ಕರಾವಳಿ

ಮನೆ ಖರೀದಿಸುವವರಿಗೆ ಕೇಂದ್ರದಿಂದ ದೀಪಾವಳಿ ಗಿಫ್ಟ್!

Pinterest LinkedIn Tumblr

ನವದೆಹಲಿ : ದೀಪಾವಳಿ ಹಬ್ಬದ ಸಂದರ್ಭ ಆದಾಯ ತೆರಿಗೆ ನಿಯಮಗಳನ್ನು ಸಡಿಲಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಮನೆ ಖರೀದಿದಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ.

ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಮನೆ ಖರೀದಿಗೆ ತೆರಿಗೆ ರಿಯಾಯತಿ ನೀಡಲಾಗಿದೆ. ಹೊಸ ಮನೆಗಳನ್ನು ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿ ದರಕ್ಕಿಂತ ಶೇ. 10 ರಷ್ಟು ಇದ್ದ ಮಿತಿಯನ್ನು ಶೇ. 20 ಕ್ಕೆ ಏರಿಕೆ ಮಾಡಲಾಗಿದೆ.

ಭಾರತದಲ್ಲಿ ಬೇಡಿಕೆ ಹೆಚ್ಚಿಸಲು ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂಪಾಯಿ ಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಕಂತೆ (ಪಿಎಲ್ ಐ) ಪ್ಯಾಕೇಜ್ ಗೆ ಅನುಮೋದನೆ ನೀಡಿದ ಮರುದಿನವೇ ತೆರಿಗೆ ರಿಯಾಯತಿ ಘೋಷಣೆ ಮಾಡಿದೆ. ದೇಶವನ್ನು ಜಾಗತಿಕ ಉತ್ಪಾದನಾ ಹಬ್ ಆಗಿ ಮಾಡುವುದು ಪಿಎಲ್ ಐ ಯೋಜನೆಯ ಉದ್ದೇಶವಾಗಿದೆ.

Comments are closed.