ಕರಾವಳಿ

ಡಿ.12: ಮಂಗಳೂರಿನಲ್ಲಿ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ -ಮಹಿಳೆಯರಿಗೆ ರಂಗೋಲಿ ಸ್ಪರ್ಧೆ

Pinterest LinkedIn Tumblr

ಮಂಗಳೂರು : ಹೃದಯವಾಹಿನಿ ಮಂಗಳೂರು ಮತ್ತು ಎಸ್. ಕೆ .ಮುನಿಸಿಪಲ್ ಎಂಪ್ಲಾಯ್ಸ್ ಯೂನಿಯನ್ (ರಿ)ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಇದೇ ಬರುವ ಡಿಸೆಂಬರ್ 12 ರಂದು ಒಂದು ದಿನದ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಆಯೋಜಿಸಲಾಗಿದೆ .

ಈ ಸಂದರ್ಭದಲ್ಲಿ ಮಹಿಳೆಯರಿಗೆ ಮತ್ತು ಯುವತಿಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯು ಡಿಸೆಂಬರ್ 12ನೇ ತಾರೀಕಿನಂದು ಬೆಳಿಗ್ಗೆ 9ಗಂಟೆಯಿಂದ 10ಗಂಟೆಯವರೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿರುವುದು.

16 ವರ್ಷ ದಿಂದ 60ವರ್ಷಗಳೊಳಗಿನ ಯುವತಿಯರು ಹಾಗೂ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ವಿಜೇತರಾದವರಿಗೆ ಪ್ರಥಮ ಬಹುಮಾನ ರೂ 3000, ದ್ವಿತೀಯ ರೂ 1100 ಹಾಗೂ ತೃತೀಯ ರೂ 1000 ನೀಡಲಾಗುವುದು. ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೂ ಪ್ರಶಂಸನಾ ಪತ್ರ ನೀಡಲಾಗುವುದು.

ರಂಗೋಲಿ ಬಿಡಿಸಲು ಬೇಕಾದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು ಹಾಗೂ ಸ್ಪರ್ಧೆಯ ವೇಳೆ ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ನೋಂದಣಿಗೆ ಡಿಸೆಂಬರ್ 7 ಕೊನೆಯ ದಿನವಾಗಿದೆ. ರಂಗೋಲಿ ಬಿಡಿಸುವ ಕ್ಷೇತ್ರದ ಅಳತೆ 1.20ಮೀ x 1.20ಮೀ( 4ಅಡಿ x 4ಅಡಿ )ಮಿತಿ ಒಳಗಿರಬೇಕು.

ನೋಂದಾಯಿಸಿಕೊಳ್ಳಲು ಹೆಸರು ಮತ್ತು ವಿಳಾಸವನ್ನು 9886510087 ವಾಟ್ಸಪ್ ಗೆ ಕಳುಹಿಸಬೇಕು. ನೋಂದಣಿ ಖಚಿತಪಡಿಸಲು ಕ್ರಮ ಸಂಖ್ಯೆಯನ್ನು ನಿಮ್ಮ ವಾಟ್ಸಪ್ ಗೆ ಕಳುಹಿಸಲಾಗುವುದು. ಸೀಮಿತ ಸ್ಪರ್ಧಿಗಳಿಗೆ ಅವಕಾಶ ಇರುವುದರಿಂದ ಮೊದಲು ಹೆಸರು ನೀಡಿದವರಿಗೆ ಆದ್ಯತೆ ನೀಡಲಾಗುವುದು.

ಬೆಳಿಗ್ಗೆ 8-30 ಕ್ಕೆ ಉಪಹಾರದ ವ್ಯವಸ್ಥೆ ಇದೆ. ಸ್ಪರ್ಧೆಯ ಫಲಿತಾಂಶ ಮತ್ತು ಬಹುಮಾನ ವಿತರಣೆ ಮಧ್ಯಾಹ್ನ ನಡೆಸಲಾಗುವುದು. ಮುಂಬಯಿಯ ಎನ್ .ಪಿ .ಸುವರ್ಣ ಮತ್ತು ಪ್ರಭಾ ಸುವರ್ಣ ರಂಗೋಲಿ ಸ್ಪರ್ಧೆಯ ಬಹುಮಾನದ ಪ್ರಾಯೋಜಕರಾಗಿದ್ದಾರೆ.

Comments are closed.