ಕರ್ನಾಟಕ

ಡಿ.ಜೆ. ಹಳ್ಳಿ, ಕೆ.ಜಿ ಹಳ್ಳಿ ಗಲಭೆಯಲ್ಲಿ ಬೈಕ್ ಕಳೆದುಕೊಂಡ ಪೊಲೀಸರಿಗೆ ಸಿಕ್ಕಿತು ಹೊಸ ಟಿವಿಎಸ್ ಅಪಾಚಿ ಬೈಕ್..!

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ಕೆ. ಜಿ. ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಗಲಭೆಯ ಪ್ರಕರಣದಲ್ಲಿ ಪೊಲೀಸ್ ಸಿಬ್ಬಂದಿಗಳು ಬೈಕ್ ಗಳನ್ನು ಕಳೆದುಕೊಂಡಿದ್ದು ಇಂದು ಗೃಹ ಇಲಾಖೆ ಹಾಗೂ ಟಿ.ವಿ.ಎಸ್. ಕಂಪನಿ ವತಿಯಿಂದ ಬೈಕ್ ಕಳೆದುಕೊಂಡ ಸಿಬ್ಬಂದಿಗಳಿಗೆ ನೂತನ ಟಿವಿಎಸ್ ಅಪಾಚಿ ಆರ್.ಟಿ.ಆರ್ ಬೈಕುಗಳನ್ನು ಹಸ್ತಾಂತರಿಸಲಾಯಿತು. ಗೃಹಸಚಿವ ಬಸವರಾಜ ಬೊಮ್ಮಾಯಿ ಬೈಕ್ ಹಸ್ತಾಂತರಿಸಿದರು.

ಬೆಂಗಳೂರಿನ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಒಟ್ಟು 146 ವಾಹನಗಳು ಸಂಪೂರ್ಣ ಜಖಂಗೊಂಡಿತ್ತು. ಅವುಗಳಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ಬಂದಿದ್ದ ಪೊಲೀಸ್ ಸಿಬ್ಬಂದಿಗಳ 25 ಸ್ವಂತ ದ್ವಿಚಕ್ರವಾಹನಗಳಿದ್ದವು. ಇವುಗಳಲ್ಲಿ ಪೊಲೀಸ್ ಸಿಬ್ಬಂದಿಗಳ 21 ದ್ವಿಚಕ್ರ ವಾಹನಗಳು ಹಾಗೂ 04 ಗೃಹ ರಕ್ಷಕ ಸಿಬ್ಬಂದಿಗಳ ವಾಹನಗಳಾಗಿತ್ತು.

ಗಲಭೆಯಿಂದಾಗಿ ದ್ವಿಚಕ್ರ ವಾಹನಗಳು ಜಖಂಗೊಡಿದ್ದರಿಂದ ಆ ವಾಹನಗಳ ಇನ್ಸುರೆನ್ಸ್ ಸಹ ಕ್ಲೇಮ್ ಆಗುತ್ತಿರಲಿಲ್ಲ. ಇದರಿಂದ ಪೊಲೀಸ್ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಹಾಜರಾಗಲು ಮತ್ತು ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳಿಗೆ ತುಂಬಾ ತೊಂದರೆಯಾಗಿತ್ತು. ಈ ಬಗ್ಗೆ ಟಿ.ವಿ.ಎಸ್ ಕಂಪನಿಯವರೊಂದಿಗೆ ಮನವಿ ಮಾಡಲಾಗಿ, ಟಿ.ವಿ.ಎಸ್ ದ್ವಿಚಕ್ರ ವಾಹನ ಕಂಪನಿಯವರು ಪೊಲೀಸ್ ಸಿಬ್ಬಂದಿಗಳ ಕರ್ತವ್ಯದಲ್ಲಿ ಮನೋಸ್ಥೈರ್ಯ ಹೆಚ್ಚಿಸುವ ಸಲುವಾಗಿ ಸದ್ಬಾವನೆಯಿಂದ ಹಾಗೂ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಈ ಸಿಬ್ಬಂದಿಗಳಿಗೆ ದ್ವಿಚಕ್ರ ನೊಂದಾವಣೆ ಮತ್ತು ಇತರೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ದ್ವಿಚಕ್ರ ವಾಹನಗಳನ್ನು ನೀಡಿದ್ದಾರೆ.

”ನಾವು ಸದಾ ನಿಮ್ಮ ಜೊತೆ | WE ARE WITH YOU” ಎಂಬ ಸಮಾರಂಭವನ್ನು ಐ.ಪಿ.ಎಸ್ ಹಿರಿಯ ಅಧಿಕಾರಿಗಳ ಮೆಸ್ ನಲ್ಲಿ ಹಮ್ಮಿಕೊಂಡು ದ್ವಿಚಕ್ರ ವಾಹನಗಳನ್ನು ದ್ವಿಚಕ್ರ ವಾಹನಗಳನ್ನು ಹಸ್ತಾಂತರಿಸಿರಲಾಯಿತು.

ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಘೋಯಲ್, ಡಿಜಿ &ಐಜಿ ಪ್ರವೀಣ್ ಸೂದ್, ಟಿವಿಎಸ್ ಕಂಪೆನಿ ಮಾರ್ಕೆಟಿಂಗ್ ರಾಜ್ಯ ಉಪಾಧ್ಯಕ್ಷ ಮೇಘಶ್ಯಾಮ್ ದಿಘೋಲ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಬೆಂಗಳೂರು‌ಪೂರ್ವ ಅಪರ ಪೊಲೀಸ್ ಆಯುಕ್ತ ಎಸ್.ಮುರುಗನ್, ಬೆಂಗಳೂರು ಪಶ್ಚಿಮದ ಅಪರ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಹಾಗೂ ಇತರೆ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Comments are closed.