ಕರ್ನಾಟಕ

ವೀರಶೈವ, ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ನಿಗಮಕ್ಕೆ 500 ಕೋಟಿ ರೂ.ಭರ್ಜರಿ ಗಿಫ್ಟ್​ ನೀಡಿದ ರಾಜ್ಯ ಸರ್ಕಾರ

Pinterest LinkedIn Tumblr

ಬೆಂಗಳೂರು: ವೀರಶೈವ, ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ನಿಗಮಕ್ಕೆ 500 ಕೋಟಿ ರೂಪಾಯಿ ಅನುದಾನ ನೀಡುವ ಮೂಲಕ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್​ ಕೊಟ್ಟಿದೆ.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದೆ. ಜೊತೆಗೆ, ನಿಗಮಕ್ಕೆ 500 ಕೋಟಿ ಅನುದಾನ ನೀಡಿದೆ.

ಸೋಮವಾರ ಈ ಸಂಬಂಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರಕಾರದ ಅದೀನ ಕಾರ್ಯದರ್ಶಿ ಪಿ.ಕೆ.ಶ್ರೀಪತಿ ಅವರು ಆದೇಶ ಹೊರಡಿಸಿದ್ದು, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮವನ್ನು ಕಂಪನಿ ಕಾಯ್ದೆ 2013ರ ಸೆಕ್ಷನ್ 7ರ ಅನ್ವಯ ನೋಂದಾಯಿಸಿ ಸ್ಥಾಪಿಸುವುದು. ಸದರಿ ನಿಗಮ ಸ್ಥಾಪನೆಗೆ ಅಗತ್ಯ ಅನುಮೋದನೆ ಪಡೆದು ಕೇಂದ್ರ ಸರಕಾರದ ನೋಂದಾಯಿಸುವ ಕಾರ್ಯ ವಹಿಸಲು ಹಾಗೂ ಸದರಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನು ಭರ್ತಿ ಮಾಡುವವರೆಗೆ ಸದರಿ ನಿಗಮದ ಕಾರ್ಯಕ್ರಮಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತರು ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಈ ನಿಗಮ ಸ್ಥಾಪನೆಗೆ ತಗಲುವ ಪ್ರಾರಂಭಿಕ ವೆಚ್ಚವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಭರಿಸಿ ನಂತರ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದಿಂದ ಭರಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.

Comments are closed.