ಕರಾವಳಿ

ಡಿ.2ರಂದು ಮಂಗಳೂರು ವಿವಿ ವತಿಯಿಂದ ಕನಕ ಸ್ಮೃತಿ ಕಾರ್ಯಕ್ರಮ : ‘ಕನಕನ ಕಿಂಡಿ’ ಯೂಟ್ಯೂಬ್‍ ಚಾನೆಲ್ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು ನವೆಂಬರ್ 25 : ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಕನಕ ಜಯಂತಿ ಪ್ರಯುಕ್ತ ನಡೆಯುವಕನಕ ಸ್ಮೃತಿ ಎಂಬವಿಶೇಷ ಉಪನ್ಯಾಸ ಕಾರ್ಯಕ್ರಮವು ಡಿಸೆಂಬರ್ 2 ರಂದು ಮಧ್ಯಾಹ್ನ 2.30 ಗಂಟೆಗೆ ಮಂಗಳಗಂಗೋತ್ರಿಯ ಡಾ. ಯು.ಆರ್. ಸಭಾಂಗಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಇವರು ನೆರವೇರಿಸಲಿದ್ದಾರೆ, ಪ್ರಸಿದ್ಧ ಸಂಸ್ಕೃತಿ ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿ ಇವರು ‘ಕನಕ ಸ್ಮೃತಿ ಮತ್ತುಆಧುನಿಕತೆ’ ಎಂಬ ವಿಷಯದಕುರಿತುವಿಶೇಷ ಉಪನ್ಯಾಸ ನೀಡಲಿರುವರು.

ಮಂಗಳೂರು ಆಕಾಶವಾಣಿಯಕಾರ್ಯಕ್ರಮ ಮುಖ್ಯಸ್ಥ ಸೂರ್ಯನಾರಾಯಣ ಭಟ್ ಪಿ.ಎಸ್. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಕೆ.ರಾಜು ಮೊಗವೀರ, ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ.ಕೆ.ಅಭಯ ಕುಮಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ಕಾರ್ಯಕ್ರಮದಲ್ಲಿ 2019-20ನೇ ಸಾಲಿನ ಕನಕ ಕೀರ್ತನ ಮತ್ತು ಕನಕ ಗಂಗೋತ್ರಿ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ‘ಕನಕ ಪುರಸ್ಕಾರ ಪ್ರದಾನ ಮತ್ತುಕೀರ್ತನ ಪ್ರಸ್ತುತಿ’ ನಡೆಯಲಿದೆ.

ಇದಲ್ಲದೆ ಮಂಗಳೂರು ಆಕಾಶವಾಣಿಯ ಮೂಲಕ ಕೀರ್ತನ ವ್ಯಾಖ್ಯಾನ– ‘ಕನಕದಾಸರ ಕೀರ್ತನೆಗಳ ಅರ್ಥಾನುಸಂಧಾನ’ – ಎಂಬ ಬಾನುಲಿ ಸರಣಿಕಾರ್ಯಕ್ರಮದ ಉದ್ಘಾಟನೆ, ‘ಕನಕನ ಕಿಂಡಿ’ ಎಂಬ ಯೂಟ್ಯೂಬ್‍ ಚಾನೆಲ್ ಲೋಕಾರ್ಪಣೆ ಹಾಗೂ ‘ತಿಂಗಳ ಬೆಳಕು – ಕನಕ ತತ್ತ್ವಚಿಂತನ’ ಮಾಸಿಕ ಸರಣಿ ವೆಬಿನಾರ್ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ ಎಂದುಕನಕದಾಸ ಸಂಶೋಧನಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.