ಕರ್ನಾಟಕ

ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ರಿಕೆಟಿಗ ಕೃನಾಲ್ ಪಾಂಡ್ಯರನ್ನು ವಶಕ್ಕೆ ಪಡೆದ ಡಿಆರ್‌ಐ

Pinterest LinkedIn Tumblr

ಮುಂಬೈ : ಚಿನ್ನ ಹಾಗೂ ಇತರ ಅಮೂಲ್ಯ ವಸ್ತುಗಳನ್ನು ಸಾಗಿಸುತ್ತಿದ್ದ ಕ್ರಿಕೆಟ್ ಪಟು ಕೃನಾಲ್ ಪಾಂಡ್ಯ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ)ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಅಗತ್ಯಕ್ಕಿಂತ ಹೆಚ್ಚಿನ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಆರೋಪದ ಮೇಲೆ ಕ್ರಿಕೆಟಿಗ ಕೃನಾಲ್ ಪಾಂಡ್ಯ ಅವರನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಗುರುವಾರ ವಶಕ್ಕೆ ಪಡೆದಿದೆ ಎಂದು ಡಿಆರ್‌ಐ ಮೂಲಗಳು ತಿಳಿಸಿವೆ.

ಯುುಎಐನಲ್ಲಿ ಐಪಿಎಲ್ ಮುಗಿಸಿ ಗುರುವಾರ ಸಂಜೆ 5 ಗಂಟೆಯ ವಿಮಾನದಲ್ಲಿ ಕೃಣಾಲ್ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ತಕ್ಷಣವೇ ಡಿಆರ್‌ಐ ಸಿಬ್ಬಂದಿಗಳು ಅವರನ್ನು ತಡೆದು ನಿಲ್ಲಿಸಿ ವಿಚಾರಣೆಗೊಳಪಡಿಸಿದ್ದಾರೆ.

ಹೆಚ್ಚುವರಿ ಮೊತ್ತದ ಚಿನ್ನ ಹಾಗೂ ಇತರ ಬೆಲೆಬಾಳುವ ವಸ್ತುವನ್ನು ಹೊಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದಕ್ಕೆ ಸುಂಕ ಪಾವತಿಸಲು ಸೂಚಿಸಲಾಗಿದೆ. ಸರಕಾರದ ನಿಯಮದಂತೆ, ದುಬಾೖಯಿಂದ ಮರಳುವ ಪುರುಷ ಪ್ರಯಾಣಿಕರು 50 ಸಾವಿರ ರೂ. ಮೊತ್ತದ ಚಿನ್ನಾಭರಣಗಳನ್ನಷ್ಟೇ ಸುಂಕ ರಹಿತವಾಗಿ ತರಬಹುದಾಗಿದೆ.

ಆಲ್‌ರೌಂಡರ್ ಕೃನಾಲ್ ಪಾಂಡ್ಯ ದುಬೈನಲ್ಲಿ ಮಂಗಳವಾರ ಕೊನೆಗೊಂಡಿರುವ ಐಪಿಎಲ್‌ನಲ್ಲಿ ಐದನೆ ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಸದಸ್ಯನಾಗಿದ್ದಾರೆ.

ಐಪಿಎಲ್ 2020 ರಲ್ಲಿ ಕ್ರುನಾಲ್ 16 ಪಂದ್ಯಗಳಲ್ಲಿ ಕೇವಲ 109 ರನ್ ಗಳಿಸಿ ಆರು ವಿಕೆಟ್ ಪಡೆದರು.ಇದುವರೆಗೆ ಅವರು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ 71 ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್ 2017 ರ ಫೈನಲ್‌ನಲ್ಲಿ ಮುಂಬೈ ತಂಡವು ಪ್ರಶಸ್ತಿ ಗೆಲ್ಲಲು ಮಹತ್ವದ ಪಾತ್ರವಹಿಸಿದ್ದರು.

Comments are closed.