
ಮಂಗಳೂರು / ಪುತ್ತೂರು : ಎಲ್ಲಾ ಜಾತಿ, ಜನಾಂಗದವರಿಗೆ ಪ್ರಾಧಿಕಾರವನ್ನ ಕೇಳುವ ಹಕ್ಕಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ ನಾರಾಯಣ್ ಹೇಳಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲಿಂಗಾಯುತ ಅಭಿವೃದ್ಧಿ ಪ್ರಾಧಿಕಾರ ವಿವಾದದ ಕುರಿತು ಸ್ಪಷ್ಟಣೆ ನೀಡಿ, ಎಲ್ಲಾ ಜಾತಿ, ಜನಾಂಗದವರಿಗೆ ಪ್ರಾಧಿಕಾರವನ್ನ ಕೇಳುವ ಹಕ್ಕಿದೆ. ಹಾಗೇಯೇ ಎಲ್ಲಾ ಜಾತಿ, ಜನಾಂಗಕ್ಕೂ ಪ್ರಾಧಿಕಾರವನ್ನು ಕೊಡುವ ಅಗತ್ಯವಿದೆ. ಸರಕಾರ ಸೀಮಿತ ಕಾಲಾವಧಿಯಲ್ಲಿ ಈ ಕೆಲಸವನ್ನು ಮಾಡಲಿದೆ ಎಂದರು.
ಇದೇ ವೇಳೆ ಗೋಹತ್ಯೆ ನಿಷೇಧ ಹಾಗೂ ಲವ್ ಜಿಹಾದ್ ತಡೆ ವಿಚಾರದ ಬಗ್ಗೆ ಮಾತನಾಡಿದ ಉಪ ಮುಖ್ಯಮಂತ್ರಿಗಳು, ಗೋಹತ್ಯೆ ನಿಷೇಧ ಹಾಗೂ ಲವ್ ಜಿಹಾದ್ ತಡೆ ಕುರಿತ ಕಾನೂನು ಕೂಡಲೇ ಜಾರಿಗೆ ಬರಲಿದೆ ಎಂದರು.
ಗೋಹತ್ಯೆ ನಿಷೇಧ ವಿಚಾರದಲ್ಲಿ ರಾಜ್ಯ ಸರಕಾರ ಸ್ಪಷ್ಟವಾಗಿದ್ದು, ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರೂ ಈ ಕುರಿತು ತಮ್ಮ ನಿಲುವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಗೋವು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಗೋವಿನ ಹತ್ಯೆ ಯನ್ನು ನಿಷೇಧಿಸುವ ಕಾನೂನು ಅತೀ ಅಗತ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವಥ ನಾರಾಯಣ್ ಹೇಳಿದರು.
ಅಲ್ಲದೆ ದೇಶದೆಲ್ಲೆಡೆ ಇದೀಗ ಚರ್ಚೆಯಲ್ಲಿರುವ ಲವ್ ಜಿಹಾದ್ ತಡೆ ಕಾನೂನು ವಿಚಾರವಾಗಿಯೂ ರಾಜ್ಯ ಸರಕಾರ ಬಹಳ ಸ್ಪಷ್ಟತೆಯನ್ನು ಹೊಂದಿದ್ದು, ಈ ಎರಡೂ ಕಾನೂನನ್ನು ಜಾರಿಗೆ ತರಲು ಸ್ವತಹ ಮುಖ್ಯಮಂತ್ರಿಗಳೇ ನಿರ್ಧರಿಸಿದ್ದಾರೆ. ಈ ಎರಡೂ ಕಾನೂನುಗಳು ರಾಜ್ಯದಲ್ಲಿ ಶೀಘ್ರವೇ ಜಾರಿಗೆ ಬರಲಿದೆ ಎಂದು ಹೇಳಿದರು.
Comments are closed.