ಕರಾವಳಿ

ಪೊಲೀಸರ ಮೇಲೆ ಕಲ್ಲು ಎಸೆದ 14 ಮಂದಿಯ ಮದ್ಯಂತರ ಜಾಮೀನು ಅರ್ಜಿ ಆದೇಶ ನಾಳೆಗೆ ಮುಂದೂಡಿದ ಕೋರ್ಟ್

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕಿನ ಕೊಡೇರಿಯಲ್ಲಿ ಮೀನುಗಾರಿಕಾ ಹರಾಜು ಪ್ರಾಂಗಣದಲ್ಲಿ ಮೀನು ಹರಾಜು ಪ್ರಕ್ರಿಯೆ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಪೊಲೀಸರ ಮೇಲೆ ಕಲ್ಲು, ದೊಣ್ಣೆ, ಬಾಟಲಿ ಹಾಗೂ ಚಪ್ಪಲಿ ತೂರಿದ ಆರೋಪ ಹೊತ್ತ 14 ಮಂದಿಯ ಮದ್ಯಂತರ ಜಾಮೀನು ಅರ್ಜಿ ಆದೇಶ ನಾಳೆ (ಶುಕ್ರವಾರ)ಕ್ಕೆ ಮುಂದೂಡಿ ಕುಂದಾಪುರ ಜೆ.ಎಂ.ಎಫ್.ಸಿ ನ್ಯಾಯಾಲಯ ಗುರುವಾರದಂದು ಆದೇಶಿಸಿದೆ.

ಪ್ರಕರಣದಲ್ಲಿ 14 ಮಂದಿ ಆರೋಪಿಗಳನ್ನು ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಹಾಗೂ ಬೈಂದೂರು ಪಿಎಸ್ಐ ಸಂಗೀತಾ ನೇತೃತ್ವದ ಸಿಬ್ಬಂದಿಗಳ ತಂಡ ಬಂಧಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅಂದು ಆರೋಪಿಗಳ ಪರ ವಕೀಲರು ಅವರಿಗೆ ಮದ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಹಾಯಕ ಸರಕಾರಿ ಅಭಿಯೋಜಕಿ ವರ್ಷಶ್ರಿ ಅವರು ಕಾಲಾವಕಾಶ ಕೋರಿದ್ದರು. ಅದರಂತಯೇ ನ.12 ಗುರುವಾರ ನ್ಯಾಯಾಲಯದಲ್ಲಿ ಮದ್ಯಂತರ ಜಾಮೀನು‌ ಅರ್ಜಿ ವಿಚಾರಣೆ ನಡೆದಿದ್ದು‌ ಸಹಾಯಕ ಸರಕಾರಿ ಅಭಿಯೋಜಕರು ವಿವಿಧ ದಾಖಲೆಗಳೊಂದಿಗೆ ತೀವೃವಾದ ಆಕ್ಷೇಪಣೆ ಸಲ್ಲಿಸಿದ್ದು ಜಾಮೀನು ಆದೇಶ ನಾಳೆಗೆ ಮುಂದೂಡಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಜೈಲೋ ಬೇಲೋ ತೀರ್ಪು ನಾಳೆಗೆ….
ಒಂದೆರಡು ದಿನದಲ್ಲಿ ದೀಪಾವಳಿ ಹಬ್ಬವಿದ್ದು ಪೊಲೀಸರ ಮೇಲೆ ದಾಳಿಗೆ ಮುಂದಾದ ಬಂಧಿತ ಆರೋಪಿಗಳಿಗೆ ಈ ಬಾರಿ ಜೈಲೋ ಅಥವಾ ಬೇಲ್ ಸಿಕ್ಕಿ ಹಬ್ಬ ಇರುತ್ತದೆಯೋ ಎಂಬುದು ಕಾದು ನೋಡಬೇಕಿದೆ. ಕಿರಿಮಂಜೇಶ್ವರ ಕೊಡೇರಿ ನಿವಾಸಿಗಳಾದ ಸುಬ್ರಮಣ್ಯ ಕುಮಾರ್ (31), ಪ್ರಕಾಶ್(33), ಅಂಬರೀಶ್ (29), ಶ್ರೀಕಾಂತ ಖಾರ್ವಿ (26), ಬೈಂದೂರು ಕಾಲ್ತೋಡು ಶಂಕರ ನಾಯ್ಕ್ (25), ಕೊಡೇರಿ ಮೂಲದ ಸುಬ್ರಮಣ್ಯ ಖಾರ್ವಿ (30), ಪ್ರಕಾಶ ಖಾರ್ವಿ (24), ರೋಹಿತ್ ಖಾರ್ವಿ (25), ತಿಮ್ಮಪ್ಪ ಖಾರ್ವಿ(50), ಹರ್ಷಿತ್ ಖಾರ್ವಿ (25), ರಂಜಿತ್ ಖಾರ್ವಿ (22), ಹರೀಶ್ ಖಾರ್ವಿ(22), ಶ್ರೀನಿವಾಸ ಖಾರ್ವಿ(59), ಸುನೀಲ್ ಖಾರ್ವಿ (22) ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಕಲಂ 143, 147, 148, 353, 504, 506,149 ಅಡಿ ಪ್ರಕರಣ ದಾಖಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.