ಮಂಗಳೂರು: ಪೊಲೀಸ್ ಇಲಾಖೆಯಲ್ಲಿ ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಉಡುಪಿ ಜಿಲ್ಲೆಯ ಮಲ್ಪೆ ಕಾವಲು ಪಡೆಯ ಆರ್ ಪಿಐಗೆ ವರ್ಗಾವಣೆಗೊಂಡ ಸೋಮಪ್ಪ ನಾಯ್ಕ್ ರನ್ನು ಬೀಳ್ಕೊಡುವ ಸಮಾರಂಭ ಮಂಗಳೂರಿನ ಐಜಿಪಿ ಕಚೇರಿಯಲ್ಲಿ ನಡೆಯಿತು.
ಐಜಿಪಿ ಕಚೇರಿಯ ಪಶ್ಚಿಮ ವಲಯ ಕೇಂದ್ರ ಸ್ಥಾನದ ಡಿವೈಎಸ್ಪಿ ಶಂಕರ್ ಮಾರಿಹಾಳ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.
ಬೆರಳಚ್ಚು ತಜ್ಞ ಡಿವೈಎಸ್ಪಿ ಗೀರಿಶ್, ಐಜಿಪಿ ವಲಯ ಕೇಂದ್ರ ಸ್ಥಾನದ ಇನ್ಸ್ ಪೆಕ್ಟರ್ ನಾಗೇಶ್ ಕದ್ರಿ ಉಪಸ್ಥಿತರಿದ್ರು, ಬಿಡಿಡಿಎಸ್ ಘಟಕದ ಎ ಎಸ್ ಐ ನಿಲಯ್ಯ ಪೂಜಾರಿಯವರು ವರ್ಗಾವಣೆಗೊಂಡ ಸೋಮಪ್ಪ ನಾಯ್ಕ್ ರ ಜೊತೆಗಿನ ಆತ್ಮೀಯತೆಯನ್ನು ಕೊಂಡಾಡಿದರು.
ಪೊಲೀಸ್ ಇಲಾಖೆಯಲ್ಲಿ ಇವರು ಸುಮಾರು 34 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕಳೆದ 7 ವರ್ಷಗಳಿಂದ ಮಂಗಳೂರಲ್ಲಿ ಬಾಂಬ್ ನಿಷ್ಕ್ರಿಯದಳದಲ್ಲಿ ಸೇವೆ ಸಲ್ಲಿಸಿದ್ದಾರೆ. ಮಲ್ಪೆ ಕರಾವಳಿ ಕಾವಲು ಪಡೆಗೆ ಆರ್ ಪಿಐ ಆಗಿ ವರ್ಗಾವಣೆಯಾದ ಸೋಮಪ್ಪ ನಾಯ್ಕ್ ರಿಗೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗ ಸೇರಿದಂತೆ ಬಂಧು ಮಿತ್ರರು ಶುಭ ಹಾರೈಸಿದರು.