ಕರಾವಳಿ

ಉಗ್ರಗಾಮಿಗಳ ಪರ ಗೋಡೆ ಬರಹ ಬರೆದ ದೇಶದ್ರೋಹಿಗಳ ಬಂಧನಕ್ಕೆ ಯೂಥ್ ಇಂಟಕ್ ಆಗ್ರಹ

Pinterest LinkedIn Tumblr

ಈ ದೇಶದ ಮಣ್ಣಿನಲ್ಲಿ ವಾಸ್ತವ್ಯ ಹೊಂದಿ, ಇಲ್ಲಿನ ನೀರು ಕುಡಿದು, ಉಗ್ರರಿಗೆ ಬೆಂಬಲ ನೀಡುವ ದೇಶದ್ರೋಹಿಗಳನ್ನು ಕೂಡಲೇ ಬಂಧಿಸಲು ಆಗ್ರಹ

ಮಂಗಳೂರು, ನವೆಂಬರ್.28: ಮಂಗಳೂರಿನಲ್ಲಿ ಉಗ್ರಗಾಮಿಗಳಿಗೆ ಗೋಡೆ ಬರಹದ ಮೂಲಕ ಬೆಂಬಲ ವ್ಯಕ್ತಪಡಿಸಿ, ದೇಶದ್ರೋಹ ಎಸಗಿದ ದುಷ್ಕರ್ಮಿಗಳನ್ನು ಬಂಧಿಸಲು ಆಗ್ರಹಿಸಿ ಯೂಥ್ ಇಂಟಕ್ ಸದಸ್ಯರು ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಯುವ ಇಂಟಕ್ ರಾಜ್ಯ ಕಾರ್ಯದರ್ಶಿ ದಿನಕರ್ ಶೆಟ್ಟಿ ಅವರು, ಕದ್ರಿ ಸಮೀಪ ಗೋಡೆಯಲ್ಲಿ ಉಗ್ರಗಾಮಿ ಸಂಘಟನೆಗೆ ಜೈಕಾರದ ಬರಹದ ಮೂಲಕ ದೇಶದ್ರೋಹ ಎಸಗಿದ ಘಟನೆಯನ್ನು ಯೂಥ್ ಇಂಟಕ್ ತ್ರೀವವಾಗಿ ಖಂಡಿಸುತ್ತದೆ.

ನಗರದ ಮಧ್ಯಭಾಗದಲ್ಲಿ ಸುರಕ್ಷತೆಯ ಪ್ರದೇಶದಲ್ಲಿ ಗೋಡೆ ಬರಹ ಬರಹ ಬರೆದಿದ್ದಾರೆ. ಸಿಸಿ ಟಿವಿ ಇದ್ದರೂ ಆರೋಪಿಗಳ ಬಂಧನ ವಿಳಂಬವಾಗುತ್ತಿದೆ. ಎಲ್ಲೋ ಒಂದು ಕಡೆ ಗುಪ್ತಚರ ವಿಭಾಗ ವೈಫಲ್ಯ ಖಂಡಿದೆ.

ಕೂಡಲೇ ಆರೋಪಿಗಳನ್ನು ಬಂಧಿಸಿ ಇತರರಿಗೆ ಎಚ್ಚರಿಕೆಯ ಸಂದೇಶ ಹೋಗಬೇಕು. ದೇಶದಲ್ಲಿ ಉತ್ತಮ ಸಂವಿಧಾನವಿದೆ. ದೇಶದ ಸುರಕ್ಷತೆಗೆ ಸೈನಿಕರಿದ್ದಾರೆ. ಉಗ್ರಗಾಮಿಗಳ ನೆರವು ನಮಗೆ ಅಗತ್ಯವಿಲ್ಲ. ಈ ದೇಶದ ಮಣ್ಣಿನಲ್ಲಿ ವಾಸವಾಗಿ, ನೀರು ಕುಡಿದು, ಈ ದೇಶದ ಸರ್ವನಾಶಕ್ಕೆ ಪಣತೊಟ್ಟಿರುವ ಉಗ್ರಗಾಮಿ ಸಂಘಟನೆಗೆ ಬೆಂಬಲವಾಗಿ ಗೋಡೆ ಬರಹ ಬರೆದು “ದೇಶದ್ರೋಹ” ಎಸಗಿದ ದೇಶದ್ರೋಹಿಗಳನ್ನು ಕೂಡಲೇ ಬಂಧಿಸ ಬೇಕೆಂದು ಆಗ್ರಹಿಸಿದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸುರತ್ಕಲ್ ವಿಧಾನ ಸಭೆಯ ಮಾಜಿ ಶಾಸಕ ಮೊಯಿದೀನ್ ಭಾವ ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಹರೀಶ್ ರಾವ್ , ಇಂಟಕ್ ನ ಪುನೀತ್, ಸಿದ್ದಿಕ್ ಹಸನ್, ಸಂಪತ್ ಲೋಬೊ, ಪದ್ಮಸ್ಮಿಥ್, ಸಾಹುಲ್ ಹಮೀದ್ ಸುಳ್ಯ, ವಿನೋದ್ರಾಜ್, ಸಮದ್ ಕಂದಕ್,ದಿನೇಶ್ ಗುರುನಗರ್, ಸಿರಾಜುದ್ದೀನ್, ಮುನೀರ್ ಭಾವ, ಮಿಶಾಲ್,ಮುನೀಶ್, ಮುನ್ನ,ಬದ್ರುದ್ದೀನ್ ಕೃಷ್ಣಾಪುರ, ಮೊಹಮ್ಮದ್, ಎನ್ ಎಸ್ ಯು ಐ ನಾಯಕ ಅಶಿತ್ ಪಿರೇರಾ ಮತ್ತಿತರರು ಉಪಸ್ಥತರಿದರು.

Comments are closed.