ಕರ್ನಾಟಕ

ಪ್ರತಿಷ್ಠಿತ ಬೈಕ್ ಶೋ ರೂಮ್‌ನಲ್ಲಿ ಅಗ್ನಿ ಅವಘಡ: ಕೋಟ್ಯಂತರ ರೂ.ಮೌಲ್ಯದ ಬೈಕ್ ಗಳು ಬೆಂಕಿಗಾಹುತಿ

Pinterest LinkedIn Tumblr

ಪ್ರತಿಷ್ಠಿತ ಬೈಕ್ ಶೋ ರೂಮ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಶೋ ರೂಮ್‌ನಲ್ಲಿದ್ದ ಕೋಟ್ಯಂತರ ರೂ. ಬೆಲೆಯ ಬೈಕ್ ಗಳು ಸುಟ್ಟು ಕರಕಲಾದ ಘಟನೆ ತುಮಕೂರಿನ ಬಿ.ಎಚ್ ರಸ್ತೆಯಲ್ಲಿ ನಡೆದಿದೆ.

ನಗರದ ಬಿ.ಎಚ್.ರಸ್ತೆಯಲ್ಲಿರುವ ಸೆಂಚುರಿ ಹೋಂಡಾ ಶೋ ರೂಮ್ ನಲ್ಲಿ ಏಕಾಏಕಿ ಅಗ್ನಿ ಅವಘಡ ಸಂಭವಿಸಿದ್ದು ಶೋ ರೂಮ್‌ನಲ್ಲಿದ್ದ ಬೈಕ್​ಗಳು ಬೆಂಕಿಗಾಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್’ನಿಂದ ಅಗ್ನಿ ಅವಘಢ ಸಂಭವಿಸಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಬೆಂಕಿಯ ತೀವ್ರತೆ ಹೆಚ್ಚಿದ್ದ ಕಾರಣ ಅಪಾರ ಪ್ರಮಾಣದ ನಷ್ಟವುಂಟಾಗಿದೆ..ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಶದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಇನ್ನು ಆತಂಕಕಾರಿ ವಿಚಾರವೆಂದರೆ, ಘಟನೆ ನಡೆದಿರುವ ಸ್ಥಳದಿಂದ 200 ಮೀಟರ್ ಅಂತರದಲ್ಲಿಯೇ ಪಟಾಕಿ ಮಳಿಗೆಗಳಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತಗಳೂ ಸಂಭವಿಸಿಲ್ಲ.

ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಶೋ ರೋಮ್​ನಲ್ಲಿ ಪೂಜೆ ಮಾಡಲಾಗಿತ್ತು. ಈ ವೇಳೆ ದೀಪಗಳನ್ನು ಹಚ್ಚಲಾಗಿತ್ತು. ಬಹುಶಃ ಅದರಿಂದಲೇ ಬೆಂಕಿ ತಗುಲಿರುವ ಶಂಕೆ ಸಹ ವ್ಯಕ್ತವಾಗಿದೆ.

ಬೆಂಕಿ ಹೇಗೆ ಬಿದ್ದಿದೆ ಎನ್ನುವ ಮಾಹಿತಿ ಇಲ್ಲ ಅದು ದೇವರಿಗೆ ಗೊತ್ತು ಎಂದರು. ಈ ಘಟನೆಯಿಂದ 60 ಹೊಸ ಬೈಕ್ ಮತ್ತು ಬಿಡಿಭಾಗ ಶೋರೂಮ್ ಸುಟ್ಟು ಹೋಗಿದೆ. ಶೋ ರೂಮ್ ನಲ್ಲಿ ಇದ್ದ ದಾಖಲೆ ಪತ್ರಗಳು ಸುಟ್ಟು ಕರಕಲಾಗಿದೆ. ಅವಘಡದಿಂದ ಕೋಟ್ಯಂತರ ರೂ ನಷ್ಟವಾಗಿದೆ ಎಂದು ಹೇಳಲಾಗಿದೆ.

Comments are closed.