ರಾಷ್ಟ್ರೀಯ

‘ದೆಹಲಿ ಚಲೋ’ ಹೊರಟಿದ್ದ ಪಂಜಾಬ್ ರೈತರನ್ನು ಚದುರಿಸಲು ಜಲ ಫಿರಂಗಿ, ಅಶ್ರುವಾಯು ಪ್ರಯೋಗಿಸಿದ ಪೊಲೀಸರು

Pinterest LinkedIn Tumblr

ಚಂಡೀಗಢ: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿ ಚಲೋ ಚಳವಳಿ ಹಿನ್ನೆಲೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲು ದಿಲ್ಲಿಯತ್ತ ಟ್ರಾಕ್ಟರ್‌ಗಳು ಹಾಗೂ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಸಾವಿರಾರು ರೈತರನ್ನು ಹರ್ಯಾಣ ಸರಕಾರದ ಭದ್ರತಾ ಸಿಬ್ಬಂದಿ ಹರ್ಯಾಣದ ಗಡಿಯಲ್ಲಿ ಬ್ಯಾರಿಕೇಡ್ ಹಾಕಿ ತಡೆದಿದ್ದು, ಬ್ಯಾರಿಕೇಡ್ ಮುರಿದು ಹರ್ಯಾಣ ರಾಜ್ಯ ಪ್ರವೇಶಿಸಲು ಮುಂದಾದ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ ಪ್ರಸಂಗ ನಡೆದಿದೆ.

ಪಂಜಾಬ್-ಹರ್ಯಾಣ ಗಡಿಯ ಶಂಭು ಎಂಬಲ್ಲಿ ರೈತರು ಗುಂಪು ಸೇರಿ ದೆಹಲಿ ಚಲೋ ಆರಂಭಿಸಿ ಪೊಲೀಸ್ ಬ್ಯಾರಿಕೇಡ್ ತೆಗೆದು ನುಗ್ಗಲು ಪ್ರಯತ್ನಿಸುತ್ತಿದ್ದರು. ಆಗ ಹರ್ಯಾಣ ಪೊಲೀಸರು ಧ್ವನಿವರ್ಧಕ ಮೂಲಕ ಪ್ರತಿಭಟನಾಕಾರರಿಗೆ ಎಚ್ಚರಿಸುತ್ತಿದ್ದರು. ಈ ವೇಳೆ ಹರ್ಯಾಣ-ಪಂಜಾಬ್ ಶಂಭು ಅಂತರಾಜ್ಯ ಗಡಿಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪ್ರತಿಭಟನಾ ನಿರತ ರೈತರು ಗಗ್ಗರ್ ನದಿಗೆ ಎಸೆಯಲು ನೋಡಿದರು. ಕೆಲವರು ಕಪ್ಪು ಬಾವುಟ ಪ್ರದರ್ಶಿಸುತ್ತಿದ್ದರು.

ಪ್ರತಿಭಟನಾಕಾರರು ದೆಹಲಿಗೆ ತೆರಳದಂತೆ ಹರ್ಯಾಣ ಪೊಲೀಸರು ಹಲವು ಹಂತಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿದ್ದರು.

ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಜನರು ಶಾಂತಿಯುತವಾಗಿ ಪ್ರತಿಭಟನೆ ಮಾಡುವುದನ್ನು ಕಾನೂನಿನ ಮೂಲಕ ಹತ್ತಿಕ್ಕುವಂತಿಲ್ಲ. ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೆವು. ಆದರೆ ನಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಪೊಲೀಸರು ತಡೆಯುತ್ತಿದ್ದಾರೆ ಎಂದರು.

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕರ್ಮಲ್ ಕರ್ನ ಕೆರೆ ಪ್ರದೇಶದಲ್ಲಿ ಸೇರಿದ್ದು ದೆಹಲಿಯತ್ತ ಪಯಣ ಮುಂದುವರಿಸಲು ನಿರತರಾಗಿದ್ದಾರೆ. ಪಂಜಾಬ್-ಹರ್ಯಾಣ ಶಂಭು ಗಡಿಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಸಾವಿರಾರು ರೈತರು ಜಮಾಯಿಸಿದ್ದಾರೆ. ಕೆಲವು ರೈತರು ಕೋಲುಗಳು, ಖಡ್ಗ, ಗದೆಗಳನ್ನು ಹಿಡಿದುಕೊಂಡು ಬ್ಯಾರಿಕೇಡ್ ಗಳನ್ನು ನದಿಗೆ ಎಸೆದರು, ಕಲ್ಲುಗಳನ್ನು ಪೊಲೀಸರತ್ತ ಎಸೆದ ಪ್ರಕರಣಗಳು ನಡೆದವು.

ಗಡಿಯ ಸೇತುವೆ ಮೇಲೆ ಇಂದು ಬೆಳಗ್ಗೆ ಎರಡು ಗಂಟೆಗೂ ಹೆಚ್ಚು ಕಾಲ ಪೊಲೀಸರು ಮತ್ತು ರೈತರ ಮಧ್ಯೆ ಘರ್ಷಣೆ, ಕಲ್ಲುತೂರಾಟ, ಜಲಫಿರಂಗಿ, ಅಶ್ರುವಾಯು ಪ್ರಯೋಗಗಳು ನಡೆದವು. ಬಿಜೆಪಿ ಸರ್ಕಾರವಿರುವ ಹರ್ಯಾಣ ಪ್ರತಿಭಟನಾಕಾರರನ್ನು ದೆಹಲಿಗೆ ಹೋಗಲು ಬಿಡುತ್ತಿಲ್ಲ.

Comments are closed.