ಕರ್ನಾಟಕ

ಕಾಂಗ್ರೆಸ್‌ಗೆ ಗುಡ್ ಬೈ : ಖುಷ್ಬು ಬಳಿಕ ಮತ್ತೊಬ್ಬ ಖ್ಯಾತ ನಟಿ ಬಿಜೆಪಿ ಸೇರ್ಪಡೆ!

Pinterest LinkedIn Tumblr

ನವದೆಹಲಿ: ಸ್ಟಾರ್ ಪ್ರಚಾರಕಿಯರಾಗಿ ಕಾಂಗ್ರೆಸ್ ಸೇರಿದ್ದ ಚಿತ್ರನಟಿಯರು ಕಾಂಗ್ರೆಸ್​ ಪಕ್ಷದಲ್ಲಿ ಹಲವಾರ ಕಾರ್ಯ ವೈಕರಿಗಳ ಬಗ್ಗೆ ಬೇಸತ್ತು ಒಬ್ಬಬ್ಬರಾಗಿ ಬಿಜೆಪಿಯತ್ತ ಮುಖಮಾಡುತ್ತಿದ್ದಾರೆ.

ಇತ್ತೀಗಷ್ಟೇ ಕಾಂಗ್ರೆಸ್​ನ ಕೆಲವು ಸಿದ್ಧಾಂತಗಳಿಗೆ ಬೇಸತ್ತು ಚಿತ್ರನಟಿ ಖುಷ್ಬೂ ಸುಂದರ್​ ಬಿಜೆಪಿ ಸೇರಿದ್ದರು. ಇದೀಗ ಇವರ ಬೆನ್ನಲ್ಲೇ ದಕ್ಷೀಣ ಭಾರತದ ಮತ್ತೊಬ್ಬ ಖ್ಯಾತ ನಟಿ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ.

ಖ್ಯಾತ ಸಿನಿಮಾ ತಾರೆ, ಮಾಜಿ ಸಂಸದೆ ವಿಜಯಶಾಂತಿ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಗೊಳ್ಳುವುದು ಖಚಿತವಾಗಿದೆ. ಕಾಂಗ್ರೆಸ್​ನ ಸಂಸದೆಯಾಗಿದ್ದ ವಿಜಯಶಾಂತಿ, ಕಾಂಗ್ರೆಸ್​ನ ಸ್ಟಾರ್ ಪ್ರಚಾರಕಿ ಎಂದೇ ಗುರುತಿಸಿಕೊಂಡವರು. ಇವರು ಬಿಜೆಪಿ ಸೇರ್ಪಡೆಯಾಗಲಿದ್ದು, ನಾಳೆ ಮುಹೂರ್ತ ಫಿಕ್ಸ್​ ಆಗಿದೆ ಎನ್ನಲಾಗಿದೆ.

ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಮಿಂಚಿದ್ದ ವಿಜಯ ಶಾಂತಿ ಅವರು ನಾಳೆ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಮೂಲಗಳು ಹೇಳಿವೆ. ವಿಜಯಶಾಂತಿ ಅವರಿಗೆ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ.

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್​ನ (ಜಿಎಚ್​ಎಂಸಿ) 150 ವಾರ್ಡ್​ಗಳಿಗೆ ಬರುವ ಡಿಸೆಂಬರ್​ 1ರಿಂದ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿಯೇ ವಿಜಯಶಾಂತಿಯವರು ಬಿಜೆಪಿ ಸೇರುತ್ತಿರುವುದರಿಂದ ಈ ಭಾಗದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅವರಿಗೆ ರಾಷ್ಟ್ರಮಟ್ಟದಲ್ಲಿ ಉನ್ನತ ಸ್ಥಾನ ಲಭಿಸುವುದು ಖಚಿತ ಎಂದು ಹೇಳಲಾಗಿದೆ.

Comments are closed.