ರಾಷ್ಟ್ರೀಯ

ಸರಕಾರದಿಂದ ನಾಯಿ ಮಾಂಸ ಮಾರಾಟ ನಿಷೇಧ: ಹೈಕೋರ್ಟ್ ತಡೆ

Pinterest LinkedIn Tumblr


ಗುವಾಹಟಿ: ನಾಯಿ ಮಾಂಸ ಮಾರಾಟ ನಿಷೇಧಿಸಿ ನಾಗಾಲ್ಯಾಂಡ್‌ ರಾಜ್ಯದ ಆದೇಶವನ್ನು ಗುವಾಹಟಿ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ವಾಣಿಜ್ಯ ಉದ್ದೇಶದಿಂದ ನಾಯಿ ಮಾಂಸ ಆಮದು ಮಾಡಿಕೊಳ್ಳಲು, ವ್ಯಾಪಾರ ಮಾಡಲು ಮತ್ತು ಮಾರಾಟ ನಡೆಸಲು ಅವಕಾಶವಿದೆ ಎಂದು ಸರಕಾರದ ಮೂಲಗಳು ಹೇಳಿವೆ.

ನಾಯಿಗಳನ್ನು ಗೋಣಿಚೀಲದಲ್ಲಿ ತುಂಬಿಸಿ ರವಾನಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಮಾರಾಟವನ್ನು ನಿಷೇಧಿಸಲು ಸರಕಾರವು ಜುಲೈಯಲ್ಲಿ ನಿರ್ಧರಿಸಿತ್ತು.

ನಾಗಾಲ್ಯಾಂಡ್‌ನ ಕೆಲವು ಸಮುದಾಯಗಳಲ್ಲಿ ನಾಯಿ ಮಾಂಸದ ಖಾದ್ಯ ಜನಪ್ರಿಯವಾಗಿದೆ. ಇದನ್ನು ವಿರೋಧಿಸಿ , ಕೊಹಿಮಾ ನಗರಪಾಲಿಕೆ ವ್ಯಾಪ್ತಿಯಲ್ಲಿ ನಾಯಿ ಮಾಂಸದ ವ್ಯವಹಾರ ನಡೆಸುವ ಸಂಘದ ವತಿಯಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

Comments are closed.