ಕರಾವಳಿ

ದ.ಕ ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ಇಳಿಕೆ – ಎರಡನೇ ಅಲೆ ಸಾಧ್ಯತೆ : ಎಚ್ಚರಿಕೆ

Pinterest LinkedIn Tumblr

ಮಂಗಳೂರು : ದ.ಕ ಜಿಲ್ಲೆಯಲ್ಲಿ ಸದ್ಯ ಪ್ರತಿದಿನ ಸರಾಸರಿ 3500ಕೋವಿಡ್ ಟೆಸ್ಟ್ ನಡೆಯುತ್ತಿದ್ದು ಪಾಸಿಟಿವ್ ಪ್ರಮಾಣ ಶೇ.1.08ಕ್ಕೆ ಇಳಿದಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಹಿಂದೆ ಸರಾಸರಿ 1000 ಟೆಸ್ಟ್ ಆಗುತ್ತಿದ್ದರೆ ಶೇ.30ರಷ್ಟು ಪಾಸಿಟಿಟ್ ಪ್ರಮಾಣ ವರದಿಯಾಗುತ್ತಿತ್ತು. ಇದೀಗ ಅಧಿಕಾರಿಗಳ ಮೇಲೆಯೂ ಒತ್ತಡ ಕಡಿಮೆಯಾಗುತ್ತಿದ್ದು, ಕೋವಿಡ್ ಹೊರತು ಪಡಿಸಿ ಇತರ ಅಭಿವೃದ್ಧಿ ಕೆಲಸಗಳಲ್ಲಿ ತೊಡಗುವಂತಾಗಿದೆ, ಹಾಗೆಂದು ಮೈ ಮರೆಯುವ ಹಾಗಿಲ್ಲ.

ಜನವರಿ ಬಳಿಕ ಮತ್ತೆ ಕೋವಿಡ್‌ನ ಎರಡನೇ ಅಲೆ ಸಾಧ್ಯತೆಯಿದೆ. ಹಾಗಾಗಿ ಸುರಕ್ಷಿತ ಅಂತರ, ಮಾಸ್ಕ್ ಅನಿವಾರ್ಯ, ಅದರೊಂದಿಗೆ ಲಸಿಕೆಯೂ ಬರುವ ನಿರೀಕ್ಷೆಯಿದ್ದು, ಅದಕ್ಕಾಗಿ ವ್ಯಾಪಕ ಸಿದ್ಧತೆ ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಕಾಲೇಜುಗಳಲ್ಲಿ ಉಚಿತವಾಗಿ ವಿದ್ಯಾರ್ಥಿಗಳು, ಬೋಧಕ/ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ, ಸದ್ಯ 14050 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, ಎಲ್ಲವೂ ನೆಗೆಟಿವ್ ಇದೆ ಎಂದರು.

Comments are closed.