ಕರಾವಳಿ

ಹಲವಾರು ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಕಾದು ಕುಳಿತ ಬಡವರಿಗೆ ಹಕ್ಕು ಪತ್ರ ನೀಡಿದ ಬಿಜೆಪಿ ಶಾಸಕ

Pinterest LinkedIn Tumblr

ಮಂಗಳೂರು : ಮಂಗಳೂರು ಉತ್ತರ ದೇರೆಬೈಲು ಉತ್ತರ 17 ನೇ ವಾರ್ಡ್ ಕಳೆದ 35 ವರ್ಷಗಳಿಂದ ಹಕ್ಕು ಪತ್ರ ಇಲ್ಲದ 32 ಬಡ ಕುಟುಂಬಗಳಿಗೆ 94.cc ಹಕ್ಕು ಪತ್ರ ವಿತರಣೆಯನ್ನು ಜನಪ್ರಿಯ ಶಾಸಕ ಡಾ.ವೈ.ಭರತ್ ಶೆಟ್ಟಿಯವರು ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಕಳೆದ ಹಲವಾರು ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಕಾದು ಕುಳಿತವರಿಗೆ ಅವರ ಮನೆಯ ಹಕ್ಕನ್ನು ನೀಡಲಾಗಿದೆ.

ಸ್ವಂತ ಮನೆ ಹೊಂದಬೇಕೆನ್ನುವ ಕನಸು ಎಲ್ಲರಿಗೂ ಇರುತ್ತದೆ. ಸರಕಾರ ಆಶ್ರಯ ಕಾಲನಿಗಳಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಿ ಬಡ ವರ್ಗಕ್ಕೆ ಮನೆ ಕೊಡುವ ಯೋಜನೆಯನ್ನು ರೂಪಿಸಿದೆ.ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ನಲ್ಲಿ ಶೀಘ್ರ ವಸತಿ ಸಮುಚ್ಚಯ ನಿರ್ಮಾಣವಾಗಲಿದೆ ಎಂದರು.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅಮೃತ್ ಯೋಜನೆಯಡಿ ಒಳಚರಂಡಿ,ಜಲಸಿರಿ ಭಾಗ್ಯದಡಿ ಗ್ರಾಮೀಣ

ಪ್ರದೇಶಗಳಿಗೆ ಕುಡಿಯುವ ನೀರು ಮತ್ತಿತರ ಅಭಿವೃದ್ಧಿ ಕೆಲಸಗಳು ನಡೆಯುತ್ತಿದೆ ಎಂದರು. ದೇರೆಬೈಲ್ ವಾರ್ಡ್ ನಲ್ಲಿ ಮನಪಾ ಸದಸ್ಯ ಮನೋಜ್ ಅವರ ಬೇಡಿಕೆಯಂತೆ ರಸ್ತೆ ಕಾಂಕ್ರಟೀಕರಣ,ಕುಡಿಯುವ ನೀರಿಗೆ ಟ್ಯಾಂಕ್ ನಿರ್ಮಾಣ ಮತ್ತಿತರ ಯೋಜನೆ ಹಂತ ಹಂತವಾಗಿ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಮ.ನ.ಪಾ ಸದಸ್ಯ ಮನೋಜ್ ಕುಮಾರ್,ಗ್ರಾಮ ಲೆಕ್ಕಿಗ ಚರಣ್,ಕಂದಾಯ ಅಧಿಕಾರಿ ಸ್ಟೀಫನ್,ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ಸಹ ಸಂಚಾಲಕರು ಕಿಶೋರ್ ಬಾಬು,ರಾಮ್ ದಾಸ್ ನಾಯಕ್,ಏ.ಪಿ.ಎಂ.ಸಿ ಸದಸ್ಯ ರಾಘವ ಶೆಟ್ಟಿ,ಭರತ್ ಕೋಡಿಕಲ್,ಜಗದೀಶ್,ಮಂಡಲ ಸದಸ್ಯೆ ಜಯಲಕ್ಷ್ಮಿ,ನಿರ್ಮಲಾ ಟೀಚರ್,ಅವಿನಾಶ್ ಶೆಟ್ಟಿ,ರಾಜ್ ಕುಲಾಲ್,ಜಯಪ್ರಕಾಶ್,ಮಂಡಲ ಸದಸ್ಯೆ ರಾಧಿಕಾ ಬಾಳಿಗಾ,  ಲೋಕನಾಥ್ ಬಂಗೇರ,ಗಣೇಶ್ ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.