ಕರಾವಳಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಉಡುಪಿ-ಮಂಗಳೂರಿನಲ್ಲಿ ಬ್ರಹತ್ ಸಹಾಯ ವಿತರಣಾ ಕಾರ್ಯಕ್ರಮ

Pinterest LinkedIn Tumblr

ಮುಂಬಯಿ: ಜಗತ್ತಿನಾದ್ಯಂತವಿರುವ ಬಂಟರನ್ನು ಒಂದೇ ಸೂರಿನಡಿ ತಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ಆಶ್ರಯದಲ್ಲಿ ಆರ್ಥಿಕವಾಗಿ ಅಸಾಯಕರಾಗಿರುವ ಸಮಾಜ ಬಾಂಧವರಿಗೆ ಆರ್ಥಿಕ ಸಹಾಯ, ವಸತಿ ನಿರ್ಮಾಣ, ಕೋರೋನಾ ಪೀಡಿತರಿಗೆ ಹಾಗೂ ಅಗತ್ಯವಿದ್ದವರಿಗೆ ವೈದ್ಯಕೀಯ ನೆರವು, ಹತ್ತು, ಹನ್ನೆರಡು, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಅಧಿಕ ಅಂಕ ಗಳಿಸಿದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಹೆಣ್ಣು ಮಕ್ಕಳ ವಿವಾಹಕ್ಕೆ ನೆರವು ಇತ್ಯಾದಿ ಸಹಾಯವನ್ನು ನೀಡಲು ಒಂದುವರೆ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬ್ರಹತ್ ಸಮಾಜ ಕಲ್ಯಾಣ ಸಹಾಯ ವಿತರಣೆ ಕಾರ್ಯಕ್ರಮವನ್ನು ನ ೨೯ರಂದು ಬೆಳಿಗ್ಗೆ 11ರಿಂದ ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಗೃಹದಲ್ಲಿ ಹಾಗೂ ಡಿ. 1 ರಂದು ಬೆಳಿಗ್ಗೆ 10 ರಿಂದ ಗೀತಾ ಎಸ್. ಎಂ. ಶೆಟ್ಟಿ ಸಭಾಭವನ ಬಂಟ್ಸ್ ಹಾಸ್ಟೆಲ್, ಮಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ, ಒಕ್ಕೂಟದ ಪದಾಧಿಕಾರಿಗಳು, ನಿರ್ದೇಶಕರುಗಳು, ಮಹಾಪೋಷಕರು, ಕಾರ್ಯಕಾರಿ ಸಮಿತಿ ಹಾಗೂ ದಾನಿಗಳ ಸಹಕಾರದೊಂದಿಗೆ ಈ ಕಾರ್ಯಕ್ರಮಗಳು ನಡೆಯಲಿದೆ.

ಉಡುಪಿಯಲ್ಲಿ ನಡೆಯಲಿರುವ ನ. 29 ರ ಮೊದಲ ದಿನದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಆಗಮಿಸಲಿದ್ದು ಇಂಟರ್ನೇಷನಲ್ ಬಂಟ್ಸ್ ವೆಲ್ಪೇರ್ ಟ್ರಷ್ಟ್ ನ ಕಾರ್ಯಾಧ್ಯಕ್ಷ ರಾದ ಎಸ್. ಸದಾನಂದ ಶೆಟ್ಟಿ ಇವರ ಘನ ಉಪಸ್ಥಿತಿಯಲ್ಲಿಲ್ ಒರ್ಗೇನಿಕ್ ಗ್ರೂಫ್ ಆಫ್ ಇಂಡಷ್ಟ್ರೀಸ್ ನ ಸಿ.ಎಂ.ಡಿ. ಆನಂದ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರ. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಉಡುಪಿಯ ಶಾಸಕ ಕೆ. ರಘುಪತಿ ಭಟ್ ಆಗಮಿಸಲಿದ್ದು ಭವಾನಿ ಗ್ರೂಫ್ ಆಪ್ ಕಂಪೆನೀಸ್ ನ ಸಿ.ಎಂ.ಡಿ. ಕೆ. ಡಿ. ಶೆಟ್ಟಿ ಮತ್ತು ಆಲ್ ಕಾರ್ಗೊ ಲೊಜಿಷ್ಟಿಕ್ ನ ಸಿ.ಎಂ.ಡಿ. ಶಶಿಕರಣ್ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು.

ಕಾರ್ಯಕ್ರಮಕ್ಕೆ ಗೌರವ ಅಥಿತಿಗಳಾಗಿ ಕುಂದಾಪುರದ ಶಾಸಕ ಎಚ್. ಶ್ರೀನಿವಾಸ ಶೆಟ್ಟಿ, ಕಾರ್ಕಳದ ಶಾಸಕ ಸುನಿಲ್ ಕುಮಾರ್, ಕಾಪು ಶಾಸಕ ಲಾಲಾಜಿ ಮೆಂಡನ್, ಭೈಂದೂರು ಶಾಸಕ ಸುಕುಮಾರ್ ಶೆಟ್ಟಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಮಿಷನ್ ನ ಕಾರ್ಯಾಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಎಂ. ಎಲ್. ಸಿ. ಕೆ. ಪ್ರತಾಪ್ ಚಂದ್ರ ಶೆಟ್ಟಿ, ವಿ. ಕೆ. ಗ್ರೂಪ್ ನ ಕಾರ್ಯಾಧ್ಯಕ್ಷ ಕೆ. ಎಂ.ಶೆಟ್ಟಿ, ಎಂ.ಅರ್.ಜಿ. ಹೋಷ್ಪಿಟೇಲಿಟಿ ಮತ್ತು ಇನ್ಪ್ರಾಷ್ಟ್ರಕ್ಚರ್ ನ ಕಾರ್ಯಾಧ್ಯಕ್ಷ ಪ್ರಕಾಶ್ ಶೆಟ್ಟಿ, ತುಳು ಸಂಘ ಬರೋಡಾದ ಅಧ್ಯಕ್ಷರಾದ ಶಶಿಧರ್ ಶೆಟ್ಟಿ, ಮೀರಾ ಡಹಾಣು ಬಂಟ್ಸ್ ನ ಅಧ್ಯಕ್ಷರಾದ ಡಾ, ವಿರಾರ್ ಶಂಕರ್ ಶೆಟ್ಟಿ, ಓಮಾನ್ ನ ಉಧ್ಯಮಿ ಶಶಿಧರ ಶೆಟ್ಟಿ, ಮಸ್ಕತ್ ನ ಉದ್ಯಮಿ ದಿವಾಕರ ಮಲ್ಲಾರ್ ಕಾಪು, ಪೂಣೆ ಬಂಟ್ಸ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಗೋವಾ ಬಂಟ್ಸ್ ನ ಅಧ್ಯಕ್ಷರಾದ ಮುರಳಿ ಮೋಹನ್ ಶೆಟ್ಟಿ, ಶ್ರೀರಥ್ ಫ಼ೈನಾನ್ಸಿಯಲ್ ಸರ್ವಿಸಸ್ ಲಿ. ಇದರ ಸಿ.ಎಂ.ಡಿ. ರತ್ನಾಕರ ಶೆಟ್ಟಿ ಮುಂಡ್ಕೂರು, ಸಿಲ್ವರ್ ರೋಕ್ಸ್ ನ ಸಿ.ಎಂ.ಡಿ. ಜಗನ್ನಾಥ ರೈ, ಕನ್ಸೆಫ್ಟ್ ಕ್ರೀಯೇಶನ್ ನ ಸಿ.ಎಂ.ಡಿ. ಪ್ರದೀಪ್ ಎಸ್ ಶೆಟ್ಟಿ, ನೈಜೀರಿಯಾದ ಉದ್ಯಮಿ ಅಜಿತ್ ಚೌಟ, ಫಾಷ್ಟ್ ಟ್ರಾಕ್ ವರ್ಡ್ ವೈಡ್ ನ ಸಿ.ಎಂ.ಡಿ. ಮಂಜುನಾಥ ಶೆಟ್ಟಿ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಮತ್ತು ಜೊತೆ ಕಾರ್ಯದರ್ಶಿ ಮನೋರಮಾ ಎನ್. ಬಿ. ಶೆಟ್ಟಿ ಆಗಮಿಸಲಿರುವರು.

ಈ ಸಹಾಯವನ್ನು ಕೇವಲ ಬಂಟ ಸಮಾಜದವರಿಗೆ ಮಾತ್ರವಲ್ಲದೆ ಇತರ ಸಮಾಜದ ಅರ್ಹರಿಗೂ ನೀಡಲಾಗುತ್ತಿದ್ದು ಜನರ ಬೇಡಿಕೆ ಮೇರೆಗೆ ಈ ಮೊತ್ತವನ್ನು ಒಂದುವರೆ ಕೋಟಿಗೆ ಮಿಕ್ಕಿ ವಿತರಿಸಲಾಗುವುದು ಎಂದು ತಿಳಿದು ಬಂದಿದೆ. ಸಾವಿರಾರು ಕುಟುಂಬಗಳ ಬದುಕಿಗೆ ಆಶಾಕಿರಣವಾಗಿ ಲಿರುವ ಈ ಬೃಹತ್ ಯೋಜನೆ ಬಂಟ ಬಾಂಧವರು ಕೈಜೋಡಿಸಿದ್ದಾರೆ. ಉಡುಪಿ ಮತ್ತು ಮಂಗಳೂರಿನಲ್ಲಿ ಎರಡು ಸ್ಥಳಗಳಲ್ಲಿ ನಡೆಯಲಿರುವ ಕಾರ್ಯಕ್ರಮವು ಸರಕಾರದ ನಿಯಮದಂತೆ ನಡೆಯಲಿದೆ . ಸಹಾಯ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಬಂಧುಗಳಿಗೆ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಈ ಮಹತ್ತರ ಯೋಜನೆಗೆ ಸ್ವ ಇಚ್ಚೆಯಿಂದ ದೇಣಿಗೆ ನೀಡಲು ಬಯಸುವ ಪ್ರತಿಯೊಬ್ಬರ ದೇಣಿಗೆಯನ್ನು ಪ್ರೀತಿ ಪೂರ್ವಕವಾಗಿ ಸ್ವೀಕರಿಸಲಾಗುವುದು ಅಲ್ಲದೆ ಎಲ್ಲಾ ದಾನಿಗಳ ಹೆಸರನ್ನು ಬಂಟ ಸಮಾಜದವರೆಲ್ಲರ ಸಮ್ಮುಖರಲ್ಲಿ ಘೋಷಿಸಿ ಗೌರವಿಸಲಾಗುವುದು ಎಂದು ಒಕ್ಕೂಟದ , ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಗೌರವ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಸತೀಷ್ ಅಡಪ ಸಂಕಬೈಲ್, ಒಕ್ಕೂಟದ ನಿರ್ದೇಶಕರು ಹಾಗೂ ಸದಸ್ಯರು ವಿನಂತಿಸಿದ್ದಾರೆ.

ಭೋಜನದ ವ್ಯವಸ್ಥೆ: ಈ ಸಮಾರಂಭದ ಭೋಜನದ ವ್ಯವಸ್ಥೆಯನ್ನು ದಿ. ರೋಹಿತ್ ಮುದ್ದಣ್ಣ ಶೆಟ್ಟಿಯವರ ಸ್ಮರಣಾರ್ಥ ಅವರ ಮಾತೃಶ್ರೀ ಶ್ರೀಮತಿ ಸುನಿತ ಮುದ್ದಣ್ಣ ಶೆಟ್ಟಿ ಮತ್ತು ಮಕ್ಕಳು ಮಾಡಲಿದ್ದಾರೆ.

ಬಂಟ ಸಮಾಜದ ಸಾಧಕರಿಗೆ ಸನ್ಮಾನ : ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ ಮುಂಬಯಿಯ ದಾನಿ ಸಮಾಜ ಸೇವಕ ಭವಾನಿ ಗ್ರೂಫ್ ಆಪ್ ಕಂಪೆನೀಸ್ ನ ಮಾಲಕರಾದ ಕೆ. ಡಿ. ಶೆಟ್ಟಿ ಮತ್ತು ಆಲ್ ಕಾರ್ಗೊ ಲೊಜಿಷ್ಟಿಕ್ ನ ಸಿ.ಎಂ.ಡಿ. ಶಶಿಕಿರಣ್ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು.

ವರದಿ : ದಿನೇಶ್ ಕುಲಾಲ್, ಮುಂಬಾಯಿ

Comments are closed.