ಕರಾವಳಿ

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆ : 6 ಮಂದಿ ಮೀನುಗಾರರು ನಾಪತ್ತೆ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು, ಡಿಸೆಂಬರ್.01 : ಮೀನುಗಾರಿಕೆಗೆ ತೆರಳಿದ್ದ ಬೋಟ್ ವಾಪಾಸಾಗುತ್ತಿದ್ದ ವೇಳೆ ಮಗುಚಿಬಿದ್ದು 6 ಮಂದಿ ಮೀನುಗಾರರು ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ಮೀನುಗಾರಿಕಾ ಬಂದರಿನಿಂದ ಅಳ ಸಮುದ್ರದ ಮೀನುಗಾರಿಕೆಗೆ ಸೋಮವಾರ ತೆರಳಿದ್ದ ಬೋಳಾರದ ಶ್ರೀರಕ್ಷಾ ಬೋಟ್ ವಾಪಾಸಾಗುತ್ತಿದ್ದ ವೇಳೆ ಮುಳುಗಡೆಯಾಗಿದೆ ಎನ್ನಲಾಗಿದೆ. ದೋಣಿಯಲ್ಲಿ 20 ಕ್ಕೂ ಹೆಚ್ಚು ಮೀನುಗಾರರಿದ್ದು, ದುರಂತದ ಸಂದರ್ಭದಲ್ಲಿ 16 ಮಂದಿ ಡಿಂಗಿಯಲ್ಲಿ ಕುಳಿತು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದು, ಸ್ಥಳಕ್ಕೆ ಕರಾವಳಿ ರಕ್ಷಣಾ ಪಡೆ ಆಗಮಿಸಿದ್ದು, ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ.

Comments are closed.