪಿಗಳು ಕಿಡ್ನಾಪ್ ಮಾಡಿದ್ದರು. ನನ್ನನ್ನು ಕಿಡ್ನಾಪ್ ಮಾಡಿ 30 ಕೋಟಿ ಬೇಡಿಕೆ ಇಟ್ಟಿದ್ದರು.

8 ಮಂದಿ ಬಂದು ಫಾರಂ ಹೌಸ್​ನಿಂದ ಕಿಡ್ನಾಪ್ ಮಾಡಿದ್ದರು. ನನ್ನ ಮತ್ತು ನನ್ನ ಡ್ರೈವರ್ ಮೇಲೆ ಕಾರದಪುಡಿ ಹಾಕಿ ಹಲ್ಲೆ ಮಾಡಿದ್ದರು. ನನ್ನ ಡ್ರೈವರ್ ಮತ್ತು ನನ್ನನ್ನು ಅಪಹರಣ ಮಾಡಿ ಕರೆದೊಯ್ದಿದ್ರು. ಆದರೆ ಡ್ರೈವರ್ ಸುನಿಲ್ ಗುರುವಾರ ಬೆಳಗ್ಗೆ ತಪ್ಪಿಸಿಕೊಂಡು ಹೋಗಿದ್ದರು. ಆತನ ಮೇಲೆ ಅಪಹರಣಕಾರರು ಸಾಕಷ್ಟು ಹಲ್ಲೆ ಮಾಡಿದ್ದರು. ಆದರೆ ಯಾವುದೇ ಹಣ ನೀಡದಿದ್ದರೂ ಬಿಟ್ಟು ಕಳುಹಿಸಿದ್ದಾರೆ. 2 ದಿನ ಕೂಡಿಟ್ಟು ಶುಕ್ರವಾರ ಬೆಳಗ್ಗೆ ಹೊಸಕೋಟೆ ಬಳಿ ರಿಲೀಸ್ ಮಾಡಿದ್ದಾರೆ ಎಂದು ಸ್ವತಹ ವರ್ತೂರು ಪ್ರಕಾಶ್ ಅವರೇ ಸ್ಪೋಟಕ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ವರ್ತೂರು ಪ್ರಕಾಶ್ ಅವರ ದೇಹದ ಮೇಲೆ ಹಲ್ಲೆ ಮಾಡಿದ ಗಾಯದ ಗುರುತುಗಳಿದೆ ಎಂದು ಹೇಳಲಾಗಿದ್ದು, ವರ್ತೂರು ಪ್ರಕಾಶ್ ಅವರ ದೇಹ ಹಸಿರುಗಟ್ಟಿ ಹೋಗಿದೆ. ಅವರ ದೇಹದ ಕಡೆ ಮನಬಂದಂತೆ ದುಷ್ಕರ್ಮಿಗಳು ಥಳಿಸಿದ್ದಾರೆ. ಹಾಗೂ ಅವರ ಕಾಲಿಗೆ ಮಚ್ಚಿನಿಂದ ಹಲ್ಲೆ ನಡೆಸಿ ವರ್ತೂರು ಪ್ರಕಾಶ್ ಅವರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ರಾಜ್ಯದ ಮಾಜಿ ಸಚಿವರೂ.. ಮಾಜಿ ಶಾಸಕರೂ ಆಗಿರುವ ವರ್ತೂರು ಪ್ರಕಾಶ್ ಕಿಡ್ನಾಪ್​ ಪ್ರಕರಣ ಸದ್ಯಕ್ಕೆ ತೀವ್ರ ಕುತೂಹಲ ಮೂಡಿಸಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಆದರೆ ಸಾಕಷ್ಟು ಗೊಂದಲಕ್ಕೆ ಕಾರಣವಾರುವ ಈ ಘಟನೆಯ ಸಮಗ್ರ ಮಾಹಿತಿ ಪೊಲೀಸರ ಹೆಚ್ಚಿನ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಸಾಕಷ್ಟು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿರುವ ಈ ಪ್ರಕರಣ ಪೊಲೀಸರ ಸೂಕ್ತ ತನಿಖೆ ನಂತರವಷ್ಟೇ ಸತ್ಯಾಸತ್ಯತೆ ಹೊರಬೀಳುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಬೀಳಬಹುದು.

Comments are closed.