ಕರಾವಳಿ

5 ಸಾವಿರ ಲಂಚ ಪಡೆಯುವಾಗ ಕುಂದಾಪುರದಲ್ಲಿ ರೆವಿನ್ಯೂ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ..!

Pinterest LinkedIn Tumblr

ಕುಂದಾಪುರ: ಭೂಪರಿವರ್ತೆನೆಗೆ (ಕನ್ವರ್ಶನ್) ಕೇಳಿದ 12 ಸಾವಿರ ಲಂಚದ ಹಣದಲ್ಲಿ 5 ಸಾವಿರ ರೂ.ಪಡೆಯುವಾಗ ರೆವಿನ್ಯೂ ಇನ್ಸ್‌ಪೆಕ್ಟರ್ ಎಸಿಬಿ ಬಲೆಗೆ ಬಿದ್ದ ಘಟ‌ನೆ ಗುರುವಾರ ನಡೆದಿದೆ.

ಕುಂದಾಪುರದಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿದ್ದು ಪ್ರಸ್ತುತ ಕಂದಾಯ ನಿರೀಕ್ಷಕರಾಗಿರುವ ಭರತ್ ವಿ. ಶೆಟ್ಟಿ 5ಸಾವಿರ ಲಂಚ ಪಡೆಯುವಾಗ ಅವರದ್ದೇ ಸರಕಾರಿ ಕಚೇರಿಯಲ್ಲಿ ಎಸಿಬಿ ತಂಡಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ.

ವ್ಯಕ್ತಿಯೊಬ್ಬರ ಬಳಿ ಭೂಪರಿವರ್ತೆನೆಗೆ 12 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದು ಈ ಬಗ್ಗೆ ವ್ಯಕ್ತಿ ಎಸಿಬಿಗೆ ದೂರು ನೀಡಿದ್ದರು. ಅದರಂತೆಯೇ ಎಸಿಬಿ ಕಾರ್ಯಾಚರಣೆ ನಡೆಸಿದ್ದು ಇಂದು ವ್ಯಕ್ತಿ ಬಳಿ 5 ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಸದ್ಯ ಭರತ್ ಶೆಟ್ಟಿ ವಿಚಾರಣೆ ನಡೆಸುತ್ತಿದ್ದು ಸಂಜೆ ವೇಳೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

ಎಸಿಬಿ ಉಡುಪಿ ಡಿವೈಎಸ್ಪಿ ಮಂಜುನಾಥ ಕವರಿ, ಇನ್ಸ್‌ಪೆಕ್ಟರ್ ಸತೀಶ್ ಬಿ.ಎಸ್., ಚಂದ್ರಕಲಾ, ಎಸಿಬಿ ಸಿಬ್ಬಂದಿಗಳಾದ ಯತೀನ್ ಕುಮಾರ್, ಪ್ರಸನ್ನ, ರವೀಂದ್ರ ಗಾಣಿಗ, ಅಬ್ದುಲ್ ಜಲಲ್, ರಾಘವೇಂದ್ರ ಹೊಸ್ಕೋಟೆ,ಸೂರಜ್, ಅಬ್ದುಲ್ ಲತೀಪ್, ಪ್ರತೀಮಾ ಮೊದಲಾದವರು ಈ ಕಾರ್ಯಾಚರಣೆಯಲ್ಲಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.