ಕರಾವಳಿ

ಶಕ್ತಿನಗರ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ತಾತ್ಕಾಲಿಕ ಬದಲಾವಣೆ

Pinterest LinkedIn Tumblr

ಮಂಗಳೂರು ನವೆಂಬರ್ 13 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪದವು ಸೆಂಟ್ರಲ್ 35ನೇ ವಾರ್ಡ್ ಶಕ್ತಿನಗರ ಮುಖ್ಯ ರಸ್ತೆಯ ಮಹಾಕಾಳಿ ಜಂಕ್ಷನ್ ನಿಂದ ಶಕ್ತಿನಗರ ಸ್ಮಶಾನ ದ್ವಾರದವರೆಗೆ 250.00 ಮೀ. ಉದ್ದಕ್ಕೆ ರಸ್ತೆ ಅಭಿವೃದ್ಧಿಪಡಿಸಿ ಕಾಂಕ್ರೀಟೀಕರಣಗೊಳಿಸುವ ಕಾಮಗಾರಿಯನ್ನು ಪ್ರಾರಂಭಿಸಲು ಬದಲಿ ಮಾರ್ಗದ ವ್ಯವಸ್ಥೆ ಮಾಡಿ ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರೀಕ್ಟ್ ಮೆಜಿಸ್ಟ್ರೇಟ್ ವಿಕಾಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಾವಳಿಗಳು 1989 ರ ನಿಯಮ 221 ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶಕ್ತಿನಗರ ಮುಖ್ಯ ರಸ್ತೆ ಮಹಾಕಾಳಿ ಜಂಕ್ಷನ್ ನಿಂದ ಶಕ್ತಿನಗರ ಸ್ಮಶಾನ ದ್ವಾರದವರೆಗೆ ಪ್ರಸ್ತುತ ಸಾಲಿನನವೆಂಬರ್ 12 ರಿಂದ 2021ನೇ ಸಾಲಿನ ಜನವರಿ 10 ರವರೆಗೆ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.

ಶಕ್ತಿನಗರ ಕ್ರಾಸ್ ನಿಂದ ಸ್ಮಶಾನ ರಸ್ತೆಯಾಗಿ ಕಂಡೆಟ್ಟು ಬಿಕರ್ನಕಟ್ಟೆ ಕ್ರಾಸ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳನ್ನು ಶಕ್ತಿನಗರ ಸ್ಮಶಾನದ ಬಳಿ ನಿಷೇಧಿಸಲಾಗಿದೆ. ಬಿಕರ್ನಕಟ್ಟೆ ಕ್ರಾಸ್, ಕಂಡೆಟ್ಟು ಪಾಂಡುರಂಗ ಭಜನಾ ಮಂದಿರದಿಂದ ಸ್ಮಶಾನ ರಸ್ತೆಯಾಗಿ ಶಕ್ತಿನಗರ ಕ್ರಾಸ್ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳಿಗೆ ಅವಕಾಶ ನೀಡಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಮೇಲಿನ ಈ ನಿಬರ್ಂಧನೆಗಳು, ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲಎಂದು ಮಂಗಳೂರು ಪೊಲೀಸು ಆಯುಕ್ತರು ತಿಳಿಸಿದ್ದಾರೆ.

Comments are closed.