ಕರಾವಳಿ

ಇಸ್ಲಾಂಗೆ ಮತಾಂತರಗೊಂಡು ದೌರ್ಜನ್ಯಕ್ಕೊಳಕ್ಕಾದ ಹಿಂದೂ ಯುವತಿಯನ್ನು ಮತ್ತೆ ಹಿಂದು ಧರ್ಮಕ್ಕೆ ಮರಳಿ ಬರಲು ಆಗ್ರಹ

Pinterest LinkedIn Tumblr

ಮಂಗಳೂರು : ಇಸ್ಲಾಂಗೆ ಮತಾಂತರಗೊಂಡು ದೌರ್ಜನ್ಯಕ್ಕೊಳಕ್ಕಾದ ( ಶಾಂತಿ ಜೂಬಿ) ಹಿಂದು ಯುವತಿಗೆ ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ ,ಶ್ರೀಮತಿ ಸುರೇಖಾ ರಾಜ್ , ಲತೀಶ್ ಗುಂಡ್ಯ ಅವರು ಧೈರ್ಯ ತುಂಬಿ ಹಿಂದು ಧರ್ಮಕ್ಕೆ ಮರಳಿ ಬರಲು ಕೊರಲಾಯಿತು.

ಮಾತ್ರವಲ್ಲದೇ ದೌರ್ಜನ್ಯ ಎಸಗಿದ ಮುಸ್ಲಿಂ ಕುಟುಂಬದವರ ವಿರುದ್ಧ ಸುಳ್ಯ ಪೊಲೀಸ್ ಅಧಿಕಾರಿ ರವರಿಗೆ ದೂರು ನೀಡಲಾಯಿತು.

ಫೇಸ್ ಬುಕ್ ಮೂಲಕ ಪರಿಚಯವಾಗಿ ಮತಾಂತರಗೊಂಡ ಬಳಿಕ ಅತ್ತ ತವರು ಮನೆ ಇತ್ತ ಗಂಡನ ಮನೆಯೂ ಇಲ್ಲದೆ ಮೋಸಕ್ಕೊಳಗಾಗಿ ಆತ್ಮಹತ್ಯೆಯ ಹಾದಿ ತುಳಿದಿದ್ದ ಮಹಿಳೆ ಇದೀಗ ಬಜರಂಗ ದಳದ ಮುಖಂಡರ ಮನವರಿಕೆಯಿಂದಾಗಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದು, ಸಂಘಟನೆ ಮುಖಂಡರ ಸಮ್ಮುಖದಲ್ಲಿ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.

ಮೂಲತಃ ಕೇರಳದ ಕಣ್ಣೂರು ನಿವಾಸಿಯಾಗಿರುವ ಶಾಂತಿ ಎಂಬ ಯುವತಿಗೆ ಸುಳ್ಯದ ಖಲೀಲ್ ಎಂಬ ವ್ಯಕ್ತಿ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ. ಬಳಿಕ ಸ್ನೇಹಕ್ಕೆ ಸ್ನೇಹ ಬೆಳೆದು ಪ್ರೇತಿ ಪ್ರೇಮವೆಂಡು ಅಂತಿಮವಾಗಿ ಶಾಂತಿಯನ್ನು ಮದುವೆಯಾದ ಖಲೀಲ್, ಆಕೆಯನ್ನು ತನ್ನ ಧರ್ಮಕ್ಕೆ ಮತಾಂತರ ಕೂಡ ಮಾಡಿದ್ದ. ಹಾಗೂ ಆಕೆಯನ್ನು ಆಸಿಯಾ ಎಂಬುವುದಾಗಿ ಹೆಸರು ಬದಲಾಯಿಸಿದ್ದ.

ಆದರೆ, ಇದೀಗ ಖಲೀಲ್ ತನ್ನನ್ನು ತೊರೆದು ಹೋಗಿದ್ದಾನೆ ಇದಕ್ಕೆ ಆತನ ಸಹೋದರ ಕಾರಣ ಎಂದು ಆರೋಪಿಸಿ ಆತನ ವಿರುದ್ದ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.

ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೇಲ್ ಜತೆ ಆಗಮಿಸಿದ ಆಕೆ ಸುಳ್ಯ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಸುದಿರ್ಘ ಚರ್ಚಿಸಿದ ಬಳಿಕ ದೂರು ನೀಡಿದರು.

ಈ ವೇಳೆ ಸ್ಥಳೀಯ ವಿಶ್ವಹಿಂದು ಪರಿಷತ್ ಬಜರಂಗದಳದ ಮತ್ತಿತ್ತರ ಮುಖಂಡರು ಹಾಗೂ ದುರ್ಗವಾಹಿನಿಯ ಮಹಿಳಾ ಘಟಕದ ಮತ್ತಿತ್ತರ ಮುಖಂಡರು ಜತೆಗಿದ್ದರು.

Comments are closed.