ಕರಾವಳಿ

ಕುಖ್ಯಾತ ಅರೋಪಿ ಬಗ್ಗೆ ಸುಳಿವು ನೀಡಿದವರಿಗೆ ರೂ.2.ಲಕ್ಷ ನಗದು ಬಹುಮಾನ

Pinterest LinkedIn Tumblr

ಮಂಗಳೂರು,ಡಿಸೆಂಬರ್ 1 : ಕೇರಳದ ಕಾಸರಗೋಡು ಜಿಲ್ಲೆಯ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಮತ್ತು ಲೂಟಿ ಪ್ರಕರಣದಲ್ಲಿ ಭಾಗಿಯಾದ ಅಬ್ದುಲ್ ಅಜೀಜ್ (33) ಎಂಬ ಕುಖ್ಯಾತ ಆರೋಪಿಯು ಸೆಪ್ಟೆಂಬರ್ 14ರಂದು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಆರಕ್ಷಕ ಅಭಿರಕ್ಷೆಯಿಂದ ತಪ್ಪಿಸಿಕೊಂಡಿದ್ದಾನೆ.

ಆರೋಪಿ ಬಗ್ಗೆ ಮಾಹಿತಿ ನೀಡಿದವರಿಗೆ ರೂ.2ಲಕ್ಷ ನಗದು ಬಹುಮಾನವನ್ನು ನೀಡುವುದಾಗಿ ಕೇರಳ ಪೊಲೀಸ್ ಮಹಾ ನಿರ್ದೇಶಕರು ಘೋಷಿಸಿದ್ದಾರೆ, ಎಂದು ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.