ಮಂಗಳೂರು, ನವೆಂಬರ್.14: ವಿಶ್ವ ಹಿಂದೂ ಪರಿಷದ್ – ಬಜರಂಗದಳ ಆಟೋ ರಿಕ್ಷಾ ಚಾಲಕ ಮಾಲಕ ಸಮಿತಿ ವತಿಯಿಂದ ಶನಿವಾರ ನಗರದ ಶ್ರೀ ಪಾಂಡೇಶ್ವರ ಮಂಹಲಿಂಗೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ ನೆರವೇರಿತು.
ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮನೋಹರ್ ಸುವರ್ಣ, ಜಿಲ್ಲಾ ಸೇವಾ ಪ್ರಮುಖ್ ಶ್ರೀ ಪ್ರವೀಣ್ ಕುತ್ತಾರ್, ಆಟೋ ರಿಕ್ಷಾ ಸಮಿತಿಯ ಪ್ರಮುಖರಾದ ಪೂಮಲೆ ಉರ್ವಸ್ಟೋರ್, ಚೇತನ್, ಬಾಲಕೃಷ್ಣ, ಕೃಷ್ಣ ಉರ್ವಸ್ಟೋರ್, ಬಿಜೆಪಿ ಪ್ರಮುಖರಾದ ವಿನೋದ್ ಮೆಂಡನ್, ಯುವ ಉದ್ಯಮಿ ಕಾರ್ತಿಕ್ ಮುಂತಾದವರು ಉಪಸ್ಥಿತರಿದ್ದರು.